ETV Bharat / state

ಮಹದಾಯಿ ಯೋಜನೆಗೆ ಡಿಪಿಆರ್​ ಕೊಟ್ಟಿದ್ದೇ ಕೇಂದ್ರ ಸರ್ಕಾರ : ಸಿಎಂ ಸಿದ್ದು ವಿರುದ್ಧ ಬೊಮ್ಮಾಯಿ ವಾಗ್ದಾಳಿ

author img

By ETV Bharat Karnataka Team

Published : Sep 9, 2023, 10:47 PM IST

former-cm-basavaraja-bommai-slams-cm-siddaramaiah
ಮಹದಾಯಿ ಯೋಜನೆಗೆ ಡಿಪಿಆರ್​ ಕೊಟ್ಟಿದ್ದೇ ಕೇಂದ್ರ ಸರ್ಕಾರ : ಸಿಎಂ ಸಿದ್ದು ವಿರುದ್ಧ ಬೊಮ್ಮಾಯಿ ವಾಗ್ದಾಳಿ

ಮಹದಾಯಿ ಯೋಜನೆಗೆ ಡಿಪಿಆರ್​ ಕೊಟ್ಟಿದ್ದು ಕೇಂದ್ರ ಸರ್ಕಾರ. ಎಲ್ಲದರಲ್ಲೂ ರಾಜಕೀಯ ಮಾಡಿದರೆ ರಾಜ್ಯದ ಹಿತದೃಷ್ಟಿಗೆ ಧಕ್ಕೆಯಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಮಹದಾಯಿ ಯೋಜನೆಗೆ ಡಿಪಿಆರ್​ ಕೊಟ್ಟಿದ್ದೇ ಕೇಂದ್ರ ಸರ್ಕಾರ : ಸಿಎಂ ಸಿದ್ದು ವಿರುದ್ಧ ಬೊಮ್ಮಾಯಿ ವಾಗ್ದಾಳಿ

ಹಾವೇರಿ : ಮಹದಾಯಿ ವಿಚಾರ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಹದಾಯಿ ಯೋಜನೆಗೆ ಡಿಪಿಆರ್​ ಕೊಟ್ಟಿದ್ದೇ ಕೇಂದ್ರ ಸರ್ಕಾರ ಎಂದು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರ ಸರ್ಕಾರ ಮಹದಾಯಿ ಯೋಜನೆಗೆ ಕ್ಲಿಯರೆನ್ಸ್​ ಕೊಡುತ್ತಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯ ಹೇಳಿದ್ದು ನಂಬಿದರೇ ರಾಜ್ಯವನ್ನು ಅಧೋಗತಿಗೆ ತಗೆದುಕೊಂಡು ಹೋಗುತ್ತಾರೆ. ಮಹದಾಯಿ ಯೋಜನೆಗೆ ಡಿಪಿಆರ್ ಕೊಟ್ಟಿದ್ದೇ ಕೇಂದ್ರ ಸರ್ಕಾರ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಮಹದಾಯಿ ಯೋಜನೆ ಸಂದರ್ಭ ಅನಾವಶ್ಯಕವಾಗಿ ಟ್ರಿಬ್ಯುನಲ್ ರಚಿಸಲು ಸುಪ್ರೀಂ ಕೋರ್ಟ್ ಅಫಿಡವಿಟ್ ನೀಡಿತ್ತು. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದರು. ಈ ಕುರಿತಂತೆ ಸಿಎಂ ಸಿದ್ದರಾಮಯ್ಯ ಯಾಕೆ ಮಾತನಾಡುವುದಿಲ್ಲ. ಮಹದಾಯಿ ಯೋಜನೆಯಲ್ಲಿ ನಾವು ಮಾಡಿದ ಇಂಟರಲಿಂಕಿಂಗ್ ಕ್ಯಾನಲ್​ಗೆ ಇವರು ಅಡ್ಡಗೋಡೆ ಕಟ್ಟಿದರು. ಕಾಂಗ್ರೆಸ್ ಸರ್ಕಾರವು ಯೋಜನೆ ಆಗಬಾರದು ಎಂದು ಗೋಡೆ ಕಟ್ಟಲು ಅಫಿಡವಿಟ್​ ಸಲ್ಲಿಸಿದರು ಬೊಮ್ಮಾಯಿ ಆರೋಪಿಸಿದರು.

