ETV Bharat / state

ಐಟಿ ದಾಳಿ ವೇಳೆ ಹಾಸನದಲ್ಲಿ ಪವರ್ ಕಟ್ ಮಾಡಿಸಿದ್ರಾ ಸಚಿವ ರೇವಣ್ಣ?!

author img

By

Published : Mar 29, 2019, 12:14 PM IST

Updated : Mar 30, 2019, 1:53 PM IST

ಪವರ್ ಕಟ್

ನಿನ್ನೆ ಐಟಿ ದಾಳಿಯಾದ ಸಂದರ್ಭದಲ್ಲಿ ಸಚಿವ ರೇವಣ್ಣ, ಹಾಸನದಲ್ಲಿ ಪವರ್ ಕಟ್ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಬಿಜೆಪಿ ಕಡೆಯಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ.

ಹಾಸನ: ಮೊನ್ನೆ ಸಿಎಂ ಕುಮಾರಸ್ವಾಮಿ ಐಟಿ ದಾಳಿ ಆಗಬಹುದು ಎಂಬ ಸುಳಿವನ್ನು ನೀಡಿದ್ದರು. ಇದರ ಬೆನ್ನಲ್ಲೇ ಹಾಸನದಲ್ಲಿ ಸುಮಾರು ಏಳು ಕಡೆ ಐಟಿ ದಾಳಿ ಕೂಡಾ ನಡೆಯಿತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವೆಡೆ ವಿದ್ಯುತ್​ ಕಡಿತಗೊಳಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.

ಅಲ್ಲದೆ ಕಳೆದ ವಾರ ಸುಮಲತಾ ಅಂಬರೀಶ್​ ನಾಮಪತ್ರ ಸಲ್ಲಿಸುವ ವೇಳೆ ನೆರೆದಿದ್ದ ಜನ ಸಮೂಹವನ್ನು ಹಾಸನ ಜನತೆ ನೋಡದಂತೆ, ಮಾಧ್ಯಮಗಳ ಮೂಲಕ ಮತದಾರರಿಗೆ ಅನ್ಯ ಸಂದೇಶ ಹೋಗಬಾರದೆಂಬ ಕಾರಣಕ್ಕಾಗಿ ಜಿಲ್ಲೆಯಾದ್ಯಂತ ವಿದ್ಯುತ್​ ಸ್ಥಗಿತಗೊಳಿಸಲಾಗಿತ್ತು. ಇದಕ್ಕೆ ಬಿಜೆಪಿ ಕಡೆಯಿಂದ ಸಾಕಷ್ಟು ಆಕ್ರೋಶ ಕೂಡಾ ವ್ಯಕ್ತವಾಗಿತ್ತು. ಆದರೆ ನಿನ್ನೆ ಐಟಿ ದಾಳಿಯಾದ ಸಂದರ್ಭದಲ್ಲೂ ಸಚಿವ ರೇವಣ್ಣ, ಹಾಸನದಲ್ಲಿ ಪವರ್ ಕಟ್ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಐಟಿ ರೈಡ್​ ವೇಳೆ ಆದ ಪವರ್ ಕಟ್​ಗೆ ಕಾರಣ ಯಾರು!

ರೇವಣ್ಣನವರು ಇಂತಹ ಸಣ್ಣತನಕ್ಕೆ ಇಳಿಯಬಾರದು. ಬಿಜೆಪಿಗೂ ಐಟಿ ಅಧಿಕಾರಿಗಳಿಗೂ ಯಾವುದೇ ಸಂಬಂಧವಿಲ್ಲ. ಮಾಧ್ಯಮಗಳ ಮೂಲಕವೇ ಸಾಕಷ್ಟು ಬಾರಿ ಆದಾಯ ತೆರಿಗೆ ಕಟ್ಟದವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಪ್ರಚಾರ ನೀಡಲಾಗಿತ್ತು. ಜಾಹೀರಾತುಗಳ ಮೂಲಕ ಸಂದೇಶನ್ನು ನೀಡಲಾಗಿತ್ತು. ಆದರೂ ಕೂಡ ಕೆಲ ಗುತ್ತಿಗೆದಾರರು ಮತ್ತು ಸರ್ಕಾರಿ ಅಧಿಕಾರಿಗಳು ಆದಾಯ ತೆರಿಗೆ ಕಟ್ಟಿಲ್ಲವೆಂಬ ಶಂಕೆ ಹಿನ್ನಲೆ ದಾಳಿ ನಡೆದಿದೆ. ಆದರೆ ಮೈತ್ರಿ ಸರ್ಕಾರದವರು ಮಾತ್ರ ಇದನ್ನು ಬೇರೆ ರೀತಿಯಲ್ಲೇ ಬಣ್ಣಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.

