ETV Bharat / state

ಎಪಿಎಂಸಿ ಮಾರುಕಟ್ಟೆಗೆ ಮಾಜಿ ಸಚಿವ ಹೆಚ್‌ ಡಿ ರೇವಣ್ಣ ಭೇಟಿ.. ಆಲೂಗಡ್ಡೆ ಬಿತ್ತನೆ ಬೀಜ ಪರಿಶೀಲನೆ!!

author img

By

Published : May 12, 2020, 8:48 PM IST

revanna round in APMC market in hassan
ಎಪಿಎಂಸಿ ಮಾರುಕಟ್ಟೆಗೆ ಮಾಜಿ ಸಚಿವ ರೇವಣ್ಣ ಭೇಟಿ

ಮಾಜಿ ಸಚಿವ ರೇವಣ್ಣ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ರೌಂಡ್ಸ್ ಹಾಕಿ ಆಲೂಗಡ್ಡೆ ಬಿತ್ತನೆ ಬೀಜ ಖರೀದಿ ರೈತರ ಹಾಗೂ ವರ್ತಕರ ಸಮಸ್ಯೆ ಆಲಿಸಿ, ಸೂಕ್ತ ಸಲಹೆ ನೀಡಿದ್ದಾರೆ.

ಹಾಸನ : ಆಲೂಗಡ್ಡೆ ಬೀಜ ಖರೀದಿ ಮಾಡಿದ ಎರಡು ವಾರಗಳ ನಂತರ ಮಳೆಯನ್ನು ನೋಡಿಕೊಂಡು ಬಿತ್ತನೆ ಮಾಡಬೇಕು ಎಂದು ರೈತರಿಗೆ ಹೆಚ್‌ ಡಿ ರೇವಣ್ಣ ಸಲಹೆ ನೀಡಿದರು.

ಮಾಜಿ ಸಚಿವ ರೇವಣ್ಣ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ರೌಂಡ್ಸ್ ಹಾಕಿ ಆಲೂಗಡ್ಡೆ ಬಿತ್ತನೆ ಬೀಜ ಖರೀದಿ ರೈತರ ಹಾಗೂ ವರ್ತಕರ ಸಮಸ್ಯೆ ಆಲಿಸಿದರು. ನಿನ್ನೆಯಿಂದ ಜಿಲ್ಲೆಯಲ್ಲಿ ಆಲೂಗಡ್ಡೆ ಬಿತ್ತನೆ ಬೀಜ ಮಾರಾಟ ಮತ್ತು ಖರೀದಿ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಜಿಲ್ಲೆಯಲ್ಲಿ ಹಿಂದೆ 1.6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಜಿಲ್ಲೆಯಲ್ಲಿ ಕೇವಲ 16 ಸಾವಿರ ಪ್ರದೇಶದಲ್ಲಿ ಮಾತ್ರ ಆಲೂಗಡ್ಡೆ ಬೆಳೆಯಲಾಗುತ್ತಿದೆ. ಸದ್ಯ ನಮ್ಮಲ್ಲಿ 1.3 ಲಕ್ಷ ಕ್ವಿಂಟಲ್ ಆಲೂಗಡ್ಡೆ ಬಿತ್ತನೆ ಬೀಜ ದಾಸ್ತಾನು ಇದೆ. ಇನ್ನೂ 5 ಲಕ್ಷ ಆಲೂಗಡ್ಡೆ ಬಿತ್ತನೆ ಬೀಜ ಪಂಜಾಬಿನಿಂದ ಬರಬೇಕಿದೆ ಎಂದ್ರು.

ಎಪಿಎಂಸಿ ಮಾರುಕಟ್ಟೆಗೆ ಮಾಜಿ ಸಚಿವ ಹೆಚ್‌ ಡಿ ರೇವಣ್ಣ ಭೇಟಿ..
ಈಗಾಗಲೇ ಶಾಸಕರು ಹಾಗೂ ಜಿಲ್ಲಾಡಳಿತ ಸೇರಿ ಬಿತ್ತನೆ ಬೀಜವನ್ನು ಇಂತಿಷ್ಟು ದರದಲ್ಲಿ ಮಾರಾಟ ಮಾಡಬೇಕು ಎಂದು ವರ್ತಕರಿಗೆ ಸೂಚನೆ ನೀಡಲಾಗಿದೆ. ಅದರಂತೆ ಮಾರಾಟ ಮಾಡಿ ರಸೀದಿ ನೀಡಬೇಕು. ಬಿತ್ತನೆ ಬೀಜ ಖರೀದಿ ಬಳಿಕ ಎರಡು ವಾರಗಳ ಕಾಲ ಬೀಜವನ್ನು ಬಿಸಿಲಿನಲ್ಲಿ ಒಣಗಿಸಿದ ಬಳಿಕ ಮತ್ತೊಂದು ಹದ ಮಳೆ ಆದ ಬಳಿಕ ಭೂಮಿಗೆ ಬಿತ್ತನೆ ಮಾಡಬೇಕು. ಇಲ್ಲದಿದ್ದರೆ ಫಲವತ್ತತೆ ಕಡಿಮೆಯಾಗುತ್ತದೆ. ತೋಟಗಾರಿಕಾ ಇಲಾಖೆಯವರು ಕೂಡ ರೈತರಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಆಲೂಗಡ್ಡೆ ಬಿತ್ತನೆ ಬೀಜ ಖರೀದಿಗೆ ರೈತರು ನಿನ್ನೆಯಿಂದ ಮಾರುಕಟ್ಟೆಗೆ ಬರುತ್ತಿದ್ದು ಜಿಲ್ಲಾಡಳಿತ ಮತ್ತು ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 2250 ರೂ. ಗಳಲ್ಲಿ ಮಾರಾಟ ಮಾಡಬೇಕೆಂದು ಸೂಚನೆ ನೀಡಿದ್ದರು. ಅದರಂತೆ ನಮಗೆ ಪ್ರತಿ ಚೀಲಕ್ಕೆ 50 ರೂ. ನಷ್ಟವಾಗುತ್ತಿದ್ದರೂ ಒಂದು ಕಡೆ ಕೊರೊನಾ ಪ್ರಕರಣ ಮತ್ತೊಂದು ಕಡೆ ರೈತರ ಹಿತ ಕಾಯಬೇಕಾದ ಸಂದರ್ಭ ಇರುವುದರಿಂದ ನಾವು ಶಾಸಕರ ಮಾತಿಗೆ ಮನ್ನಣೆ ನೀಡಿ ಅವರು ನಿಗದಿಪಡಿಸಿದ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ. ಎಪಿಎಂಸಿ ಮಾರುಕಟ್ಟೆಗೆ ಹೊಂದಿಕೊಂಡಂತೆ ಇರುವ ಖಾಲಿ ಜಾಗವನ್ನು ಮಾರುಕಟ್ಟೆಗೆ ಬಿಟ್ಟುಕೊಟ್ಟರೆ ವ್ಯಾಪಾರ ಮಾಡಲು ಮತ್ತಷ್ಟು ಅನುಕೂಲವಾಗುತ್ತದೆ. ಇದನ್ನು ಕೂಡಲೇ ಜಿಲ್ಲಾಡಳಿತ ಎಪಿಎಂಸಿಗೆ ಹಸ್ತಾಂತರ ಮಾಡಿಕೊಡಬೇಕೆಂದು ಆಲೂಗಡ್ಡೆ ವರ್ತಕರ ಸಂಘದ ಮಾಜಿ ಅಧ್ಯಕ್ಷ ಗೋಪಾಲ ಮನವಿ ಮಾಡಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.