ETV Bharat / state

ದೇವೇಗೌಡರು ಏನ್‌ ಹೇಳ್ತಾರೋ ಅದಕ್ಕೆ ನಾನು ಬದ್ಧ: ಹೆಚ್.​ಡಿ.ರೇವಣ್ಣ

author img

By

Published : Apr 12, 2023, 10:08 PM IST

hassan-ticket-issue-deve-gowda-word-is-final-hd-revanna
ಹಾಸನದಲ್ಲಿ ಪಕ್ಷದ ಕಾರ್ಯಕರ್ತನಿಗೆ ಟಿಕೆಟ್ ಕೊಡ್ತೀನಿ ಅಂದ್ರು ಓಕೆ: ಹೆಚ್​ಡಿ ರೇವಣ್ಣ

ಹಾಸನ ಟಿಕೆಟ್ ವಿಚಾರದಲ್ಲಿ ಯಾವ ಗೊಂದಲವೂ ಇಲ್ಲ. ನಾನು, ಕುಮಾರಣ್ಣ ಮೊದಲೇ ಮಾತನಾಡಿಕೊಂಡಿದ್ದೇವೆ. ಅದನ್ನು ದೇವೇಗೌಡರು ಸ್ಪಷ್ಟಪಡಿಸುತ್ತಾರೆ ಎಂದು ಹೆಚ್.​ಡಿ.ರೇವಣ್ಣ ತಿಳಿಸಿದರು.

ಹೆಚ್.​ಡಿ. ರೇವಣ್ಣ

ಹಾಸನ: "ದೇವೇಗೌಡರು ಅಗ್ರಗಣ್ಯ ನಾಯಕರು. ಅವರು ಏನು ಹೇಳುತ್ತಾರೋ ಅದಕ್ಕೆ ನಾನು ಬದ್ಧ. ಹಾಸನ ಜಿಲ್ಲೆಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡ್ತೀನಿ ಅಂದ್ರೂ ಓಕೆ ಅಂತೀನಿ" ಎಂದು ಹೆಚ್​.ಡಿ.ರೇವಣ್ಣ ಹೇಳಿದರು.

ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಕಣಕ್ಕಿಳಿಯುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಈಗಾಗಲೇ ದೇವೇಗೌಡರ ಬಳಿ ಮಾತನಾಡಿದ್ದೇನೆ. ಅದು ನಮ್ಮಿಬ್ಬರಿಗೆ ಮಾತ್ರ ಗೊತ್ತು. ಜಿಲ್ಲೆಯಲ್ಲಿ ಏಳು ಕ್ಷೇತ್ರಗಳಲ್ಲೂ ಜೆಡಿಎಸ್​​ ಪಕ್ಷ ಗೆಲ್ಲಬೇಕು ಅಷ್ಟೇ" ಎಂದರು.

ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕ ವಿಚಾರಕ್ಕೆ ಪ್ರತಿಕ್ರಿಯಿಸಿ, "ಸಿದ್ದರಾಮಯ್ಯ ಮತ್ತು ನನ್ನ ನಡುವಿನ ಬಾಂಧವ್ಯ ಬೇರೆ. ಜೆಡಿಎಸ್​​ ಪಕ್ಷ, ದೇವೇಗೌಡರು, ಕುಮಾರಣ್ಣ ಇರುವಾಗ ನಾನೇಕೆ ಕಾಂಗ್ರೆಸ್​ಗೆ ಹೋಗಲಿ. ಹಾಸನ ಟಿಕೆಟ್ ವಿಚಾರದಲ್ಲಿ ಯಾವ ಗೊಂದಲವೂ ಇಲ್ಲ. ನಾನು, ಕುಮಾರಣ್ಣ ಮೊದಲೇ ಮಾತನಾಡಿಕೊಂಡಿದ್ದೇವೆ. ಅದನ್ನು ದೇವೇಗೌಡರು ಸ್ಪಷ್ಟಪಡಿಸುತ್ತಾರೆ. ದೇವೇಗೌಡರ ಮಾತೇ ಅಂತಿಮ" ಎಂದು ಉತ್ತರಿಸಿದರು.

