ETV Bharat / state

ಕುರಿ ಕಳ್ಳ ಸಾಗಣೆಗೆ ಅಡ್ಡ ಬಂದ ವೃದ್ಧನ ಕೊಲೆ: ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಹಾವೇರಿ ಪೊಲೀಸರು

author img

By

Published : May 13, 2022, 9:10 PM IST

ಕುರಿಗಳನ್ನು ದೊಡ್ಡಿಯಿಂದ ಕದ್ದು ಸಾಗಿಸುತ್ತಿದ್ದ ಕಳ್ಳರ ತಂಡವನ್ನು ಹಾವೇರಿ ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್​ ​ 9ರಂದು ಕುರಿ ಕಳ್ಳತನ ಮಾಡುವಾಗ ತಡೆಯಲು ಬಂದ ವೃದ್ಧನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣ ಭೇದಿಸಿದಾಗ ಕುರಿ ಕಳ್ಳತನದ ವಿಚಾರ ಬಯಲಿಗೆ ಬಂದಿದೆ.

Haveri police have arrested seven people who escaped murder
ಕುರಿ ಕಳ್ಳ ಸಾಗಾಣೆಗೆ ಅಡ್ಡ ಬಂದ ವೃದ್ಧನ ಕೊಲೆ: ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಹಾವೇರಿ ಪೊಲೀಸರು

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಗಂಗಾಪುರದಲ್ಲಿ ನಡೆದಿದ್ದ ಕೊಲೆ ಪ್ರಕರಣ ಭೇದಿಸುವಲ್ಲಿ ಹಾವೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ಕುರಿತಂತೆ ಏಳು ಜನರ ಮೇಲೆ ಪ್ರಕರಣ ದಾಖಲಿಸಿದ್ದು, ಆರು ಜನರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬಂಧಿತರನ್ನು ಉಪೇಂದ್ರ, ಮಂಜುನಾಥ, ದ್ಯಾಮಪ್ಪ, ನಾಗರಾಜ, ಹನುಮಂತಪ್ಪ ಮತ್ತು ಮಂಜುನಾಥ್ ತಂದೆ ಹನುಮಂತಪ್ಪ ಕಾಶಪ್ಪನವರ್ ಎಂದು ಗುರುತಿಸಲಾಗಿದೆ. ಇನ್ನೊಬ್ಬ ಆರೋಪಿ ಯಲ್ಲಪ್ಪನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

ಉಪೇಂದ್ರ, ಮಂಜುನಾಥ್, ದ್ಯಾಮಪ್ಪ ಮತ್ತು ನಾಗರಾಜ್ ರಾಣೆಬೆನ್ನೂರು ತಾಲೂಕಿನ ಗಂಗಾಪುರದಲ್ಲಿ ನಡೆದ ಕುರಿ ಕಳ್ಳತನ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾದ್ದರು ಎನ್ನಲಾಗಿದೆ. ಮಂಜುನಾಥ ಕಾಶಪ್ಪನವರ್ ಮತ್ತು ಹನುಮಂತಪ್ಪ ಕಾಶಪ್ಪನವರ್ ಆರೋಪಿಗಳಿಂದ ಕಳ್ಳತನ ಮಾಡಿದ್ದ ಕುರಿಗಳನ್ನು ಖರೀದಿಸುತ್ತಿದ್ದರು ಎನ್ನಲಾಗಿದೆ. ಏಳು ಆರೋಪಿಗಳು ಬಂಧಿಸಲಾಗಿದ್ದು, ಇನ್ನು ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತದೆ ಎಂದು ಹಾವೇರಿ ಎಸ್ಪಿ ಹನುಮಂತರಾಯ್ ತಿಳಿಸಿದರು.

ಕುರಿ ಕಳ್ಳ ಸಾಗಾಣೆಗೆ ಅಡ್ಡ ಬಂದ ವೃದ್ಧನ ಕೊಲೆ: ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಹಾವೇರಿ ಪೊಲೀಸರು

ಬಂಧಿತರಿಂದ ಕಳ್ಳತನಕ್ಕೆ ಬಳಸಲಾಗಿದ್ದ ಬೊಲೇರೋ ವಾಹನ, ಎರಡು ಕಬ್ಬಿಣದ ರಾಡು, ಕಬ್ಬಿಣ ಕಟ್ಟುಮಾಡುತ್ತಿದ್ದ ಕಟರ್, ಪಕ್ಕಡ, ಕಾರದ ಪುಡಿ ಪಾಕೀಟ್​ ಮತ್ತು 6,400 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣ: ಬಂಧಿತ ಆರೋಪಿಗಳು ಏಪ್ರೀಲ್​ 9 ರಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಗಂಗಾಪುರದಲ್ಲಿ ಜಮೀನಿನಲ್ಲಿದ್ದ ಕುರಿದೊಡ್ಡಿ ಕಳ್ಳತನಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕುರಿಗಳ ರಕ್ಷಣೆಗೆ ಬಂದಿದ್ದ 48 ವರ್ಷದ ವೆಂಕಟೇಶನನ್ನು ಆರೋಪಿಗಳು ಕೊಲೆ ಮಾಡಿದ್ದರು.

ಇದನ್ನೂ ಓದಿ: ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕುತ್ತಿದ್ದ ಕಲಾವಿದನ ಫೋಟೋ ಗ್ಯಾಲರಿ ಬೆಳ್ಳಂಬೆಳಗ್ಗೆ ನಗರಸಭೆಯಿಂದ ತೆರವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.