ETV Bharat / state

ಕಲ್ಯಾಣ ಕರ್ನಾಟಕ ಉತ್ಸವ: ಕಲಬುರಗಿಯಲ್ಲಿ 'ಡಾಗ್ ಶೋ' ಸಂಭ್ರಮ

author img

By

Published : Feb 28, 2023, 7:17 AM IST

Dog show in kalburgi
ಕಲಬುರಗಿಯಲ್ಲಿ 'ಡಾಗ್ ಶೋ' ಸಂಭ್ರಮ

ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಭಾನುವಾರ ಗುಲ್ಬರ್ಗ ವಿಶ್ವವಿದ್ಯಾಲಯದ ಆವರಣದಲ್ಲಿ ಶ್ವಾನಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಕಲಬುರಗಿ: ಒಂದಕ್ಕಿಂತ ಒಂದು ಮುದ್ದು ಮುದ್ದಾದ ನಾಯಿ ಮರಿಗಳು. ಅವುಗಳನ್ನು ಎತ್ತಿ ಮುದ್ದಾಡುತ್ತಿರುವ ಶ್ವಾನ ಪ್ರಿಯರು. ಭಾನುವಾರ ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದ ಸಂಭ್ರಮದಲ್ಲಿ ಕಂಡು ಬಂದ ದೃಶ್ಯವಿದು. ಈ ಬಗೆಬಗೆಯ ಶ್ವಾನಗಳನ್ನು ನೋಡಲು ಜಿಲ್ಲೆಯ ಸಾವಿರಾರು ಜನ ಆಗಮಿಸಿದ್ದರು. ಕಲಬುರಗಿ ಜನರಿಗೆ ಶ್ವಾನ ಪ್ರದರ್ಶನ ಮುದ ನೀಡಿತು. ಕಲ್ಯಾಣ ಕರ್ನಾಟಕ ಉತ್ಸವ ಅಂವಾಗಿ ಭಾನುವಾರ ಗುಲ್ಬರ್ಗ ವಿಶ್ವವಿದ್ಯಾಲಯದ ಆವರಣದಲ್ಲಿ ಶ್ವಾನಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

Dog show in kalburgi
ಕಲಬುರಗಿಯಲ್ಲಿ 'ಡಾಗ್ ಶೋ' ಸಂಭ್ರಮ

ಕಳೆದ ಶುಕ್ರವಾರದಿಂದ ಭಾನುವಾರ ಮಧ್ಯರಾತ್ರಿವರೆಗೆ ಕಲಬುರಗಿ ನಗರದ ಗುಲ್ಬರ್ಗ ವಿಶ್ವವಿದ್ಯಾಲಯ ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಸಂಭ್ರಮ ಕಳೆಗಟ್ಟಿತ್ತು. ಉತ್ಸವದಲ್ಲಿ ಆಯೋಜನೆ ಮಾಡಲಾಗಿದ್ದ ವಿವಿಧ ಸ್ಪರ್ಧೆಗಳು ಹಾಗೂ ಪ್ರದರ್ಶನಗಳು ಜನರ ಗಮನ ಸೆಳೆದವು. ಅದರಂತೆ ಗುಲ್ಬರ್ಗ ವಿಶ್ವವಿದ್ಯಾಲಯದ ಇಂಡೋರ್ ಸ್ಟೇಡಿಯಂನಲ್ಲಿ ಅಪರೂಪದ 'ಡಾಗ್ ಶೋ' ಆಯೋಜನೆ ಮಾಡಲಾಗಿತ್ತು. ಜಿಲ್ಲಾ ಪಂಚಾಯತ್, ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವೆ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಶ್ವಾನ ಪ್ರದರ್ಶನವು ಪ್ರಾಣಿ ಪ್ರಿಯರನ್ನು ಆಕರ್ಷಿಸಿತು.

