ETV Bharat / state

ಹಾಸನ ಜಿಲ್ಲಾ ಪಂಚಾಯತ್​ ನೇಮಕಾತಿ; 10 ನೇ ತರಗತಿ ಪಾಸ್​ ಆಗಿದ್ರೆ ಅರ್ಜಿ ಸಲ್ಲಿಸಿ

author img

By ETV Bharat Karnataka Team

Published : Dec 8, 2023, 11:38 AM IST

hassan Zp recruitment in ayush Department
hassan Zp recruitment in ayush Department

ಸಕಲೇಶಪುರ ಮತ್ತು ಅರಸೀಕೆರೆ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರು: ಹಾಸನ ಜಿಲ್ಲಾ ಪಂಚಾಯತ್​ನಿಂದ ಜಿಲ್ಲಾ ಆಯುಷ್​ ಇಲಾಖೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ವೈದ್ಯಕೀಯ ಮತ್ತು ಅರೆವೈದ್ಯಕೀಯ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಸಕಲೇಶಪುರ ಮತ್ತು ಅರಸೀಕೆರೆ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಹುದ್ದೆಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆ ವಿವರ: ಹಾಸನ ಜಿಲ್ಲಾ ಪಂಚಾಯತ್​ನಿಂದ ಕೆಳಗಿನ ಹುದ್ದೆಗಳ ನೇಮಕಾತಿ ನಡೆಯಲಿದೆ

  • ಸ್ಪೆಷಲಿಸ್ಟ್​ ಡಾಕ್ಟರ್​ (ಆಯುಷ್​​) - 1
  • ಸ್ಪೆಷಲಿಸ್ಟ್​ ಡಾಕ್ಟರ್​ (ಬಿಎನ್​ವೈಎಸ್​) - 1
  • ಫಾರ್ಮಸಿಸ್ಟ್​​ - 5
  • ಮಸಾಜಿಸ್ಟ್​​ - 2
  • ಮಲ್ಟಿ ಪರ್ಪಸ್​ ವರ್ಕರ್​​ - 1
  • ಸಮುದಾಯ ಆರೋಗ್ಯ ಅಧಿಕಾರಿ​ - 3

ವಿದ್ಯಾರ್ಹತೆ:

  • ಸ್ಪೆಷಲಿಸ್ಟ್ ಡಾಕ್ಟರ್​ (ಆಯುಷ್​​) - ಬಿಎಎಂಎಸ್​, ಎಂಎಸ್​, ಎಂಡಿ
  • ಸ್ಪೆಷಲಿಸ್ಟ್ ಡಾಕ್ಟರ್​ (ಬಿಎನ್​ವೈಎಸ್​) - ಬಿಎನ್​ವೈಎಸ್​, ಸ್ನಾತಕೋತ್ತರ ಪದವಿ
  • ಫಾರ್ಮಸಿಸ್ಟ್​​ - 10ನೇ ತರಗತಿ, ಡಿಪ್ಲೊಮಾ
  • ಮಸಾಜಿಸ್ಟ್​​ - 7ನೇ ತರಗತಿ
  • ಮಲ್ಟಿ ಪರ್ಪಸ್​ ವರ್ಕರ್​​ - 10ನೇ ತರಗತಿ
  • ಸಮುದಾಯ ಆರೋಗ್ಯ ಅಧಿಕಾರಿ​ - ಬಿಎಎಂಎಸ್​, ಬಿಯುಎಂಎಸ್​

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ 28 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಪರಿಶಿಷ್ಟ ಜಾರಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪ್ರವರ್ಗ 2ಎ, 2ಬಿ, 3ಎ ಮತ್ತು 3 ಬಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಹುದ್ದೆ ಆಯ್ಕೆ : ಈ ಹುದ್ದೆಗಳಿಗೆ ಮೆರಿಟ್​ ಮತ್ತು ಸಂದರ್ಶನದ ಮೂಲಕ ಹುದ್ದೆಗೆ ಆಯ್ಕೆ ನಡೆಸಲಾಗುವುದು

ಅರ್ಜಿ ಸಲ್ಲಿಕೆ ವಿಧಾನ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಅಧಿಕೃತ ಅಧಿಸೂಚನೆ ಜೊತೆಯಲ್ಲಿ ಜಿಲ್ಲಾಡಳಿತದ ವೆಬ್​ಸೈಟ್​ನಲ್ಲಿ ನೀಡಲಾಗಿರುವ ನಿಗದಿತ ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ಶೈಕ್ಷಣಿಕ ದಾಖಲಾತಿ, ಮೀಸಲಾತಿ ಪ್ರಮಾಣ ಸೇರಿದಂತೆ ಇನ್ನಿತರ ಪ್ರಮಾಣಪತ್ರಗಳನ್ನು ಸೇರಿಸಿ. ಈ ಕೆಳಗಿನ ವಿಳಾಸಕ್ಕೆ ಸಲ್ಲಿಕೆ ಮಾಡಬೇಕಿದೆ.

ಕಾರ್ಯದರ್ಶಿಗಳು, ಜಿಲ್ಲಾ ಆಯುಷ್​ ಅಧಿಕಾರಿಗಳು, ಹೊಸಲೈನ್​ ರೋಡ್​, ಹಾಸನ- 573201

ಈ ಹುದ್ದೆಗಳಿಗೆ ನವೆಂಬರ್​ 29 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಡಿಸೆಂಬರ್​ 28 ಆಗಿದೆ.

ಈ ಹುದ್ದೆ ಕುರಿತ ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು hassanzp.kar.nic.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: ಬ್ಯಾಂಕ್​ ಆಫ್​ ಬರೋಡದಲ್ಲಿ 250 ಮ್ಯಾನೇಜರ್​ ಹುದ್ದೆಗಳ ನೇಮಕಾತಿ; ಇಲ್ಲಿದೆ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.