ETV Bharat / state

ಹಿರೇಕೇರೂರಲ್ಲಿ 461 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ: ಸಚಿವ ಬಿ‌ ಸಿ ಪಾಟೀಲ್

author img

By

Published : Jan 25, 2023, 3:31 PM IST

Minister BC Patil
ಸಚಿವ ಬಿ‌.ಸಿ ಪಾಟೀಲ್

ಹಿರೇಕೇರೂರು ತಾಲೂಕಿಗೆ 1000 ಕೋಟಿಗೂ ಹೆಚ್ಚು ಅನುದಾನ ತಂದಿದ್ದೇನೆ- ಕ್ಷೇತ್ರಕ್ಕೆ 6 ನೀರಾವರಿ ಯೋಜನೆ ತಂದಿರುವ ತೃಪ್ತಿ ನನಗಿದೆ- ಸಚಿವ ಬಿ‌ ಸಿ ಪಾಟೀಲ್

ಮಾಜಿ ಶಾಸಕ ಯು ಬಿ ಬಣಕಾರ್​ಗೆ ಸಚಿವ ಬಿ‌.ಸಿ ಪಾಟೀಲ್ ಟಾಂಗ್​

ಹಾವೇರಿ: ಜಿಲ್ಲೆಯ ಹಿರೇಕೇರೂರು ಕ್ಷೇತ್ರದಲ್ಲಿ ಇಂದು 461 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದೇವೆ. ಜತೆಗೆ 38 ಕೋಟಿ ರೂ. ಮಡ್ಲೂರು ಏತ ನೀರಾವರಿ ಯೋಜನೆ ಲೋಕಾರ್ಪಣೆ ಮಾಡಲಾಗುತ್ತದೆ. ಮುಖ್ಯಮಂತ್ರಿ ಬಸವರಾ ಬೊಮ್ಮಾಯಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಸಚಿವ ಬಿ‌.ಸಿ ಪಾಟೀಲ್ ಹೇಳಿದರು. ಹಿರೇಕೇರೂರಿನಲ್ಲಿ ಸುದ್ದಿಗಾರರೊಂದಗೆ ಮಾತನಾಡಿದ ಅವರು, 2018ರಲ್ಲಿ ಚುನಾಯಿತರಾಗಿ ನಾನು ಹಿರೇಕೇರೂರು ತಾಲೂಕಿಗೆ 1000 ಕೋಟಿಗೂ ಹೆಚ್ಚು ಅನುದಾನ ತಂದಿದ್ದೇನೆ. ತಾಲೂಕಿಗೆ 6 ನೀರಾವರಿ ಯೋಜನೆ ತಂದಿರುವೆ. ತಾಲೂಕಿನಲ್ಲಿ ಎಲ್ಲಾ ಕೆರೆಗಳು ಮಳೆಗಾಲದಲ್ಲಿ ತುಂಬುತ್ತವೆ. ಹಾಗಾಗಿ ನಮ್ಮ ತಾಲೂಕಿಗೆ ಬರಗಾಲ ಬರಲ್ಲ ಎಂಬ ತೃಪ್ತಿ ನನಗೆ ಇದೆ ಎಂದರು.

ಮನೆ ಮನೆಗೆ ಕಿರು ಹೊತ್ತಿಗೆ: ಮಹಿಳೆಯರಿಗೆ ಗಾರ್ಮೆಂಟ್ಸ್ ಮಾಡುತ್ತೇವೆ ಎಂದು ಹೇಳಿದ್ದೆವು. ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ. ನಾನು ಕ್ಷೇತ್ರಕ್ಕಾಗಿ ಏನು ಮಾಡಿರುವೆ ಅನ್ನೋದನ್ನು ಕಿರು ಹೊತ್ತಿಗೆ ಬಿಡುಗಡೆ ಮಾಡುವ ಮೂಲಕ ಹೇಳುವೆ. ಏನೆಲ್ಲಾ ಕೆಲಸ ಆಗಿದೆ ಅಂತಾ ಮನೆ ಮನೆಗೆ ಕಿರು ಹೊತ್ತಿಗೆಯನ್ನು ಕಳಿಸಿಕೊಡಲಾಗುವುದು. ನನ್ನ ಸಾಧನೆಯ ವರದಿಯನ್ನು ಜನತೆಗೆ ಈ ಮೂಲಕ ಒಪ್ಪಿಸುವೆ ಎಂದು ತಿಳಿಸಿದರು.