ಇನ್ನು, ಭ್ರಷ್ಟ ಅಧಿಕಾರಿಗಳು ಹಾಗೂ ತೆರಿಗೆ ವಂಚಕರಿಗೆ ಬಿಸಿ ಮುಟ್ಟಿಸುವ ಸಲುವಾಗಿ ಕೇಂದ್ರ ಆದಾಯ ತೆರಿಗೆ ಇಲಾಖೆ ಗೌಪ್ಯವಾಗಿ ಐಟಿ ದಾಳಿ ಮಾಡಿ ಪರಿಶೀಲನೆ ನಡೆಸುತ್ತದೆ. ರಾಜ್ಯದ ಮೈತ್ರಿ ಐಟಿ ಇಲಾಖೆಯ ಫೋನ್ ಕದ್ದಾಲಿಕೆ ಮಾಡುತ್ತಿದೆ. ಈ ಮೂಲಕ ಭ್ರಷ್ಟರಿಗೆ ಸುಳಿವು ನೀಡಿ ಕುಮಾರಸ್ವಾಮಿ ಸಾಥ್​ ನೀಡಿದ್ದಾರೆ ಎಂಬುದು ಕೂಡ ಬಿಜೆಪಿ ಮುಖಂಡರ ಆರೋಪವಾಗಿದೆ.

Intro:ಹಾಸನ: ಐಟಿ ದಾಳಿ ಹಿನ್ನಲೆಯಲ್ಲಿ ಮತ್ತೆ ಹಾಸನದಲ್ಲಿ ಪವರ್ ಕಟ್.
ಕುಮಾರಸ್ವಾಮಿ ನಿನ್ನೆ ಐಟಿ ದಾಳಿ ಆಗಬಹುದು ಎಂಬ ಸುಳಿವನ್ನು ನೀಡಿದ್ದರು. ಇದೇ ಬೆನ್ನಲ್ಲಿಯೇ ಹಾಸನದಲ್ಲಿ ಸುಮಾರು ಏಳು ಕಡೆ ಐಟಿ ದಾಳಿ ನಡೆದಿದೆ.

ಪ್ರತಿದಾಳಿಗೆ ಹಿಂದೆ ಬಿಜೆಪಿಯವರ ಕೈವಾಡ ಇದೆ ಎಂಬ ಆರೋಪವನ್ನು ಮಾಡುತ್ತಿರುವ ಜೆಡಿಎಸ್ ಮುಖಂಡರು ಗಳಿಗೆಬಿಜೆಪಿಯವರು ಹಾಗೂ  ಸಾರ್ವಜನಿಕರು ವಿವಿಧ ಮಾಧ್ಯಮಗಳ ಹಾಗೂ  ಸಾಮಾಜಿಕ ಜಾಲತಾಣ ಗಳ ಮೂಲಕಜೆಡಿಎಸ್ ಪಕ್ಷದವರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ಆದ ಸಂದರ್ಭದಲ್ಲಿ ಮೋದಿ ಅವರೇ ಹೋಗಿ  ಪಾಕಿಸ್ತಾನದ ಉಗ್ರರನ್ನು ಹೊಡೆದುರುಳಿಸಿದ  ಎಂಬುದಾಗಿ ಬಿಂಬಿಸಿ ಕೊಳ್ಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದರು ಅಲ್ಲದೆ ಇಸ್ರೋದಿಂದ ಮಿಸೈಲ್ ಉಡಾವಣೆ ಮಾಡಿದಾಗ ಮೋದಿಯವರು ನಾವೇ ಸಂಶೋಧನೆ ಮಾಡಿ ಉಡಾವಣೆ ಮಾಡಿದ್ರಾ ಎಂದು ಟೀಕಿಸಿದ್ದರು.

