ETV Bharat / state

ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿದ ರೇವಣ್ಣ ಪರಿವಾರ

author img

By

Published : Oct 19, 2019, 9:04 AM IST

ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಭವಾನಿ, ಸಂಸದ ಪ್ರಜ್ವಲ್​ ರೇವಣ್ಣ

ನೆರೆ ಸಂತ್ರಸ್ತರ ಸಂಕಷ್ಟ ಶೀಘ್ರವೇ ದೂರಾಗಲಿ. ಜೆಡಿಎಸ್​ಗೆ ಮತ್ತೊಮ್ಮೆ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಗಲಿ ಎಂದು ಹಾಸನಾಂಬೆಯನ್ನು ಪ್ರಾರ್ಥಿಸಿರುವುದಾಗಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದರು.

ಹಾಸನ: ನೆರೆ ಸಂತ್ರಸ್ತರ ಸಂಕಷ್ಟ ದೂರ ಮಾಡಲಿ ಹಾಗೂ ಜೆಡಿಎಸ್​ಗೆ ಮತ್ತೊಮ್ಮೆ ರಾಜ್ಯದ ಜನರ ಸೇವೆ ಮಾಡಲು ಅವಕಾಶ ಸಿಗಲೆಂದು ಪ್ರಾರ್ಥಿಸಿ ಹಾಸನಾಂಬೆಗೆ ಪೂಜೆ ಸಲ್ಲಿಸಿರುವುದಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.

ಹಾಸನಾಂಬೆಯ ದರ್ಶನ ಪಡೆದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕುಟುಂಬ ಸದಸ್ಯರು

ಇತಿಹಾಸದ ಪ್ರಸಿದ್ಧ ದೇವಾಲಯಕ್ಕೆ ಆಗಮಿಸಿದ ಹೆಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ ಹಾಗು ಪುತ್ರ ಪ್ರಜ್ವಲ್ ರೇವಣ್ಣ ಅಧಿದೇವತೆಯ ದರ್ಶನ ಪಡೆದರು.

ದೇವಿಯ ಉತ್ಸವದ ಆಹ್ವಾನ ಪತ್ರಿಕೆಯಲ್ಲಿ ಸಂಸದರ ಹೆಸರನ್ನು ಕೈಬಿಟ್ಟಿರುವುದು ಬೇಸರ ತಂದಿದೆ. ಈ ರೀತಿ ದ್ವೇಷದ ರಾಜಕಾರಣ ಮಾಡಬಾರದು. ಎಲ್ಲರನ್ನೂ ಪ್ರೀತಿ, ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ಸಾ.ರಾ.ಮಹೇಶ್ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ, ಈಗಾಗಲೇ ಪಕ್ಷದ ವರಿಷ್ಠರ ಮನವೊಲಿಸಿದ್ದು, ಆಣೆ ಪ್ರಮಾಣದ ಅವರ ವೈಯಕ್ತಿಕ ವಿಚಾರ ಎಂದರು.

ಹಾಸನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆಯಲು ನಾನೊಬ್ಬಳೆ ಕಾರಣ ಎಂದು ನಾನು ಹೇಳಿಲ್ಲ. ರೇವಣ್ಣರಿಂದ ಆಗಿರುವುದಾಗಿಯೂ ಹೇಳಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾದ ಮಾಧುಸ್ವಾಮಿ ಹೇಳಿಕೆ ನೀಡುವ ಮುನ್ನ ತಿಳಿದುಕೊಂಡು ಮಾತನಾಡಲಿ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ತಿರುಗೇಟು ನೀಡಿದ್ದಾರೆ.

