ETV Bharat / state

ಕಲಬುರಗಿಯ ಹಲವೆಡೆ ಭಾರಿ ಸದ್ದು : ಆತಂಕದಲ್ಲಿ ಜನರು

author img

By

Published : Aug 20, 2021, 10:58 PM IST

earthquake-in-kalburgi
ಆತಂಕದಲ್ಲಿ ಜನ

ಇಂದು ಮುಂಜಾನೆ ಕೂಡ ಗಡಿಕೇಶ್ವರ ಗ್ರಾಮದಲ್ಲಿ ಸದ್ದು ಕೇಳಿ ಬಂದಿತ್ತು. ಭೂಮಿಯಿಂದ ಬಂದ ಸದ್ದಿಗೆ ಜನ ಕಂಗಾಲಾಗಿದ್ದಾರೆ. ತೆಲಂಗಾಣದಲ್ಲಿನ ಭೂಕ‌ಂಪನದ ಎಫೆಕ್ಟ್‌ಗೆ ಗಡಿಭಾಗದ ಚಿಂಚೋಳಿ ಹಾಗೂ ಕಾಳಗಿ ತಾಲೂಕಿನ ಹಲವೆಡೆ ಭೂಕಂಪನ ಅನುಭವವಾಗಿದೆ ಎನ್ನಲಾಗುತ್ತಿದೆ..

ಕಲಬುರಗಿ : ಜಿಲ್ಲೆಯ ಹಲವೆಡೆ ಭಾರಿ ಸದ್ದು ಹಾಗೂ ಭೂಮಿ ಕಂಪಿಸಿದ ಅನುಭವವಾಗಿದೆ. ಹೀಗಾಗಿ, ರಾತ್ರಿ ಇಡೀ ಎಚ್ಚರಿಕೆಯಿಂದ ಇರುವಂತೆ ಗ್ರಾಮದಲ್ಲಿ ಡಂಗೂರು ಸಾರಲಾಗಿದೆ.

ಕಲಬುರಗಿಯ ಹಲವೆಡೆ ಭಾರಿ ಸದ್ದು..

ಚಿಂಚೋಳಿ ತಾಲೂಕಿನ ಗಡಿಕೇಶ್ವರ, ಹೊಸಳ್ಳಿ, ಕೆರಳ್ಳಿ, ಭಂಟನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಹಾಗೂ ಕಾಳಗಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಭೂ ಕಂಪನ ಅನುಭವವಾಗಿದೆ. ಏಳು ಗಂಟೆ ಸಮಯದಲ್ಲಿ ಎರಡು ಬಾರಿ ಭಾರಿ ಸದ್ದು ಕೇಳಿ ಬಂದಿದೆ. ಇದರಿಂದ ಜನರು ಆತಂಕದಲ್ಲಿದ್ದಾರೆ.

ಇಂದು ಮುಂಜಾನೆ ಕೂಡ ಗಡಿಕೇಶ್ವರ ಗ್ರಾಮದಲ್ಲಿ ಸದ್ದು ಕೇಳಿ ಬಂದಿತ್ತು. ಭೂಮಿಯಿಂದ ಬಂದ ಸದ್ದಿಗೆ ಜನ ಕಂಗಾಲಾಗಿದ್ದಾರೆ. ತೆಲಂಗಾಣದಲ್ಲಿನ ಭೂಕ‌ಂಪನದ ಎಫೆಕ್ಟ್‌ಗೆ ಗಡಿಭಾಗದ ಚಿಂಚೋಳಿ ಹಾಗೂ ಕಾಳಗಿ ತಾಲೂಕಿನ ಹಲವೆಡೆ ಭೂಕಂಪನ ಅನುಭವವಾಗಿದೆ ಎನ್ನಲಾಗುತ್ತಿದೆ.

ಭೂಕಂಪನ ಶಬ್ಧಕ್ಕೆ ಮನೆಯಲ್ಲಿನ ವಸ್ತುಗಳು ಕೆಳಗೆ ಬೀಳೋ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿವೆ. ಗಡಿ ಭಾಗದ ಜನರು ತೀವ್ರ ಕಟ್ಟೆಚ್ಚರದಿಂದಿರಲು ಅಧಿಕಾರಿಗಳು ಕೂಡ ಸೂಚನೆ ನೀಡಿದ್ದಾರೆ. ವಿವಿಧೆಡೆ ಡಂಗೂರ ಸಾರಿ ಅಧಿಕಾರಿಗಳು ಎಚ್ಚರಿಕೆ ನೀಡ್ತಿದ್ದಾರೆ.

ಓದಿ: ಬೆಂಗಳೂರು: ಹಾಡಹಗಲೇ ಚಾಕುವಿನಿಂದ ಕತ್ತು ಸೀಳಿ ದಂಪತಿಯ ಬರ್ಬರ ಹತ್ಯೆ.. 4 ವಿಶೇಷ ತನಿಖಾ ತಂಡ ರಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.