ಅಲ್ಲದೇ ಕಳೆದವಾರ  ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಸುವ ವೇಳೆ ನೆರೆದಿದ್ದ ಜನ ಸಮೂಹವನ್ನು ಹಾಸನ ಜನತೆಯ ನೋಡದಂತೆ ರೇವಣ್ಣ ಪ್ರಭಾವಬೀರಿ ಮಾಧ್ಯಮಗಳ ಮೂಲಕ ಮತದಾರರಿಗೆ ಅನ್ಯ ಸಂದೇಶ ಹೋಗಬಾರದೆಂಬ ಕಾರಣಕ್ಕಾಗಿ ಜಿಲ್ಲೆಯಾದ್ಯಂತ ವಿದ್ಯುತ್ ಸ್ಥಗಿತಗೊಳಿಸಿದ್ದರು ಇದಕ್ಕೆ ಬಿಜೆಪಿ ಅವರಿಂದ ಸಾಕಷ್ಟು ಆಕ್ರೋಶ ಕೂಡಾ ವ್ಯಕ್ತವಾಗಿತ್ತು.

ಆದರೆ ಇಂದು ಕೇಂದ್ರ ಸರ್ಕಾರದ ಆದಾಯ ಇಲಾಖೆ ದಾಳಿ ಮಾಡಿರುವುದನ್ನು ಮಾತ್ರ ಕುಮಾರಸ್ವಾಮಿ ಒಪ್ಪುತ್ತಿಲ್ಲ. ಇದನ್ನಮಾತ್ರ ಮಾಡಿಸಿರುವುದು ಬಿಜೆಪಿಯವರೇ, ಐಟಿ ಅಧಿಕಾರಿಗಳು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂಬುದು ಎಷ್ಟು ಸರಿ ಎಂಬ ಟೀಕಾ ಪ್ರಹಾರಗಳು  ಹರಿದು ಬರುತ್ತಿದ್ದ ಗಮನಿಸಿದ ರೇವಣ್ಣ ಇವತ್ತು ಹಾಸನದಲ್ಲಿ ಪವರ್ ಕಟ್ ಮಾಡಿದ್ದಾರೆ.

ಜ್ಞಾನಕ್ಷಿ ಕಲ್ಯಾಣ ಮಂಟಪದಲ್ಲಿ ಹಿಂದೂ ಮಹಿಳಾ ಜೆಡಿಎಸ್ ಸಮಾವೇಶ ವನ್ನು ಆಯೋಜನೆ ಮಾಡಿದ್ದು ಬಳಿಕಮಾಧ್ಯಮಗಳ ಮೂಲಕ ಜೆಡಿಎಸ್ 
ಪ್ರತಿಭಟನೆ ಮಾಡುತ್ತದೆ ಎಂಬ ಹೇಳಿಕೆಯನ್ನು ನೀಡಿದ್ದರ ಬೆನ್ನಲ್ಲಿಯೇ ಸಾರ್ವಜನಿಕವಲಯದಿಂದ ಹಾಗೂ ಮಾಧ್ಯಮಗಳಿಂದ ಬರುತ್ತಿದ್ದ ಆಕ್ರೋಶವನ್ನು 
ತಡೆಯಲಾಗದ ರೇವಣ್ಣ ಇಂದು ಕೂಡ ಜಿಲ್ಲೆಯಜನರು  ಮಾಧ್ಯಮವನ್ನು  ನೋಡದಂತೆ ಪವರ್ ಕಟ್ ಮಾಡಿದ್ದು ಸಾರ್ವಜನಿಕರಿಂದ ಹಾಗೂ ಬಿಜೆಪಿ 
ವಲಯದಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ.

ರೇವಣ್ಣನವರು ಇಂತಹ ಸಣ್ಣ ತನಕ್ಕೆ ಇಳಿಯಬಾರದು.ಐಟಿ ರೈಡ್ ಮಾಡುವುದು  ಕೇಂದ್ರ ಅಧಿಕಾರಿವರ್ಗ ಬಿಜೆಪಿಗೂ ಐಟಿಅಧಿಕಾರಿಗಳು ಯಾವುದೇ ಸಂಬಂಧವಿಲ್ಲ ಆದಾಯ ತೆರಿಗೆಯನ್ನು ಕಟ್ಟದಿರುವ ಹಿನ್ನೆಲೆಯಲ್ಲಿ ಹಾಗೂ  ಆದರೆ ಮಾಧ್ಯಮಗಳ ಮೂಲಕವೇ ಸಾಕಷ್ಟು ಬಾರಿ ಆದಾಯ ತೆರಿಗೆ ಕಟ್ಟದ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಪ್ರಚಾರ ಕೂಡ ಮಾಡಿದ್ದು ಜಾಹಿರಾತುಗಳ ಮೂಲಕ ಸಂದೇಶವನ್ನು ನೀಡಿತು.