ದಮ್, ತಾಖತ್​ ಮೇಲೆ ಚುನಾವಣೆ ನಡೆಯಲ್ಲ: ಮಾಜಿ ಶಾಸಕ ಯು.ಬಿ ಬಣಕಾರ್ ದಮ್​ ಮತ್ತು ತಾಖತ್​ ಬಗ್ಗೆ ಮಾತಾಡಿದ್ದಾರೆ. ಅವರ ದಮ್​ ಮತ್ತು ತಾಖತ್​ ಅನ್ನು ನಾನು ಈಗಾಗಲೇ ಮೂರು ಬಾರಿ ನೋಡಿ ಆಗಿದೆ. ನನಗೆ ದಮ್ ಇರೋದಕ್ಕೆ ಇವರಿಗೆ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ, ಒಂದು ಕಾರು, ರಾಜ್ಯ ಸಚಿವ ದರ್ಜೆ ಸ್ಥಾನಮಾನ ಬಂದಿತ್ತು. ದಮ್ ಮತ್ತು ತಾಖತ್​ ಮೇಲೆ ಚುನಾವಣೆ ನಡೆಯಲ್ಲ. ಅಭಿವೃದ್ಧಿ ಮೇಲೆ ಚುನಾವಣೆ ನಡೆಯುತ್ತದೆ. ಅವರು ಏನು ಕೆಲಸ ಮಾಡಿದ್ದಾರೆ ಅಂತಾ ಪುಸ್ತಕ ಬಿಡುಗಡೆ ಮಾಡಲಿ. ಆವಾಗ ನಾನು ಒಪ್ಪಿಕೊಳ್ಳುವೆ ಎಂದು ಬಿ ಸಿ ಪಾಟೀಲ್​ ಸವಾಲು ಹಾಕಿದರು.

ರಕ್ಷಣೆ ಅಗತ್ಯ: ಕೋರ್ಟ್​ನಲ್ಲಿ ಏಕೆ ತಡೆಯಾಜ್ಞೆ ತಂದರು ಎಂಬ ಬಣಕಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಬಿ ಸಿ ಪಾಟೀಲ್, ಮೀರ್ ಸಾಧಿಕ್​ರಂಥ ಜನ ನಮ್ಮ ಸುತ್ತಮುತ್ತ ಇರುತ್ತಾರೆ. ಇದೇ ಬಣಕಾರ್ ನಮ್ಮ ಜೊತೆಗೆ ಇದ್ದು ಈಗ ಕಾಂಗ್ರೆಸ್ ಸೇರಿದ್ದಾರೆ. ಅಂಥವರಿಂದ ರಕ್ಷಣೆ ಅಗತ್ಯ. ನಾವು ಯಾವುದೇ ವ್ಯಭಿಚಾರ ಏನು ಮಾಡಿಲ್ಲ. ರಮೇಶ್ ಜಾರಕಿಹೊಳಿ ಅವರ ಸಿಡಿಯನ್ನು ಅನಾವಶ್ಯಕವಾಗಿ ಬಿಡುಗಡೆ ಮಾಡಿದರು. ಆದರೆ ಏನಾಯ್ತು?. ಬಿ-ರಿಪೋರ್ಟ್ ಆಯ್ತು. ನಾವು ನಮ್ಮ ಗೌರವ ಕಾಯುವ ಕೆಲಸ ಮಾಡಲೇಬೇಕು. ಈಗ ಎಲ್ಲಾ ಎಲೆಕ್ಟ್ರಾನಿಕ್ ಮಾಧ್ಯಮಗಳ ಕಾಲ. ಏನು ಬೇಕಾದರೂ ಮಾಡಬಹುದು ಎಂದು ತಮ್ಮನ್ನು ತಾವು ಸಮರ್ಥಿಸಿಕೊಂಡರು.

ಪ್ರತಿಪಕ್ಷದ ಸ್ಥಾನ ಸಿಕ್ಕಿದ್ದು ನಮ್ಮಿಂದ: ಇದೇ ಸಿದ್ದರಾಮಯ್ಯನವರು ತಾವು ಜನತಾ ದಳದಲ್ಲಿ ಇದ್ದಿದ್ದರೆ ಕಾಲ ಕಸದಂತೆ ನೋಡ್ತಾ ಇದ್ರು ಅಂತಾ ಸ್ವತಃ ಅವರೇ ಹೇಳಿಕೊಂಡಿದ್ದರು. ಅವರಿಗೆ ಪ್ರತಿಪಕ್ಷದ ಸ್ಥಾನ ಸಿಕ್ಕಿದ್ದೇ ನಮ್ಮಿಂದ. ಅದಕ್ಕೆ ಅವರು ನಮಗೆ ಅಭಿನಂದನೆ ತಿಳಿಸಬೇಕು. ಆದರೆ, ಅವರು ಅಭಿನಂದನೆಯನ್ನು ಆ ರೂಪದಲ್ಲಿ ಹೇಳುತ್ತಿದ್ದಾರೆ ಅಷ್ಟೇ ಎಂದು ಬಿ ಸಿ ಪಾಟೀಲ್​ ವ್ಯಂಗ್ಯವಾಡಿದರು.

ಇದನ್ನೂ ಓದಿ: ಹಾವೇರಿ... ಕಾಂಗ್ರೆಸ್ ಮುಳುಗುತ್ತಿರುವ ಹಡಗು : ಸಿಟಿ ರವಿ ಟೀಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.