ETV Bharat / state

ಗುಜರಾತ್ ಗೆಲುವಿಗೆ ಮನಿ, ಮಸಲ್, ಮೋದಿ‌ ಕಾರಣ ಅಭಿವೃದ್ದಿಯಲ್ಲ: ಪ್ರಿಯಾಂಕ್ ಖರ್ಗೆ

author img

By

Published : Dec 8, 2022, 4:03 PM IST

Updated : Dec 8, 2022, 4:15 PM IST

mla priyank kharge criticized-that-bjp-cannot-win-in-the-name-of-development
ಗುಜರಾತ್ ಗೆಲುವಿಗೆ ಮನಿ, ಮಸಲ್, ಮೋದಿ‌ ಪ್ರಭಾವ ಕಾರಣ: ಪ್ರಿಯಾಂಕ್ ಖರ್ಗೆ

ಗುಜರಾತ್​ನಲ್ಲಿ 27 ವರ್ಷಗಳಿಂದ ಮನಿ, ಮಸಲ್​, ಮೋದಿ ಪ್ರಭಾವ ಕೆಲಸ ಮಾಡುತ್ತಿದೆ. ಅಭಿವೃದ್ದಿ ಹೆಸರಿನಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ- ಶಾಸಕ ಪ್ರಿಯಾಂಕ್​ ಖರ್ಗೆ.

ಕಲಬುರಗಿ: ಗುಜರಾತ್ ಗೆಲುವು ಮೋದಿ ಸಾಧನೆ‌ಯ ಗೆಲುವಲ್ಲ. 27 ವರ್ಷಗಳಿಂದ ಮನಿ, ಮಸಲ್ ಮತ್ತು ಮೋದಿ ಪ್ರಭಾವ ಅಲ್ಲಿ ಕೆಲಸ ಮಾಡಿದೆ. ಮತದಾರರಿಗೆ ಹೆದರಿಸಿ, ಹಣ ಖರ್ಚು ಮಾಡಿ ಪ್ರಭಾವ ಬೀರಿ ಗೆದ್ದು ಬಂದಿದ್ದಾರೆಯೇ ಹೊರತಾಗಿ ಅಭಿವೃದ್ಧಿ ಹೆಸರಲ್ಲಿ ಗೆಲ್ಲಲು ಅವರಿಗೆ ಸಾಧ್ಯವಿಲ್ಲ ಎಂದು ಶಾಸಕ ಪ್ರಿಯಾಂಕ್​ ಖರ್ಗೆ ಟೀಕಿಸಿದರು.

ಗುಜರಾತ್​ನಲ್ಲಿ 80 ಸೀಟ್​ ಬರುವ ನಿರೀಕ್ಷೆ ನಮ್ಮದಿತ್ತು. ಆದರೆ ನಿರೀಕ್ಷೆಗಿಂತ ಕಡಿಮೆ ಸಾಧನೆ ಆಗಿದೆ.‌ ಲೀಡ್ ನೋಡಿಕೊಂಡು ಪಕ್ಷ ಸಂಘಟನೆಯಲ್ಲಿ ಏನು ತಪ್ಪಾಗಿದೆ, ಹೇಗೆ ಸರಿಪಡಿಸಬೇಕು ಎಂದು ಯೋಚನೆ ಮಾಡುತ್ತೇವೆ. ಗುಜರಾತ್ ಮತ್ತು ಯುಪಿ ಬಿಟ್ಟರೆ ಉಳಿದ ಕಡೆಗಳಲ್ಲಿ ಬಿಜೆಪಿಯವರು ಕುದುರೆ ವ್ಯಾಪಾರ ಮಾಡಿಯೇ ಅಧಿಕಾರಕ್ಕೆ ಬಂದಿದ್ದಾರೆ. ನಾವು ಸೈದ್ದಾಂತಿಕವಾಗಿ ನಡೆಯುತ್ತೇವೆ ಎಂದರು.

ಪ್ರಿಯಾಂಕ್​ ಖರ್ಗೆ

ಬಿಜೆಪಿಯವರು ಸ್ವಂತ ಶಾಸಕರನ್ನೂ ಮಾರಾಟ ಮಾಡಲು ರೆಡಿ ಇದ್ದಾರೆ. ಬೇರೆ ಪಕ್ಷದ ಶಾಸಕರನ್ನು ಖರೀದಿ ಮಾಡಲು ಸಿದ್ದರಿದ್ದಾರೆ, ಮೋದಿ ಮ್ಯಾಜಿಕ್ ಏನಿದ್ದರೂ ಗುಜರಾತ್‌ನಲ್ಲಿ ಮಾತ್ರ, ಕರ್ನಾಟಕದಲ್ಲಿ ಇಲ್ಲ. ಗುಜರಾತ್ ಚುನಾವಣೆಯ ಪರಿಣಾಮ ಕರ್ನಾಟಕದ ಮೇಲಾಗದು. ಅಲ್ಲಿನ ವಿಷಯ, ಸಮಸ್ಯೆಗಳೇ ಬೇರೆ. ಇಲ್ಲಿನ ವಿಷಯ, ಸಮಸ್ಯೆಗಳೇ ಬೇರೆ ಎಂದು ಹೇಳಿದರು.

ಇದನ್ನೂ ಓದಿ: ರಾಜ್ಯದ ಮೇಲೆ ಗುಜರಾತ್ ಫಲಿತಾಂಶ ಪರಿಣಾಮ ಬೀರಲಿದೆ: ಸಿಎಂ

Last Updated :Dec 8, 2022, 4:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.