ಹಾಸನದಲ್ಲಿ ಶಕುನಿಗಳು ತಲೆಕೆಡಿಸುತ್ತಿದ್ದಾರೆ ಎಂಬ ಹೆಚ್​ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, "ಶಕುನಿಗಳ ಮಾತಿಗೆ ನಾನು ತಲೆಕೆಡಿಸಿಕೊಳ್ಳುವಂತಹ ವ್ಯಕ್ತಿಯಲ್ಲ. ನನ್ನ, ಕುಮಾರಣ್ಣನ ಮಧ್ಯೆ ಹೊಡೆದಾಡಿಸಲು ಸಾಧ್ಯವಿಲ್ಲ. ಬೆಳಗಾಗುವುದರೊಳಗೆ ನಾವು ಒಂದಾಗುತ್ತೇವೆ" ಎಂದು ಹೇಳಿದರು.

ಇದನ್ನೂ ಓದಿ: ರಾಜ್​​ಕುಮಾರ್​ ಕುಟುಂಬಕ್ಕೆ ನೀಡಿದ ಮಾತನ್ನು ಮರೆತು ಬಿಟ್ರಾ ಮುಖ್ಯಮಂತ್ರಿಗಳೇ: ಡಿಕೆಶಿ ಪ್ರಶ್ನೆ

ಜೆಡಿಎಸ್ ಇಲ್ಲದೇ ಸರ್ಕಾರ ಮಾಡಲು ಆಗಲ್ಲ- ಎ.ಮಂಜು: ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಎ. ಮಂಜು, "ದೇಶಕ್ಕೆ ದೇವೇಗೌಡರು, ರಾಜ್ಯಕ್ಕೆ ಕುಮಾರಣ್ಣ, ಹಾಸನಕ್ಕೆ ರೇವಣ್ಣ ಸುಪ್ರೀಂ ಇದ್ದ ಹಾಗೆ. ಕುಮಾರಣ್ಣ, ಜೆಡಿಎಸ್ ಇಲ್ಲದೇ ಸರ್ಕಾರ ಮಾಡಲು ಆಗಲ್ಲ" ಎಂದು ಹೇಳಿದರು.

ಇದನ್ನೂ ಓದಿ: ಫ್ಯಾಮಿಲಿ ಪಾಲಿಟಿಕ್ಸ್: 20ಕ್ಕೂ ಹೆಚ್ಚು ರಕ್ತ ಸಂಬಂಧಿ ಅಭ್ಯರ್ಥಿಗಳಿಗೆ ಬಿಜೆಪಿ ಮಣೆ

"ನಾನು ಜೆಡಿಎಸ್​ಗೆ ಪಕ್ಷಕ್ಕೆ ಸೇರುವ ಸಂದರ್ಭದಲ್ಲಿ ಕಾಂಗ್ರೆಸ್​​ನಲ್ಲಿ ಟಿಕೆಟ್ ಕೊಡುತ್ತೇನೆ ಎಂದರು. ದೇವೇಗೌಡರಿಗೆ ಮಾತು ಕೋಟ್ಟಿದ್ದೇನೆ ಬರಲ್ಲ ಎಂದು ಹೇಳಿದ್ದೆ. ಯಾರೇ ಚಾಡಿ ಹೇಳಿದರೂ ನಾನು ಕೇಳಲ್ಲ. ರೇವಣ್ಣ ಅವರೇ ನನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನಾವಿಬ್ಬರೂ ಒಂದೇ, ಮುಂದೆ ನಮ್ಮ ಮಕ್ಕಳು, ನಿಮ್ಮ ಮಕ್ಕಳು ಜೆಡಿಎಸ್ ಬೆಳೆಸಬೇಕು. ಚುನಾವಣೆಯಲ್ಲಿ ಗೆದ್ದಾದ ಬಳಿಕ ಜೆಡಿಎಸ್ ಬಿಡುತ್ತಾರೆ ಎಂದು ಹೇಳುತ್ತಾರೆ. ಆದರೆ ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ" ಎಂದು ಮಂಜು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಭಾಸ್ಕರ್ ರಾವ್ ವಿರುದ್ಧ ಆಕ್ರೋಶ: ಸೈಲೆಂಟ್ ಸುನೀಲ್ ಬೆಂಬಲಿಗರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.