Dog show in kalburgi
ಕಲಬುರಗಿಯಲ್ಲಿ 'ಡಾಗ್ ಶೋ' ಸಂಭ್ರಮ

ಗಮನ ಸೆಳೆದ ವಿವಿಧ ತಳಿಯ ನಾಯಿಗಳು: ಇದೇ ಮೊದಲ ಬಾರಿಗೆ ಕಲಬುರಗಿಯಲ್ಲಿ ನಡೆದ ಡಾಗ್ ಶೋನಲ್ಲಿ ಕರ್ನಾಟಕದ ಮುಧೋಳ ತಳಿ ಸೇರಿ ಲ್ಯಾಬ್ರಿಡೋ, ಬಿಗಲ್ ತಳಿ, ಗೋಲ್ಡನ್ ರಿಟ್ರಾವೇರ್ ತಳಿ, ಚೀನಾ ದೇಶದ ಚೌಚೌ ತಳಿ, ಡೀಗಲ್ ಫಿಟ್ ಬುಲ್, ಜರ್ಮನ್ ಶಫರ್ಡ್ ಸೇರಿದಂತೆ ದೇಶಿ-ವಿದೇಶಿ ತಳಿಯ 28 ಕ್ಕೂ ಹೆಚ್ಚು ಜಾತಿಯ 150ಕ್ಕೂ ಅಧಿಕ ಶ್ವಾನಗಳು ಪ್ರದರ್ಶನದಲ್ಲಿ ಭಾಗಿಯಾಗಿದ್ದವು.

Dog show in kalburgi
ಕಲಬುರಗಿಯಲ್ಲಿ 'ಡಾಗ್ ಶೋ' ಸಂಭ್ರಮ

ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಿದ ಶ್ವಾನಗಳಿಗೆ ಬಹುಮಾನ ನೀಡಲಾಯಿತು. ಪ್ರಥಮ 20 ಸಾವಿರ, ದ್ವಿತೀಯ 15 ಸಾವಿರ ಹಾಗೂ ತೃತೀಯ ಬಹುಮಾನ 5 ಸಾವಿರ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಶ್ವಾನ ಪ್ರದರ್ಶನದಲ್ಲಿ ಕಲಬುರಗಿ, ರಾಯಚೂರು, ಬೀದರ್, ವಿಜಯಪುರ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ ಶ್ವಾನ ಪ್ರಿಯರು ತಮ್ಮ ನೆಚ್ಚಿನ ಕ್ಯೂಟ್ ಪೆಟ್​​ಗಳೊಂದಿಗೆ ಭಾಗಿಯಾಗಿ ಸಂಭ್ರಮಿಸಿದರು.

ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ವಿಶೇಷವಾಗಿ ಮಕ್ಕಳು, ಮಹಿಯರಿಗಾಗಿ ಮಕ್ಕಳ ಉತ್ಸವ, ಮಹಿಳಾ ಉತ್ಸವ ಆಯೋಜಿಸಲಾಗಿತ್ತು. ವಿವಿ ಆವರಣದ ಬಯಲು ರಂಗಮಂದಿರಲ್ಲಿ ಆಯೋಜಿಸಿದ್ದ ಮಕ್ಕಳ, ಮಹಿಳಾ ಉತ್ಸವದ ರಂಗೋಲಿ, ಚಿತ್ರಕಲೆ, ಬೆಂಕಿ ಇಲ್ಲದೆ ಅಡುಗೆ ಮಾಡುವ ಕ್ವಿಜ್ ಸೇರಿದಂತೆ ವಿವಿಧ ಬಗೆಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಶಾಲಾ- ಕಾಲೇಜು ಮಕ್ಕಳು ಮತ್ತು ಮಹಿಳೆಯರು ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಒಟ್ಟಿನಲ್ಲಿ ಡಾಗ್ ಶೋ, ಮಹಿಳಾ ಹಾಗೂ ಮಕ್ಕಳ ಉತ್ಸವ ಸೇರಿದಂತೆ ವಿವಿಧ ಸ್ಪರ್ಧೆಗಳು ಜನಮನ ಗೆದ್ದಿದ್ದು, ಕಲ್ಯಾಣ ಉತ್ಸವ ಅರ್ಥಪೂರ್ಣವಾಗಿ ಜರುಗಿತು.

ಇದನ್ನೂ ಓದಿ: ಕಲಬುರಗಿಯಲ್ಲಿ ಕಳೆಕಟ್ಟಿದ ಕಲ್ಯಾಣ ಕರ್ನಾಟಕ ಉತ್ಸವ: ವಿಪಿ ಗಾಯನಕ್ಕೆ ಮನಸೋತ ಜನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.