ಇಡೀ ಜಗತ್ತಿನಲ್ಲಿ ಈ ರೀತಿಯಲ್ಲಿ ಒಂದು ಯೋಜನೆಯನ್ನು ತಡೆಯಲು ಗೋಡೆ ಕಟ್ಟಿದ್ದ ಉದಾಹರಣೆ ಇಲ್ಲಾ. ಈ ರೀತಿ ಗೋಡೆ ಕಟ್ಟಿದರೆ ನೀರು ಎಲ್ಲಿಂದ ಬರುತ್ತೆ. ಇದರ ಬಗ್ಗೆ ಅಂದು ಸಿಎಂ ಸಿದ್ದರಾಮಯ್ಯ ಮಾತನಾಡಲಿಲ್ಲ. ಈಗ ಕೇಂದ್ರ ಸರ್ಕಾರ ಡಿಪಿಆರ್ ಅಪ್ರೂವಲ್ ಮಾಡಿದೆ. ಇನ್ನು ಅರಣ್ಯ ಇಲಾಖೆಯ ಒಪ್ಪಿಗೆ ಪಡೆಯಬೇಕು. ಈಗಾಗಲೇ ನಮ್ಮ ಸರ್ಕಾರ ಅದಕ್ಕೆ ಬೇಕಾದ ಕ್ರಮಗಳನ್ನು ಕೈಗೊಂಡಿದೆ. ಕ್ಲಿಯರೆನ್ಸ್​ ಕೊಡುವ ಇಲಾಖೆಯ ಕಚೇರಿ ಇದೀಗ ಬೆಂಗಳೂರಿನಲ್ಲಿಯೇ ಇದೆ. ಆ ಕೆಲಸವನ್ನು ಮೊದಲು ಮಾಡಿ. ಎಲ್ಲದರಲ್ಲೂ ರಾಜಕಾರಣ ಮಾಡಲು ಹೋದರೆ ರಾಜ್ಯ ಹಿತದೃಷ್ಠಿಗೆ ಧಕ್ಕೆಯಾಗುತ್ತದೆ ಎಂದು ಹೇಳಿದರು.

ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಬಗ್ಗೆ ಕೇಂದ್ರ ಹೈಕಮಾಂಡ್​ ತೀರ್ಮಾನಕೈಗೊಳ್ಳುತ್ತದೆ. ಪ್ರಸ್ತುತ ಸಂಸದರ ಹತ್ತಿರ ಹೈಕಮಾಂಡ್ ಮಾತನಾಡಿ ಅಭ್ಯರ್ಥಿ ಆಯ್ಕೆ ಮಾಡುತ್ತದೆ. ಪಕ್ಷ ಯಾರನ್ನೇ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರೂ ನಮ್ಮ ಒಪ್ಪಿಗೆ ಇದೆ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದರು. ನಾನು ಅಭ್ಯರ್ಥಿಯಾಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಇದೆಲ್ಲಾ ಮಾಧ್ಯಮದ ಸೃಷ್ಟಿ ಎಂದು ಬೊಮ್ಮಾಯಿ ತಿಳಿಸಿದರು.

ಜೆಡಿಎಸ್ ಮೈತ್ರಿಗೂ ಪ್ರತಿಪಕ್ಷನಾಯಕನ ಆಯ್ಕೆ ವಿಳಂಬಕ್ಕೂ ಯಾವುದೇ ಸಂಬಂಧವಿಲ್ಲ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬಗ್ಗೆ ನಮಗೆ ಸ್ಪಷ್ಟವಾದ ಮಾಹಿತಿ ಇಲ್ಲ. ಕಾಂಗ್ರೆಸ್​ ಸರ್ಕಾರದ ವಿರುದ್ದ ಹೋರಾಟ ನಡೆಸಲು ಜೆಡಿಎಸ್ ಜೊತೆ ಮೈತ್ರಿ ಸ್ವಾಗತಾರ್ಹ ಎಂದರು. ಪ್ರತಿಪಕ್ಷನಾಯಕನ ಆಯ್ಕೆ ಬಹುತೇಕ ಪಕ್ಷದ ರಾಜ್ಯಾಧ್ಯಕ್ಷ ಆಯ್ಕೆಗೂ ಸಂಬಂಧವಿರುವ ಕಾರಣ ವಿಳಂಬವಾಗುತ್ತಿರಬಹುದು. ಇದು ನನ್ನ ವೈಯಕ್ತಿಕ ಅಭಿಪ್ರಾಯ. ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತೇನೆ ಎಂದು ಹೇಳಿಲ್ಲ. ಅದರ ಪ್ರಶ್ನೆಯೇ ಇಲ್ಲ ಎಂದು ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ : ಬುದ್ಧಿ ಇಲ್ಲದವರನ್ನೆಲ್ಲ ಶೃಂಗಸಭೆಗೆ ಕರೆಯೋಕಾಗುತ್ತಾ: ರಾಹುಲ್​ ಗಾಂಧಿ ವಿರುದ್ಧ ಯತ್ನಾಳ್ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.