ETV Bharat / state

ಅಪ್ಪ-ಮಕ್ಕಳ ಪಕ್ಷ ಏನು ಮಾಡಲಿದೆ ಎಂಬುದನ್ನು 2023ರಲ್ಲಿ ನೋಡಿ: ರೇವಣ್ಣ

author img

By

Published : Jan 13, 2021, 10:06 PM IST

ರೇವಣ್ಣ
ರೇವಣ್ಣ

ಬಿಜೆಪಿ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ ಅಂದ್ರೆ ಅದು ಅಪ್ಪ, ಮಕ್ಕಳ ಪಕ್ಷದಿಂದಲೇ. ನಮ್ಮ ಪಕ್ಷವನ್ನು ತಗಿಯಲಿಕ್ಕೆ ಹೊರಟಿದ್ದಾರೆ, ಅವರಿಗೆ ಒಳ್ಳೆಯಾದಾಗಲಿ. ನಮ್ಮನ್ನು ಬೇಕಾದ್ರೆ ಬೈಯ್ಯಲಿ, ದೇವೇಗೌಡರನ್ನು ಬೈಯ್ಯುವುದಕ್ಕೆ ಯಾವ ನೈತಿಕತೆ ಇದೆ ಎಂದು ಮಾಜಿ ಸಚಿವ ರೇವಣ್ಣ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ವಿರುದ್ಧ ಕಿಡಿಕಾರಿದರು.

ಹಾಸನ: ಅಪ್ಪ-ಮಕ್ಕಳಿಂದಲೇ ಬಿಜೆಪಿಯವರು ಅಧಿಕಾರವನ್ನು ಹಿಡಿದಿದ್ದು ಅನ್ನೋದನ್ನು ಮರೆತುಬಿಟ್ರಾ? ದೇವೇಗೌಡ್ರ ಬಗ್ಗೆ ಮಾತನಾಡಬೇಕಾದ್ರೆ ಯೋಚಿಸಿ ಮಾತನಾಡಬೇಕು ಎಂದು ಮಾಜಿ ಸಚಿವ ರೇವಣ್ಣ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ಗೆ ತಿರುಗೇಟು ನೀಡಿದ್ದಾರೆ.

ಅಪ್ಪ, ಮಕ್ಕಳ ಅಧಿಕಾರಕ್ಕೆ ಬ್ರೇಕ್ ಹಾಕಿ ಮತ್ತು ರಾಜ್ಯಕ್ಕೆ ಬರ ಬಂದ್ರು ಗೌಡರ ಕಣ್ಣೀರು ಮಾತ್ರ ಬತ್ತೋದಿಲ್ಲ ಎಂಬ ನಳೀನ್ ಕುಮಾರ್ ಕಟೀಲ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ ಅಂದ್ರೆ ಅದು ಅಪ್ಪ-ಮಕ್ಕಳ ಪಕ್ಷದಿಂದಲೇ. ನಮ್ಮ ಪಕ್ಷವನ್ನು ತಗಿಯಲಿಕ್ಕೆ ಹೊರಟಿದ್ದಾರೆ, ಅವರಿಗೆ ಒಳ್ಳೆಯಾದಾಗಲಿ. ನಮ್ಮನ್ನು ಬೇಕಾದ್ರೆ ಬೈಯ್ಯಲಿ, ದೇವೇಗೌಡರನ್ನು ಬೈಯ್ಯುವುದಕ್ಕೆ ಯಾವ ನೈತಿಕತೆ ಇದೆ ಎಂದು ವಾಗ್ದಾಳಿ ನಡೆಸಿದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್​.ಡಿ.ರೇವಣ್ಣ

60 ವರ್ಷದಿಂದ ಈ ಜಿಲ್ಲೆಗೆ ಕೊಡುಗೆ ಕೊಟ್ಟಿದ್ದಾರೆ ದೇವೇಗೌಡರು. ರೈತರ ಸಾಲ ಮನ್ನಾ ಮಾಡಲಿಕ್ಕೆ ಅಪ್ಪ-ಮಕ್ಕಳ ಪಕ್ಷವೇ ಬರಬೇಕಾಯಿತು. ಮುಂದೆ ಅಪ್ಪ-ಮಕ್ಕಳ ಪಕ್ಷ ಏನು ಮಾಡುತ್ತೆ ಅನ್ನೂದನ್ನು 2023ಕ್ಕೆ ಕಾದು ನೋಡಿ ಎಂದರು.

ಇದನ್ನೂ ಓದಿ.. 'ರಾಜ್ಯಕ್ಕೆ ಬರ ಬಂದ್ರೂ ದೇವೇಗೌಡರ ಕಣ್ಣೀರು ಬತ್ತುವುದಿಲ್ಲ'

ಪ್ರತಾಪ್ ಸಿಂಹಗೆ ಹಾಸನ ಜಿಲ್ಲೆ ಚಿಂತೆ ಬೇಡ, ಮೈಸೂರು ನೋಡಿಕೊಳ್ಳಲಿ. ಪ್ರತಾಪ್ ಸಿಂಹನಿಗೆ ಕಡತ ತಂದು ಓದಲು ಹೇಳಿ. ಹಾಸನ, ಮೈಸೂರು ರಸ್ತೆ ಮಾಡಿದ್ದು ಯಾರು? ರೈಲ್ವೆ ಮೇಲ್ಸೇತುವೆಗೆ ಶೇ. 50ರಷ್ಟು ಹಣ ಕೊಟ್ಟಿದ್ದು ಯಾರು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.