ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ : ತಲೆಮರೆಸಿಕೊಂಡಿದ್ದ ಆರೋಪಿಗಳು ಅರೆಸ್ಟ್

author img

By

Published : Jun 21, 2022, 5:16 PM IST

Updated : Jun 21, 2022, 5:46 PM IST

the-murder-of-a-young-man-for-land-issue-in-kalburgi-3-accused-arrested

ಕಲಬುರಗಿಯ ಅಫಜಲಪುರ ತಾಲೂಕಿನ ಗೌರ್ (ಕೆ) ಗ್ರಾಮದಲ್ಲಿ ಜಮೀನಿನ ವಿಚಾರದಲ್ಲಿ ಯುವಕನೋರ್ವನನ್ನು ಕೊಲೆಗೈದು ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ : ಯುವಕನನ್ನು ಮಾರಾಕಾಸ್ತ್ರಗಳಿಂದ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು‌ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಗಳನ್ನು ಅಫಜಲಪುರ ತಾಲೂಕು ಗೌರ್ (ಕೆ) ಗ್ರಾಮದ ನೀಲಪ್ಪ ಬಂಡೆ, ಮಲ್ಲಿಕಾರ್ಜುನ ಬಂಡೆ ಮತ್ತು ಹನುಮಂತ ಬಂಡೆ ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಶೀಘ್ರವೇ ಬಂಧಿಸುವುದಾಗಿ ಎಸ್ಪಿ ಇಶಾ ಪಂತ್ ತಿಳಿಸಿದ್ದಾರೆ.

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ : ತಲೆಮರೆಸಿಕೊಂಡಿದ್ದ ಆರೋಪಿಗಳು ಅರೆಸ್ಟ್

ಜೂನ್ 16 ರಂದು ಅಫಜಲಪುರ ತಾಲೂಕಿನ ಗೌರ್ (ಕೆ) ಗ್ರಾಮದಲ್ಲಿ ಅಕ್ಷಯಕುಮಾರ ಕ್ಷತ್ರಿಯ(25) ಎಂಬ ಯುವಕನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನ ಕೊಲೆ ನಡೆದಿತ್ತು. ಕೊಲೆಗೈದ ಆರೋಪಿಗಳಾದ ನೀಲಪ್ಪ ಬಂಡೆ ಮತ್ತು ಮಲ್ಲಿಕಾರ್ಜುನ ಬಂಡೆ ಯವರಿಗೆ ಸೇರಿದ ಜಮೀನನ್ನು ಸಂಜೀವಕುಮಾರ ಉಕ್ಕಲಿ ಎಂಬಾತ ಖರೀದಿಸಿದ್ದ. ಈ ನಡುವೆ ಆರೋಪಿಗಳು ಹೊಲವನ್ನು ವಾಪಸ್ ಕೊಡುವಂತೆ ತಗಾದೆ ತೆಗೆದಿದ್ದರು.

ಈ ನಡುವೆ ಸಂಜೀವ್ ಕುಮಾರ ತಾನು ಖರೀದಿ ಮಾಡಿದ್ದ ಹೊಲದಲ್ಲಿದ್ದ ಶೆಡ್ ತೆರವುಗೊಳಿಸಲು ರಮೇಶ ಎಂಬಾತನಿಗೆ ಹತ್ತು ಸಾವಿರ ರೂ. ಕೊಟ್ಟಿದ್ದ. ಹಣ ಪಡೆದ ರಮೇಶ ಶೆಡ್ ತೆರವುಗೊಳಿಸಲು ಸ್ನೇಹಿತ ಅಕ್ಷಯನನ್ನು ಜೊತೆಗೆ ಕರೆದುಕೊಂಡು ಹೋಗಿದ್ದ. ಹೊಲದಲ್ಲಿ ಶೆಡ್ ತೆರವು ಮಾಡಲೆಂದು ಹೋಗಿದ್ದ ರಮೇಶ ಹಾಗೂ ಅಕ್ಷಯ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದು, ರಮೇಶ ತಪ್ಪಿಸಿಕೊಂಡರೆ ಅಕ್ಷಯನು ಅವರ ಕೈಯಲ್ಲಿ ಸಿಕ್ಕಿ ಕೊಲೆಗೀಡಾಗಿದ್ದ. ಘಟನಾ ಸ್ಥಳಕ್ಕೆ ಎಸ್​​ಪಿ ಇಶಾ ಪಂತ್​​ ಸೇರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ‌ ಪರಿಶೀಲನೆ‌ ನಡೆಸಿದ್ದರು. ಧರ್ಮಾಪುರ ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಓದಿ : ಅಂಗನವಾಡಿಯಲ್ಲಿ ಬಿಸಿ ಗಂಜಿ ಬಿದ್ದು ಅಡುಗೆ ಸಹಾಯಕಿ, ಮಕ್ಕಳಿಗೆ ಗಾಯ

Last Updated :Jun 21, 2022, 5:46 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.