Intro:ಹಾಸನ: ಹಾಸನದ ಅಧಿದೇವತೆ ಮತ್ತು ರಾಜ್ಯದ ಶಕ್ತಿ ದೇವಾಲಯಗಳಲ್ಲೂ ಒಂದಾದ ಹಾಸನಾಂಬ ದೇವಾಲಯಕ್ಕೆ ರಾಜ್ಯ ಹೊರ ರಾಜ್ಯಗಳಿಂದಲೂ ಕೂಡ ಗಣ್ಯರು ಸೇರಿದಂತೆ ಭಕ್ತರು ಬಂದು ದೇವಿ ದರ್ಶನ ಪಡೆಯುತ್ತಾರೆ. ಅಂತೆಯೇ ಇಂದು ಕೂಡ ದೇವಿ ದರ್ಶನಕ್ಕೆ ಆಗಮಿಸಿದ್ದರು.
ಇಂದು ಬೆಳಿಗ್ಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸೇರಿದಂತೆ ಪತ್ನಿ ಭವಾನಿ, ಸಂಸದ ಹಾಗೂ ಪುತ್ರ ಪ್ರಜ್ವಲ್ ರೇವಣ್ಣ ಅವರುಗಳು ಶ್ರೀ ಹಾಸನಾಂಬೆ ದೇವಾಲಯಕ್ಕೆ ತೆರಳಿ ತಾಯಿಯ ದರ್ಶನ ಪಡೆದರು. ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ರಾಜ್ಯ ದಲ್ಲಿ ಮತ್ತೊಮ್ಮೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಜನರು ಮತ್ತು ಬಡವರ ಸೇವೆ ಮಾಡಲು ಅವಕಾಶ ಸಿಗಲಿ ಎಂದು ಪೂಜೆ ಸಲ್ಲಿಸಿದ್ದೇನೆ ಎಂದರು. ರಾಜ್ಯದಲ್ಲಿ ನೆರೆಪೀಡಿತ ಜನರು ಸಂಕಷ್ಟದಲ್ಲಿದ್ದು, ಅವರ ಸಮಸ್ಯೆಯನ್ನು ದೂರ ಮಾಡಲಿ. ಜನರಿಗೆ ಸಂತಸದ ದಿನಗಳು ಬರಲಿ ಎಂದು ದೇವರಲ್ಲಿ ಬೇಡಿ ಕೊಂಡಿದ್ದೇನೆ ಎಂದು ರೇವಣ್ಣ ಅವರು ಹೇಳಿದರು. ಜೆ.ಡಿ.ಎಸ್.ನ ಮಾಜಿ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಮತ್ತು ಸಾ.ರಾ. ಮಹೇಶ್ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ವಿಚಾರವನ್ನು ಸಮಯ ಬಂದಾಗ ಹೇಳುತ್ತೇನೆ ಎಂದಷ್ಟೇ ಉತ್ತರಿಸಿದರು.

ಬೈಟ್-೧ : ಹೆಚ್.ಡಿ.ರೇವಣ್ಣ, ಮಾಜಿ ಸಚಿವ.

ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಹಾಸನಾಂಬ ಉತ್ಸವದ ಆಹ್ವಾನ ಪತ್ರಿಕೆಯಲ್ಲಿ ಸಂಸದರ ಹೆಸರನ್ನು ಕೈಬಿಟ್ಟಿರುವುದು ತಮಗೆ ಬೇಸರ ತಂದಿದ್ದು ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ನಾನೇ ಮಾತನಾಡಿದ್ದು, ಈ ರೀತಿ ದ್ವೇಷದ ರಾಜಕಾರಣ ಮಾಡಬಾರದು. ಮುಂದಿನ ದಿನಗಳಲ್ಲಿ ಎಲ್ಲರನ್ನೂ ಪ್ರೀತಿ, ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಲಿ ಎಂದರು. ಸಾ.ರಾ. ಮಹೇಶ್ ರಾಜೀ ನಾಮೆ ವಿಚಾರಕ್ಕೆ ಸಂಬಂಧಿಸಿ ದಂತೆ ಈಗಾಗಲೇ ಪಕ್ಷದ ವರಿ ಷ್ಠರು ಮನವೊಲಿಸಿದ್ದು, ಆಣೆ ಪ್ರಮಾಣದ ವಿಚಾರ ಅವರ ವೈಯಕ್ತಿಕವಾದದ್ದು. ರಾಜ್ಯದ ನೆರೆಪೀಡಿತ ಜನರಿಗೆ ರಾಜ್ಯ ಸರ್ಕಾರ ಪರಿಹಾರ ಹಣ ನೀಡು ವಂತೆ ಒತ್ತಾಯಿಸಿದರು. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಇನ್ನೂ ಹೆಚ್ಚಿನ ನೆರೆ ಪರಿಹಾರದ ಅನುದಾನವನ್ನು ತರಬೇಕು ಎಂದು ತಿಳಿಸಿದ ಅವರು, ಮಳೆ ಯಿಂದ ಹೆಚ್ಚಿನ ಹಾನಿಯಾಗದಂತೆ ಹಾಸನಾಂಬೆಯಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದ್ರು.

