ETV Bharat / state

ದೊಡ್ಡಗೌಡ್ರ ಹೆಸರು ಹೇಳಿಕೊಂಡು ರಾಜಕೀಯಕ್ಕೆ ಬಂದ್ರಷ್ಟೆ, ರೇವಣ್ಣಂಗೇನೂ ಗೊತ್ತಿಲ್ಲ : ಪ್ರೀತಂ ತಿರುಗೇಟು

author img

By

Published : Dec 7, 2019, 11:27 PM IST

preetham-gouda
ಪ್ರೀತಂ ಗೌಡ

ಪ್ರೀತಂ ಗೌಡಗೆ ಕೆ.ಆರ್.ಪೇಟೆಯಲ್ಲಿ ಏನು ಕೆಲಸ ಎಂಬ ಮಾಜಿ ಸಚಿವ ರೇವಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಾಸಕ ಪ್ರೀತಂಗೌಡ, ‘ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಭಾರತ ದೇಶದ ಯಾವ ಮೂಲೆಯಲ್ಲಾದ್ರೂ ಇರುತ್ತೇನೆ. ಅದನ್ನ ಕೇಳುವುದಕ್ಕೆ ಅವರ್ಯಾರು?. ಕೆ.ಆರ್.ಪೇಟೆ ಮಾತ್ರ ಅಲ್ಲ ಹೊಳೆನರಸೀಪುರ, ಪಡುವಲಹಿಪ್ಪೆಯಲ್ಲಾದ್ರೂ ಇರ್ತೀನಿ. ಇವರೇನು ಪಾಳೆಗಾರರಾ?, ನಾನೂ ಗೌಡನೇ? ನಾನೂ ಹೇಮಾವತಿ ನೀರೇ ಕುಡಿದಿರೋದು’ ಎಂದು ವಾಗ್ದಾಳಿ ನಡೆಸಿದರು.

ಹಾಸನ: ‘ಸೋಲಿನ ಭೀತಿಯಿಂದ ಶಾಸಕ ಹೆಚ್‌.ಡಿ.ರೇವಣ್ಣ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಕ್ಷೇತ್ರ ಕಳೆದುಕೊಂಡಾಗ ಯಾರೇ ಆಗಲಿ ಅಲುಗಾಡೋದು ಸಹಜ. ಅಂತೆಯೇ ಕೆ.ಆರ್.ಪೇಟೆಯಲ್ಲಿ ಭೂಕಂಪ ಆದ್ರೆ ಹಾಸನ ಅಲುಗಾಡುತ್ತೆ’ ಎಂದು ಶಾಸಕ ಪ್ರೀತಂ ಗೌಡ ವ್ಯಂಗ್ಯವಾಡಿದರು.

ಪ್ರೀತಂ ಗೌಡಗೆ ಕೆ.ಆರ್.ಪೇಟೆಯಲ್ಲಿ ಏನು ಕೆಲಸ ಎಂಬ ಮಾಜಿ ಸಚಿವ ರೇವಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಾಸಕ ಪ್ರೀತಂಗೌಡ, ‘ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಭಾರತ ದೇಶದ ಯಾವ ಮೂಲೆಯಲ್ಲಾದ್ರೂ ಇರುತ್ತೇನೆ. ಅದನ್ನ ಕೇಳುವುದಕ್ಕೆ ಅವರ್ಯಾರು?. ಕೆ.ಆರ್.ಪೇಟೆ ಮಾತ್ರ ಅಲ್ಲ ಹೊಳೆನರಸೀಪುರ, ಪಡುವಲಹಿಪ್ಪೆಯಲ್ಲಾದ್ರೂ ಇರ್ತೀನಿ. ಇವರೇನು ಪಾಳೆಗಾರರಾ?, ನಾನೂ ಗೌಡನೇ? ನಾನೂ ಹೇಮಾವತಿ ನೀರೇ ಕುಡಿದಿರೋದು’ ಎಂದು ವಾಗ್ದಾಳಿ ನಡೆಸಿದರು.

‘ಧಮ್ಕಿ, ಪಾಳೆಗಾರಿಕೆ ಎಲ್ಲವೂ 2019 ಜುಲೈಗೆ ಮುಗಿಯಿತು. ಅವರು ಹೇಳಿದಂತೆ ಕೇಳಿಕೊಂಡು ಸರ್ಕಾರ ನಡೆಸೋಕೆ ಆಗುವುದಿಲ್ಲ. ಕಾನೂನು ಪ್ರಕಾರ ಎಲ್ಲವೂ ನಡೆಯಲಿದೆ’ ಎಂದು ಕಿಡಿಕಾರಿದರು.

