ETV Bharat / state

ಭಾರತ್​ ಬಂದ್​ಗೆ ಕಲಬುರಗಿಯಲ್ಲಿ ಅನೇಕ ಸಂಘಟನೆಗಳಿಂದ ಬೆಂಬಲ

author img

By

Published : Sep 26, 2021, 5:20 PM IST

Kalburgi
ಕಲಬುರಗಿ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಪರ ಸಂಘಟನೆಗಳು ಕರೆ ಕೊಟ್ಟಿರುವ ಭಾರತ್​ ಬಂದ್​ಗೆ ಕಲಬುರಗಿಯಲ್ಲಿ ಅನೇಕ ಸಂಘಟನೆಗಳು ಬೆಂಬಲ ಸೂಚಿಸಿವೆ.

ಕಲಬುರಗಿ: ಜಿಲ್ಲೆಯ ರೈತ ಸಂಘ, ಹಸಿರು ಸೇನೆ‌, ಆರ್​ಕೆಎಸ್ ಸಂಘ, ಜನವಾದಿ ಮಹಿಳಾ ಸಂಘಟನೆ, ಜಿಲ್ಲಾ ಕಾಂಗ್ರೆಸ್ ಕಮಿಟಿ, ಕನ್ನಡಪರ, ದಲಿತಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಆಟೋ ಚಾಲಕರ ಸಂಘಟನೆಗಳು ಸೇರಿದಂತೆ ಸುಮಾರು 18ಕ್ಕೂ ಹೆಚ್ಚು ಸಂಘಟನೆಗಳು ಬಂದ್ ಕರೆಗೆ ಬೆಂಬಲ ನೀಡಿವೆ.

​ ಬಂದ್​ಗೆ ಕಲಬುರಗಿಯಲ್ಲಿ ಅನೇಕ ಸಂಘಟನೆಗಳಿಂದ ಬೆಂಬಲ

ಹೋರಾಟಗಾರರು ಬೆಳಿಗ್ಗೆ 06 ಗಂಟೆಗೆ ನಗರದ ಕೆಎಎಸ್​ಆರ್​​ಟಿಸಿ ಬಸ್ ನಿಲ್ದಾಣದಿಂದ ಪ್ರತಿಭಟನೆ ಆರಂಭ ಮಾಡಲಿದ್ದು, ನಗರ ಪ್ರವೇಶ ಮಾಡುವ ರಿಂಗ್ ರಸ್ತೆಗಳನ್ನು ನಾಕಾಬಂದಿ ಮಾಡಲಾಗುವುದು. ಆಟೋ ಚಾಲಕ ಸಂಘ, ದಾಲಮೀಲ್ ಮಾಲೀಕರ ಸಂಘ, ವರ್ತಕರು ಸೇರಿದಂತೆ ಅನೇಕ ವ್ಯಾಪಾರಸ್ಥರು ಬಂದ್​ಗೆ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ಶರಣಬಸಪ್ಪ ಮಮ್ಮಶೆಟ್ಟಿ ಮಾಹಿತಿ ನೀಡಿದರು.

ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕರೆ ಕೊಟ್ಟಿರುವ ಬಂದ್​​​ನಲ್ಲಿ ಕಾಂಗ್ರೆಸ್‌ ಸಕ್ರಿಯವಾಗಿ ಪಾಲ್ಗೊಳ್ಳಲ್ಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಕಚೇರಿಯಿಂದ ಮೆರವಣಿಗೆ ಆರಂಭಿಸಿ ನಗರದ ಗಂಜ್ ಪ್ರದೇಶ, ಆಳಂದ್ ಚಕ್​ಪೋಸ್ಟ್​​​, ಬಸ್ ನಿಲ್ದಾಣ, ಸೂಪರ್ ಮಾರ್ಕೆಟ್ ಸೇರಿದಂತೆ ಹಲವೆಡೆ ಸಂಚರಿಸಿ ಬಂದ್ ಆಚರಣೆ ಮಾಡಲಾಗುವುದು ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಶಾಸಕ ಬಿ‌.ಆರ್​.ಪಾಟೀಲ್ ಹೇಳಿದರು.

ಬಂದ್ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ‌ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಇಬ್ಬರು ಡಿಸಿಪಿ, ಐವರು ಎಸಿಪಿ, 17 ಜನ ಪೊಲೀಸ್ ಇನ್ಸ್​​​ಪೆಕ್ಟರ್, 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸೇರಿದಂತೆ ಸಿಎಆರ್ 6 ಬೆಟಾಲಿಯನ್, ಕೆಎಸ್​​​ಆರ್​​​ಪಿ 3 ತುಕಡಿಗಳನ್ನು ನಿಯೋಜನೆ‌ ಮಾಡಲಾಗಿದೆ.

ಇದನ್ನೂ ಓದಿ: ರೈತರಿಂದ ಭಾರತ್ ಬಂದ್​: ನಾಳೆ ಏನಿರುತ್ತೆ, ಏನಿರಲ್ಲ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.