ಆದರೂ ಕೂಡ ಕೆಲ ಗುತ್ತಿಗೆದಾರರು ಮತ್ತು ಸರ್ಕಾರಿ ಅಧಿಕಾರಿಗಳು ಆದಾಯ ಇಲಾಖೆಗೆ ಕಟ್ಟಬೇಕಾದ ಅಂತಹಯಾವುದೇ ಹಣವನ್ನು ಕಟ್ಟದೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆದಾಯವನ್ನು ಐಟಿ ಇಲಾಖೆಗೆ ದಾಖಲೆ ನೀಡದ ಹಿನ್ನೆಲೆ ಯಲ್ಲಿ  ಇಂತಹ ಐಟಿ ದಾಳಿ ನಡೆದಿದೆ ಆದರೆ  ಮೈತ್ರಿ ಸರ್ಕಾರದವರು  ಮಾತ್ರ ಇದನ್ನ ಬೇರೆ ರೀತಿಯಲ್ಲೇ ಬಣ್ಣಿಸುತ್ತಿದ್ದಾರೆ ಎಂಬ ಆರೋಪವನ್ನು  ಮಾಡಿದ್ದಾರೆ.

ಇನ್ನೂ ಭ್ರಷ್ಟ ಅಧಿಕಾರಿಗಳನ್ನು ಮತ್ತು ತೆರಿಗೆ ವಂಚಕರನ್ನು ಬಿಸಿ ಮುಟ್ಟುವ ಸಲುವಾಗಿಕೇಂದ್ರ ಆದಾಯ ತೆರಿಗೆ ಇಲಾಖೆಗೌಪ್ಯವಾಗಿ ಐಟಿ ದಾಳಿ ಮಾಡಲು 
ಮುಂದಾಗಿದ್ದು, ರಾಜ್ಯದ ಮೈತ್ರಿ ಸರ್ಕಾರ ಆದಾಯ ಇಲಾಖೆಯ ಫೋನ್ ಕದ್ದಾಲಿಕೆ ಮಾಡುವ ಮೂಲಕ ಭ್ರಷ್ಟರಿಗೆ ಸುಳಿವು ನೀಡುವ ಮೂಲಕ ಭ್ರಷ್ಟರಿಗೆ ಕುಮಾರಸ್ವಾಮಿ ಸಾತ್ ನೀಡಿದ್ದಾರೆ ಎಂಬುದು ಕೂಡ ಬಿಜೆಪಿ ಮುಖಂಡರ ಆರೋಪವಾಗಿದೆ.

ಬೈಟ್: ವಿಜಯ್ ಕುಮಾರ್, ಬಿಜೆಪಿ ಮುಖಂಡ.

ಒಟ್ಟಾರೆ ಇಂದು ಬೆಳ್ಳಂಬೆಳಗ್ಗೆಯಿಂದಲೂ ಐಟಿ ಅಧಿಕಾರಿಗಳು ಹಾಸನ, ಚನ್ನರಾಯಪಟ್ಟಣ ಶ್ರವಣಬೆಳಗೊಳ ಮತ್ತು ಅರಕಲಗೂಡು ತಾಲೂಕಿನಲ್ಲಿ ತೆರಿಗೆ ವಂಚಕರ ವಿರುದ್ಧ ಸಮರ ಸಾರಿ ಪ್ರಮುಖ  ದಾಖಲೆಗಳನ್ನುವಶಪಡಿಸಿಕೊಂಡು ಪರಿಶೀಲನೆ ಮಾಡುತ್ತಿದ್ದಾರೆ. ಬಹುಶಃ
ಪರಿಶೀಲನೆ ಇಂದು ರಾತ್ರಿ ಅಥವಾ ನಾಳೆ ಮಧ್ಯಾಹ್ನ ಮುಕ್ತಾಯವಾಗುವ ಸಾಧ್ಯತೆ ಇದೆ.




Body:0


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
Last Updated :Mar 30, 2019, 1:53 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.