ಹೆಚ್​ ಡಿ ರೇವಣ್ಣ ಹೇಳಿಕೆಗೆ ಪ್ರೀತಂ ಗೌಡ ತಿರುಗೇಟು

ಉಪ ಚುನಾವಣೆ ಹಣ ಹಂಚಿಕೆ ಆರೋಪಕ್ಕೆ ಕಿಡಿಕಾರಿದ ಪ್ರೀತಂ, ‘ರೇವಣ್ಣ ಅವರು ಮಗನ ಚುನಾವಣೆ ಮಾಡುವಾಗ ಕೊತ್ತಂಬರಿ ಸೊಪ್ಪು, ನಿಂಬೆಹಣ್ಣು ಹಂಚಿ ಚುನಾವಣೆ ಮಾಡಿದ್ರಾ? ಮಾತನಾಡುವಾಗ ಅವರು ಎನು ಮಾಡಿದ್ರು ಅನ್ನೋದನ್ನ ಯೋಚನೆ ಮಾಡಲಿ. ಹಳೆ ಮೈಸೂರು ಭಾಗದಲ್ಲಿ ಅವರ ಸಾರ್ವಭೌಮತ್ವ ಕೆ.ಆರ್.ಪೇಟೆ ಚುನಾವಣೆ ಮೂಲಕ ಕಳಚಿ ಬೀಳಲಿದೆ’ ಎಂದು ಭವಿಷ್ಯ ನುಡಿದರು.

ರೇವಣ್ಣ ಮಾಜಿ ಪ್ರಧಾನಿ ದೇವೇಗೌಡರ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ರೇವಣ್ಣ ಮಾತ್ರ ವಿವೇಕಾನಂದರು, ನಾವೆಲ್ಲಾ ಗಬ್ಬರ್ ಸಿಂಗ್ ಅನ್ನೋ ರೀತಿ ಮಾತನಾಡುವುದು ಬಿಡಬೇಕೆಂದ ಅವರು, ಈ ಉಪ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 14 ಸ್ಥಾನ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.

Intro:ಹಾಸನ: ಇದು ಪ್ರಜಾಪ್ರಭುತ್ವ ರಾಷ್ಟ್ರ. ನಾನು ಕೆ.ಆರ್.ಪೇಟೆಯಲ್ಲಾದ್ರೂ ಇರ್ತಿನಿ, ಹೊಳೆನರಸೀಪುರದಲ್ಲಾದ್ರೂ ಇರ್ತಿನಿ, ಅದನ್ನು ಕೇಳೋಕೆ ಇವರಾರು? ಇವರೇನು ಪಾಳೇಗಾರರಾ...? ನಾನು ಕೂಡ ಗೌಡನೇ, ನಾನು ಕುಡಿಯೋದು ಹೇಮಾವತಿ ನೀರನ್ನೇ ಎಂದು ಹಾಸನ ಶಾಸಕ ಪ್ರೀತಂ ಜೆ.ಗೌಡ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ವಾಗ್ದಾಳಿ ನಡೆಸಿದ್ರು.

ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಂ ಜೆ ಗೌಡಗೆ ಕೆ.ಆರ್.ಪೇಟೆಯಲ್ಲಿ ಏನು ಕೆಲಸ ಅಂತ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಮಾಡಿದ್ದ ಮಾಜಿ ಸಚಿವ ರೇವಣ್ಣ ಅವರಿಗೆ ಇಂದು ಶಾಸಕ ಪ್ರೀತಂಗೌಡ ತಿರುಗೇಟು ನೀಡಿದ್ರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂತಹ ಗೊಡ್ಡು ಬೆದರಿಕೆಗಳಿಗ್ಗೆಲ್ಲ ಹೆದರಿ ಓಡುವವನಾನಲ್ಲ, ಹಾಸನದಲ್ಲಿ ಪಾಳೆಗಾರರ ಆಡಳಿತ ಜುಲೈ 2019ಕ್ಕೆ ಮುಗಿದಿದೆ. ರೇವಣ್ಣ ಅವರು ಹೇಳಿದಂತೆ ಸರ್ಕಾರ ನಡೆಸಲು ಇದು ಅವರ ಪಕ್ಷವಲ್ಲ, ರೇವಣ್ಣ ತಮ್ಮ ಮಗನ ಚುನಾವಣೆ ಮಾಡುವ ವೇಳೆ ಕೊತಂಬರಿ ಸಪ್ಪು, ಸಂಬಾರ ಸಪ್ಪು, ಹಾಗೂ ನಿಂಬೆ ಹಣ್ಣು ಹಂಚಿ ಮತ ಕೇಳಿದ್ರಾ ಎಂದು ಖಾರವಾಗಿ ಮಾತನಾಡಿದ್ರು.

ಕೆ.ಆರ್.ಪೇಟೆಯ ಚುನಾವಣಾ ಫಲಿತಾಂಶದ ಮೂಲಕ ಹಳೆ ಮೈಸೂರು ಭಾಗದ ರೇವಣ್ಣ ಸಾರ್ವಭೌಮತ್ವ ಕಳಚಿ ಬೀಳಲಿದೆ. ರೇವಣ್ಣ ಮಾಜಿ ಪ್ರಧಾನಿದೇವೇಗೌಡರ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ರೇವಣ್ಣ ಮಾತ್ರ ವಿವೇಕಾನಂದರು, ನಾವೆಲ್ಲಾ ಗಬ್ಬರ್ ಸಿಂಗ್ ಅನ್ನೋ ರೀತಿ ಮಾತನಾಡುವುದು ಬಿಡಬೇಕೆಂದ ಅವರು, ಈ ಉಪ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 14 ಸ್ಥಾನ ಗೆಲುವು ಸಾಧಿಸಬಹುದೆಂದು ವಿಶ್ವಾಸ ವ್ಯಕ್ತಪಡಿಸಿದರು.

ಬೈಟ್: ಪ್ರೀತಂ ಜೆ.ಗೌಡ, ಹಾಸನ ಶಾಸಕ.


Body:7203289


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.