ETV Bharat / state

ಉಪಚುನಾವಣೆ: ಸಿಂದಗಿ, ಹಾನಗಲ್​ನಲ್ಲಿ ಮತದಾನ ಆರಂಭ

author img

By

Published : Oct 30, 2021, 7:43 AM IST

Assembly By election voting started in Sindagi and hanagal
ಉಪಚುನಾವಣೆ : ಸಿಂದಗಿ, ಹಾನಗಲ್​ನಲ್ಲಿ ಮತದಾನ ಆರಂಭ

ಹಾನಗಲ್​ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶಿವರಾಜ್​ ಸಜ್ಜನರ, ಕಾಂಗ್ರೆಸ್​ನಿಂದ ಶ್ರೀನಿವಾಸ್ ಮಾನೆ ಸ್ಪರ್ಧೆ ಮಾಡಿದ್ದು, ಜೆಡಿಎಸ್​​​ನಿಂದ ನಿಯಾಜ್​ ಶೇಖ್​ ಕಣದಲ್ಲಿದ್ದಾರೆ. ಇನ್ನು ಸಿಂದಗಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ರಮೇಶ್ ಭೂಸನೂರು, ಕಾಂಗ್ರೆಸ್​​ನಿಂದ ಅಶೋಕ ಮನಗೂಳಿ ಹಾಗೂ ಜೆಡಿಎಸ್​​ನಿಂದ ಶಕೀಲಾ ಅಂಗಡಿ ಸ್ಪರ್ಧಿಯಾಗಿದ್ದಾರೆ.

ವಿಜಯಪುರ/ಹಾವೇರಿ: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಾದ ಹಾನಗಲ್​ ಹಾಗೂ ಸಿಂದಗಿಯಲ್ಲಿ ಉಪಚುನಾವಣೆ ಮತದಾನ ಆರಂಭಗೊಂಡಿದೆ. ಬೆಳಗ್ಗೆ 7 ಗಂಟೆಯಿಂದಲೇ ಜನರು ಹಕ್ಕು ಚಲಾಯಿಸುತ್ತಿದ್ದು, ಸಂಜೆ 7ರವರೆಗೆ ಮತದಾನ ನಡೆಯಲಿದೆ.

ಹಾನಗಲ್​ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶಿವರಾಜ್​ ಸಜ್ಜನರ, ಕಾಂಗ್ರೆಸ್​ನಿಂದ ಶ್ರೀನಿವಾಸ್ ಮಾನೆ ಸ್ಪರ್ಧೆ ಮಾಡಿದ್ದು, ಜೆಡಿಎಸ್​​​ನಿಂದ ನಿಯಾಜ್​ ಶೇಖ್​ ಕಣದಲ್ಲಿದ್ದಾರೆ. ಇನ್ನು ಸಿಂದಗಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ರಮೇಶ್ ಭೂಸನೂರು, ಕಾಂಗ್ರೆಸ್​​ನಿಂದ ಅಶೋಕ ಮನಗೂಳಿ ಹಾಗೂ ಜೆಡಿಎಸ್​​ನಿಂದ ಶಕೀಲಾ ಅಂಗಡಿ ಸ್ಪರ್ಧಿಯಾಗಿದ್ದಾರೆ.

ಹಾವೇರಿಯ ಹಾನಗಲ್​ನಲ್ಲಿ ಒಟ್ಟು 2,04,481 ಮತದಾರರಿದ್ದು, ಇದರಲ್ಲಿ 1,05,405 ಪುರುಷರು ಹಾಗೂ 98,798 ಮಹಿಳಾ ಮತರಾರರಿದ್ದಾರೆ. ಒಟ್ಟು 236 ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು, ಇದರಲ್ಲಿ ಎರಡು ಸಖಿ ಮತಗಟ್ಟೆ ಹಾಗೂ ಮತ್ತೊಂದು ವಿಶೇಷಚೇತನರಿಗೆ ನಿರ್ಮಿಸಲಾಗಿದೆ. ಒಟ್ಟು 1155 ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ.

ಹಾಗೆಯೇ ಸಿಂದಗಿಯಲ್ಲಿ ಒಟ್ಟು 2,34,309 ಮತದಾರರಿದ್ದು, ಇದರಲ್ಲಿ 1,20,949 ಪುರುಷ ಮತದಾರರು ಹಾಗೂ 1,13,327 ಮಹಿಳಾ ಮತದಾರರಿದ್ದಾರೆ. ಸಿಂದಗಿ ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು 297 ಮತದಾನ ಕೇಂದ್ರ ನಿರ್ಮಿಸಲಾಗಿದ್ದು, 1308 ಸಿಬ್ಬಂದಿ ಚುನಾವಣಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ.

ಆಡಳಿತ ಪಕ್ಷ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್​ ಹಾಗೂ ಜೆಡಿಎಸ್​ಗೆ ಪ್ರತಿಷ್ಠೆಯ ಕಣವಾಗಿರುವ ಕಾರಣ ಮೂರು ಪಕ್ಷದ ನಾಯಕರು ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸಿ, ಮತದಾರರನ್ನ ಸೆಳೆಯುವ ಕಸರತ್ತು ನಡೆಸಿದ್ದಾರೆ. ಪ್ರಮುಖವಾಗಿ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರಿಗೆ ಎದುರಾಗಿರುವ ಮೊದಲ ಚುನಾವಣೆ ಇದಾಗಿರುವ ಕಾರಣ ಗೆಲುವು ದಾಖಲು ಮಾಡುವ ಲೆಕ್ಕಾಚಾರದಲ್ಲಿದೆ.

ಉಭಯ ಕ್ಷೇತ್ರಗಳ ಮತದಾನದ ಫಲಿತಾಂಶ ನವೆಂಬರ್​ 2ರಂದು ಬಹಿರಂಗಗೊಳ್ಳಲಿದೆ.

ಇದನ್ನೂ ಓದಿ: ಇಂದು ರಾತ್ರಿ 11:30ಕ್ಕೆ ಪುನೀತ್ ಮಗಳು ಧೃತಿ ಆಗಮನ.. ಭಾನುವಾರ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.