ಬೈಟ್-೨ : ಪ್ರಜ್ವಲ್ ರೇವಣ್ಣ, ಸಂಸದ.

ಗುರುವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆ.ಡಿ.ಪಿ ಪೂರ್ವಬಾವಿ ಸಭೆಯಲ್ಲಿ ಹಾಸನ ಜಿಲ್ಲೆ ಎಸ್.ಎಸ್.ಎಲ್. ಸಿಯಲ್ಲಿ ಪ್ರಥಮ ಸ್ಥಾನ ಪಡೆಯಲು ಹಾಸನ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು ಮಾತ್ರ ಕಾರಣವೆಂದು ವ್ಯಂಗವಾಡಿದ್ದ ಸಚಿವ ಮಾಧುಸ್ವಾಮಿ ಅವರಿಗೆ ತಿರುಗೇಟು ನೀಡಿದ ಭವಾನಿ ರೇವಣ್ಣ, ಸಚಿವರು ನಮ್ಮ ವಿರುದ್ಧ ವ್ಯಂಗ್ಯವಾಡಿದ್ದಾರೆ. ಹಾಸನ ಎಸ್.ಎಸ್. ಎಲ್.ಸಿ ಫಲಿತಾಂಶದಲ್ಲಿ ನಂಬರ್ ಒನ್ ಸ್ಥಾನ ಪಡೆಯಲು ನಾನೊಬ್ಬಳೆ ಕಾರಣ ಎಂದು ನಾನು ಹೇಳಿಲ್ಲ ನನ್ನಿಂದ, ರೇವಣ್ಣರಿಂದ ಆಗಿದೆ ಎಂದು ಎಲ್ಲೂ ಹೇಳಿಲ್ಲ ಅವರು ಉಸ್ತುವಾರಿ ಸಚಿವರಾಗಿ ತಿಳಿದು ಮಾತನಾಡಲಿ, ಈಗ ಅವರೇ ಉಸ್ತುವಾರಿ ಸಚಿವರಿ ದ್ದಾರಲ್ಲಾ ಜಿಲ್ಲೆಯ ಫಲಿತಾಂಶ ವನ್ನು ನಂಬರ್ ಒನ್ ಮಾಡಲಿ ಎಂದು ಟಾಂಗ್ ನೀಡಿದರು. ರಾಜ್ಯದಲ್ಲಿಯೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಅಧಿಕಾರಿಗಳು, ಪೋಷಕರು, ಎಲ್ಲರ ಸಹಕಾರದಿಂದ ನಾವು ಸಾಧನೆ ಮಾಡಿದ್ದೇವೆ ನಮಗೆ ಇನ್ನು ಎರಡು ವರ್ಷ ಅವಕಾಶ ಇದೆ ಈಗಲೂ ಪ್ರಯತ್ನ ಮಾಡುತ್ತೇನೆ, ರಾಜ್ಯದಲ್ಲಿ ಎಸ್. ಎಸ್.ಎಲ್.ಸಿ ವಿದ್ಯಾರ್ಥಿಗಳ ಪೋಷಕರ ಸಭೆ ಮಾಡಿದ್ದು ನಾವೇ ಮೊದಲು, ಇದನ್ನು ಈಗ ಉಳಿದ ಜಿಲ್ಲೆಗಳಲ್ಲಿ ಅನುಸರಿಸುತ್ತಿದ್ದಾರೆ ಎಂದು ಹೇಳಿದರು.

ಬೈಟ್-೩ : ಭವಾನಿ ರೇವಣ್ಣ, ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
Body:0Conclusion:0

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.