ETV Bharat / state

ಈಗಲಾದರೂ ಇಡೀ ಜಿಲ್ಲೆಯ ಅಭಿವೃದ್ಧಿ ಮಾಡ್ತೀನಿ ಎಂದು ಹೇಳಿದ್ದಾರಾ? : ಸಿದ್ದರಾಮಯ್ಯಗೆ ಹೆಚ್​ಡಿಕೆ ಟಾಂಗ್​​

author img

By

Published : Jan 9, 2023, 7:00 PM IST

former-minister-hd-kumarswamy-slams-siddaramaiah
ಈಗಲಾದರೂ ಇಡೀ ಜಿಲ್ಲೆಯ ಅಭಿವೃದ್ಧಿ ಮಾಡ್ತೀನಿ ಎಂದು ಹೇಳಿದ್ದಾರಾ ? : ಸಿದ್ದರಾಮಯ್ಯಗೆ ಹೆಚ್​ಡಿಕೆ ಟಾಂಗ್​​

ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ - ಸಿದ್ದರಾಮಯ್ಯಗೆ ಟಾಂಗ್​ ನೀಡಿದ ಹೆಚ್​ಡಿಕೆ - ಕೋಲಾರದಲ್ಲಿ ಜೆಡಿಎಸ್​ ಅಭ್ಯರ್ಥಿಗೆ ಗೆಲುವು

ಈಗಲಾದರೂ ಇಡೀ ಜಿಲ್ಲೆಯ ಅಭಿವೃದ್ಧಿ ಮಾಡ್ತೀನಿ ಎಂದು ಹೇಳಿದ್ದಾರಾ ? : ಸಿದ್ದರಾಮಯ್ಯಗೆ ಹೆಚ್​ಡಿಕೆ ಟಾಂಗ್​​

ಕಲಬುರಗಿ: ಇದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕೊನೆ ಚುನಾವಣೆ. ಚುನಾವಣೆ ಮುಗಿದ ಮೇಲೆ ಮತ್ತೆ ಕೋಲಾರಕ್ಕೆ ಬೈ ಬೈ ಹೇಳಿ ಹೋಗುತ್ತಾರೆ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ. ಜಿಲ್ಲೆಯ ಹಿರೊಳ್ಳಿಯಲ್ಲಿ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧೆ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರು ಎಲ್ಲಿ ಬೇಕಾದರೂ ನಿಲ್ಲಬಹುದು. ಕೋಲಾರದಲ್ಲಿ ನಿಲ್ಲುವುದಕ್ಕೆ ನಮ್ಮ ಸ್ವಾಗತ ಇದೆ. ಐದು ವರ್ಷದಲ್ಲಿ ಮಾಡಬೇಕಾದ ಅಭಿವೃದ್ಧಿಯಂತೂ ಮಾಡಲಿಲ್ಲ. ಈಗಲಾದರೂ ಇಡೀ ಜಿಲ್ಲೆಯ ಅಭಿವೃದ್ಧಿ ಮಾಡ್ತೀನಿ ಎಂದು ಹೇಳಿದ್ದಾರಾ? ಎಂದು ವ್ಯಂಗ್ಯವಾಡಿದರು.

ಕೋಲಾರದಲ್ಲಿ ಜೆಡಿಎಸ್​ ಅಭ್ಯರ್ಥಿ ಗೆಲ್ಲುತ್ತಾರೆ : ನಾವು ಗೆಲ್ಲಲು ಹೋರಾಟ ಮಾಡುತ್ತೇವೆ. ಅವರು ಗೆಲ್ಲಲು ಅವರು ಹೋರಾಟ ಮಾಡುತ್ತಾರೆ. ಕೋಲಾರದಲ್ಲಿ ಜನತೆ ಆಶೀರ್ವಾದದಿಂದ ನಮ್ಮ ಜೆಡಿಎಸ್ ಅಭ್ಯರ್ಥಿ ಗೆದ್ದು ಬರಲಿದ್ದಾರೆ. ನಮ್ಮ ಅಭ್ಯರ್ಥಿ ಗೆಲ್ಲುವ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸ ಇದೆ ಎಂದು ಹೇಳಿದರು. ಇನ್ನು ಐದು ಲಕ್ಷ ಕೋಟಿ ನೀರಾವರಿಗೆ ಕೊಡುವುದಾಗಿ ಹೇಳುವ ಸಿದ್ದರಾಮಯ್ಯ ಅವರು, ಐದು ವರ್ಷ ಅಧಿಕಾರದಲ್ಲಿದ್ದಾಗ ಏನು ಮಾಡಿದರು?.ನೀರೇ ಕೊಡದವರು ಮಜ್ಜಿಗೆ ಕೊಡ್ತಾರಾ? ಎಂದು ಟಾಂಗ್ ನೀಡಿದರು.

ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ : ಮಾಜಿ ಸಿಎಂ ಸಿದ್ದರಾಮಯ್ಯ ಅಂತಿಮವಾಗಿ ತಮ್ಮ ಕ್ಷೇತ್ರವನ್ನು ಘೋಷಿಸಿಕೊಂಡಿದ್ದಾರೆ. ಕೋಲಾರದಲ್ಲಿ ಕಾಂಗ್ರೆಸ್​ ಪಕ್ಷ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ. ಎಲ್ಲರೂ ಕೋಲಾರದಿಂದ ಸ್ಪರ್ಧೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಕೆ.ಹೆಚ್​.ಮುನಿಯಪ್ಪ ಸೇರಿದಂತೆ ಎಲ್ಲರೂ ಒತ್ತಾಯ ಮಾಡಿದ್ದಾರೆ ಎಂದು ಹೇಳಿದರು. ಇನ್ನು ಕ್ಷೇತ್ರದ ಜನರು ನಮಗೆ ಮುಖ್ಯ. ಆಮೇಲೆ ನಾಯಕರುಗಳು. ಜನರ ಆಶೀರ್ವಾದ ಇದ್ದರೆ ಮಾತ್ರ ರಾಜಕೀಯದಲ್ಲಿ ಉಳಿಯಲು ಸಾಧ್ಯ. ಕೆಲವು ದಿನಗಳ ಹಿಂದೆ ಕೋಲಾರಕ್ಕೆ ಬಂದಿದ್ದೆ. ಎಲ್ಲ ಕಡೆ ಕೋಲಾರ ಕ್ಷೇತ್ರದಿಂದ ನಿಲ್ಲಬೇಕೆಂದು ಜನರು ಒತ್ತಾಯಿಸಿದರು. ಹಾಗಾಗಿ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಅವರು ಹೇಳಿದ್ದಾರೆ.

ಹೈಕಮಾಂಡ್​ ತೀರ್ಮಾನ ಮಾಡಬೇಕು : ಪಕ್ಷದಲ್ಲಿ ಶಿಸ್ತಿರಬೇಕು, ಹಾಗಾಗಿ ಹೈಕಮಾಂಡ್ ಒಪ್ಪಿಗೆ ನೀಡಬೇಕಾಗುತ್ತದೆ‌. ಎಲ್ಲರಿಗೂ ಇರುವ ರೀತಿ ನನಗೂ ಪ್ರಿವಲೇಜ್ ಇದೆ. ಹೀಗಾಗಿ ಹೈಕಮಾಂಡ್ ಹೇಳಿದ ಹಾಗೆ ನಡೆದುಕೊಳ್ಳಬೇಕಾಗುತ್ತದೆ. ಅಲ್ಲದೆ ತಪ್ಪು ಸಂದೇಶ ಹೋಗಬಾರದು. ನಾನು ಇಲ್ಲಿ ಸ್ಪರ್ಧೆ ಮಾಡಲು ತಯಾರಿದ್ದೇನೆ. ಆದರೆ, ಹೈಕಮಾಂಡ್ ತೀರ್ಮಾನ ಮಾಡಬೇಕು ಎಂದು ಇದೇ ವೇಳೆ ಹೇಳಿದರು.

ಕೆಲವರಿಂದ ನನ್ನ ಬಗ್ಗೆ ಅಪಪ್ರಚಾರ : ನಾನು ಚಾಮುಂಡಿ ಕ್ಷೇತ್ರದಿಂದ ಐದು ಬಾರಿ ಶಾಸಕನಾಗಿದ್ದೆ. ಎರಡು ಬಾರಿ ವರುಣಾ, ಒಂದು ಬಾರಿ ಬಾದಾಮಿ ಕ್ಷೇತ್ರದಿಂದ ಗೆದ್ದಿದ್ದೇನೆ. ನನ್ನನ್ನು ಕಂಡರೆ ಆಗದವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಇಲ್ಲ, ಕ್ಷೇತ್ರ ಹುಡುಕಾಟದಲ್ಲಿದ್ದಾರೆ ಎಂದು ಟೀಕಿಸುತ್ತಾರೆ. ನನಗೆ ಹಳೇ ಕ್ಷೇತ್ರ ವರುಣಾದಿಂದಲೂ ನಿಲ್ಲಬೇಕೆಂದು ಒತ್ತಾಯ ಮಾಡುತ್ತಿದ್ದಾರೆ‌. ಬಾದಾಮಿ ದೂರ ಆಗಿದೆ. ಬರಲು ಕಷ್ಟ ಎಂದಾಗ, ಬಾದಾಮಿ ಕ್ಷೇತ್ರದ ಜನರು ಹೆಲಿಕಾಪ್ಟರ್ ತೆಗೆದುಕೊಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದರು.

ಶಾಸಕನಾದ ಮೇಲೆ ಕೋಲಾರಕ್ಕೆ ವಿಶೇಷ ಆದ್ಯತೆ : ಆದರೆ, ಈಗ ಮಾತು ಕೊಡುತ್ತೇನೆ. ಪ್ರತಿ ವಾರ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ. ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ಕೂಡ ನನ್ನನ್ನು ಭೇಟಿ ಮಾಡಬಹುದು. ಲೀಡರ್​ಗಳ ಮೂಲಕ ಬರಬೇಕೆಂದು ಏನಿಲ್ಲ. ಇದು ನನ್ನ ಸಂಪ್ರದಾಯ. ಸಾಮಾನ್ಯರಲ್ಲಿ ಸಾಮಾನ್ಯರು ಸಹ ನನ್ನ ಬಳಿ ನೇರವಾಗಿ ಬಂದು ಕಷ್ಟ ಸುಖ ಹೇಳಿಕೊಳ್ಳಬಹುದು. ನಿಮ್ಮೆಲ್ಲರ ಆಶೀರ್ವಾದಿಂದ ಶಾಸಕನಾದ ಮೇಲೆ ಕೋಲಾರಕ್ಕೆ ವಿಶೇಷ ಆದ್ಯತೆ ನೀಡುತ್ತೇನೆ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುತ್ತೇನೆ ಎಂದು ಭರವಸೆ ಕೂಡಾ ನೀಡಿದ್ದಾರೆ. ಹೀಗಾಗಿ ಪ್ರತಿಪಕ್ಷಗಳು ಈಗ ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ : ಕೋಲಾರದಿಂದಲೇ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ ಸಿದ್ದರಾಮಯ್ಯ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.