ETV Bharat / state

ಯೋಧನ ಅಂತ್ಯಕ್ರಿಯೆ: ಮಗನ ಅಗಲಿಕೆಯಲ್ಲೂ ಸೇನೆಗೆ ಸೇರಲು ಯುವಕರಿಗೆ ಕರೆಕೊಟ್ಟ ತಂದೆ

author img

By

Published : May 27, 2019, 7:35 PM IST

ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿಯ ಹುತಾತ್ಮ ಯೋಧ ಶಿವಲಿಂಗಪ್ಪ ಅವರ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಮಗನ ಅಗಲಿಕೆ ನೋವಲ್ಲೂ ಮಾಜಿ ಯೋಧನಾಗಿರುವ ತಂದೆ ಯುವಕರಿಗೆ ದೇಶ ಸೇವೆ ಮಾಡುವಂತೆ ಕರೆ ನೀಡಿ ದೇಶಾಭಿಮಾನ ಮೆರೆದಿದ್ದು ಗಮನ ಸೆಳೆಯಿತು.

ತಾತ್ಮ ಯೋಧ ಶಿವಲಿಂಗಪ್ಪರ ಅಂತ್ಯಕ್ರಿಯೆ

ಹಾವೇರಿ: ಶನಿವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಹುತಾತ್ಮನಾಗಿದ್ದ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿಯ ವೀರಯೋಧ ಶಿವಲಿಂಗಪ್ಪ ಅವರ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ ನಡೆಯಿತು. ಯೋಧನ ಅಗಲಿಕೆಯಿಂದ ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿತ್ತು.

ಇಂದು ಪಾರ್ಥಿವ ಶರೀರ ಗ್ರಾಮಕ್ಕೆ ಬರುತ್ತಿದ್ದಂತೆ ಗ್ರಾಮದ ತುಂಬೆಲ್ಲಾ ಶಿವಲಿಂಗಪ್ಪ ಅಮರ್​ ರಹೇ.. ಅಮರ್​ ರಹೇ ಎಂಬ ಘೋಷಣೆ ಮೊಳಗಿತ್ತು. ಶಿವಲಿಂಗಪ್ಪ ದೇಶಕ್ಕಾಗಿ ಪ್ರಾಣ ಬಿಟ್ಟಿದ್ದು ಅವರ ನೇತ್ರದಾನ ಮಾಡಿರುವುದು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಪ್ರೇರಣೆಯಾಯಿತು.

ರವಿವಾರ ರಾತ್ರಿ ದೆಹಲಿಯಿಂದ ಸೇನಾ ಗೌರವದೊಂದಿಗೆ ಗೋವಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಶಿವಲಿಂಗಪ್ಪರ ಮೃತದೇಹವನ್ನು ಬೆಳಗಾವಿಗೆ ತಂದು ಅಲ್ಲಿಂದ ಹಾವೇರಿಗೆ ತರಲಾಯಿತು. ಹಾವೇರಿಯಲ್ಲಿರುವ ಅವರ ಮನೆಯಲ್ಲಿ ಪೂಜೆ ಸಲ್ಲಿಸಿದ ನಂತರ ಪಾರ್ಥಿವ ಶರೀರದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕೆಲಕಾಲ ಶಿವಲಿಂಗಪ್ಪ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಟ್ಟು, ಬಳಿಕ ಮೃತದೇವವನ್ನು ಹುಟ್ಟೂರು ಗುಂಡೇನಹಳ್ಳಿಗೆ ತರಲಾಯಿತು. ಅಲ್ಲಿ ಅವರು ಕಲಿತ ಶಾಲೆಯಲ್ಲಿ ಅಂತಿಮ ದರ್ಶನಕ್ಕಿಡಲಾಗಿತ್ತು. ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ವಿವಿಧ ಅಧಿಕಾರಿಗಳು ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.

ತಾತ್ಮ ಯೋಧ ಶಿವಲಿಂಗಪ್ಪರ ಅಂತ್ಯಕ್ರಿಯೆ

ಶಿವಲಿಂಗಪ್ಪರ ತಂದೆ ವೀರಭದ್ರಪ್ಪ ಸಹ ಸೇನೆಯಲ್ಲಿ 30 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಇವರಿಗೆ ಮೂವರು ಮಕ್ಕಳಿದ್ದಾರೆ. ಇವರಲ್ಲಿ ಹಿರಿಯವನಾದ ಶಿವಲಿಂಗಪ್ಪ ಹುತಾತ್ಮನಾಗಿದ್ದಾರೆ. ಇನ್ನೋರ್ವ ಮಗ ಖಾಸಗಿ ಕೆಲಸ ಮಾಡುತ್ತಿದ್ದು, ಮಗಳು ಬಿಎ ಓದುತ್ತಿದ್ದಾಳೆ.

ಈ ವೇಳೆ ಮಾತನಾಡಿದ ಯೋಧನ ತಂದೆ ವೀರಭದ್ರಪ್ಪ ಹಾಗೂ ತಾಯಿ ನಾಗರತ್ನ, ಬೇರೆ ತಾಯಂದಿರು ಈ ಘಟನೆಯಿಂದ ನೊಂದು ತಮ್ಮ ಮಕ್ಕಳನ್ನ ಸೇನೆಗೆ ಸೇರಿಸಲು ಹಿಂಜರಿಯಬೇಡಿ ಎಂದು ಮನವಿ ಮಾಡಿದರು. ಪಾರ್ಥಿವ ಶರೀರದ ಮೆರವಣಿಗೆ ನಂತರ ಸಕಲ ಸರ್ಕಾರಿ ಗೌರವ ಸಲ್ಲಿಸಿ, ಊರ ಪಕ್ಕದಲ್ಲಿರುವ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

Intro:Ftpyalli script kalisalagideBody:Ftpyalli script kalisalagideConclusion:Ftpyalli script kalisalagide

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.