ETV Bharat / state

2020ರಲ್ಲಿ ಉಂಟಾದ ಪ್ರವಾಹಕ್ಕೆ 12.82 ಕೋಟಿ ರೂ. ಪರಿಹಾರ: ಸಚಿವ ಗೋಪಾಲಯ್ಯ

author img

By

Published : Jan 26, 2021, 5:11 PM IST

district incharge minister gopalaiah republic day speech
ಹಾಸನ

ಕೋವಿಡ್ 19 ಲಾಕ್​ಡೌನ್​ ಸಂದರ್ಭದಲ್ಲಿ ಹೂವು, ಹಣ್ಣು, ತರಕಾರಿ ಬೆಳೆದು ಮಾರಾಟ ಮಾಡಲಾಗದೇ ನಷ್ಟ ಅನುಭವಿಸಿದ್ದ ರೈತರಿಗೆ 2.4 ಕೋಟಿ, ತೋಟಗಾರಿಕೆ ಇಲಾಖೆ ವತಿಯಿಂದ ತೆಂಗು ಬೆಳೆಯ ಸಮಗ್ರ ಬೇಸಾಯಕ್ಕೆ 27 ಕೋಟಿ, ಪ್ರಧಾನಮಂತ್ರಿ ಕೃಷಿ ಸಿಂಚಣಿ ಯೋಜನೆ ಅಡಿಯಲ್ಲಿ ಎರಡು ಕೋಟಿ 86 ಲಕ್ಷ, ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆಯಡಿ ಆರು ಕೋಟಿ ನಿಗದಿ ಮಾಡಲಾಗಿದೆ ಎಂದು ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಹೇಳಿದ್ರು.

ಹಾಸನ: ವರ್ಷಗಳಿಂದ ಕಾಡಿದ್ದ ಮಹಾಮಾರಿ ಕೊರೊನಾ ವಿರುದ್ಧ ಹೋರಾಡಿ ಕೊನೆಗೂ ಯಥಾಸ್ಥಿತಿಗೆ ಮರಳುತ್ತಿದ್ದೇವೆ ಎಂದರೆ ಅದಕ್ಕೆ ವೈದ್ಯಲೋಕವೇ ಕಾರಣ. ಅವರಿಗೆ ಈ ಸಂದರ್ಭದಲ್ಲಿ ನಾವು ಕೃತಜ್ಞತೆ ಸಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹೇಳಿದರು. ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 72ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಮಾಡಿ ಬಳಿಕ ಅವರು ತಮ್ಮ ಭಾಷಣ ಮಾಡಿದ್ರು.

ಹಾಸನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ಗೋಪಾಲಯ್ಯ

ಭಾರತವನ್ನು ವಿಶ್ವವೇ ತಿರುಗಿ ನೋಡುತ್ತಿದೆ:
ನಮ್ಮ ದೇಶ ಜಾಗತಿಕ ಮಟ್ಟದಲ್ಲಿ ಮುಂಚೂಣಿಯ ರಾಷ್ಟ್ರಗಳ ಸಾಲಿನಲ್ಲಿದೆ. ಇಡೀ ವಿಶ್ವವೇ ಭಾರತದ ಆರ್ಥಿಕ ಔದ್ಯೋಗಿಕ ಸಾಮಾಜಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿಯನ್ನು ಬೆರಗುಗಣ್ಣಿನಿಂದ ನೋಡುತ್ತಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಯನ್ನು ಅಮೆರಿಕ, ರಷ್ಯಾ, ಬ್ರಿಟನ್ ನಂತಹ ರಾಷ್ಟ್ರಗಳು ನಮ್ಮನ್ನು ಒಳ್ಳೆಯ ದೃಷ್ಟಿಕೋನದಿಂದ ನೋಡುತ್ತಿದ್ದು ಇದು ನಾವು ಹೆಮ್ಮೆ ಪಡುವ ವಿಚಾರವಾಗಿದೆ ಎಂದರು.
70 ಕೋಟಿ ರೂ. ಪರಿಹಾರ ರೈತರ ಖಾತೆಗೆ ವರ್ಗಾವಣೆ:
ಕೋವಿಡ್ 19 ಲಾಕ್​ಡೌನ್​ ಸಂದರ್ಭದಲ್ಲಿ ಹೂವು, ಹಣ್ಣು, ತರಕಾರಿ ಬೆಳೆದು ಮಾರಾಟ ಮಾಡಲಾಗಿದೇ ನಷ್ಟ ಅನುಭವಿಸಿದ್ದ ರೈತರಿಗೆ 2.4 ಕೋಟಿ, ತೋಟಗಾರಿಕೆ ಇಲಾಖೆ ವತಿಯಿಂದ ತೆಂಗು ಬೆಳೆಯ ಸಮಗ್ರ ಬೇಸಾಯಕ್ಕೆ 27 ಕೋಟಿ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ಎರಡು ಕೋಟಿ 86 ಲಕ್ಷ, ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆಯಡಿ ಆರು ಕೋಟಿ ನಿಗದಿ ಮಾಡಲಾಗಿದೆ. ಇದರಲ್ಲಿ 2ಕೋಟಿ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 78 ಲಕ್ಷ ಕೃಷಿ ಇಲಾಖೆ ವತಿಯಿಂದ ಮುಸುಕಿನ ಜೋಳ ಬೆಳೆಯ ಆರ್ಥಿಕ ಸಂಕಷ್ಟಕ್ಕೀಡಾದ ರೈತರಿಗೆ 36ಕೋಟಿ, ಜಲಾನಯನ ಅಭಿವೃದ್ಧಿ ಯೋಜನೆ ಅಡಿಯಲ್ಲಿ 2.8 ಲಕ್ಷ ಕೋಟಿ, ಶೌಚಾಲಯ ನಿರ್ಮಾಣಕ್ಕೆ 2 ಕೋಟಿ 19 ಲಕ್ಷ, ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸುವ ಪ್ರಿಯ ಯೋಜನೆಗಳಿಗೆ 6 ಕೋಟಿ ಗ್ರಾಮಪಂಚಾಯಿತಿಗಳಿಗೆ ಬಿಡುಗಡೆ ಮಾಡಲಾಗಿದೆ ಎಂದರು.
2020ರಲ್ಲಿ ಉಂಟಾದ ಪ್ರವಾಹಕ್ಕೆ 12.82 ಕೋಟಿ ಪರಿಹಾರ:
2010ರಲ್ಲಿ ಪ್ರವಾಹಪೀಡಿತವೆಂದು ಘೋಷಣೆಯಾಗಿದ್ದ ಜಿಲ್ಲೆಯ ಆರು ತಾಲೂಕುಗಳಲ್ಲಿ ಒಟ್ಟು 504 ಮನೆಗಳ ವಿವಿಧ ರೂಪದಲ್ಲಿ ಹಾನಿಗೀಡಾಗಿದ್ದು, ಫಲಾನುಭವಿಗಳಿಗೆ ಪರಿಹಾರ ನೀಡಲು ಕ್ರಮವಹಿಸಲಾಗಿದೆ. ಇದುವರೆಗೆ 17246 ಫಲಾನುಭವಿಗಳಿಗೆ 12. 82 ಕೋಟಿ ಪರಿಹಾರ ನೀಡಲಾಗಿದೆ. ಪ್ರವಾಹದಿಂದ ಜಿಲ್ಲೆಯಲ್ಲಿ 907 ಕಿ.ಲೋ ಗ್ರಾಮೀಣ ರಸ್ತೆ, 65 ಕಿ.ಮೀ. ರಾಜ್ಯ ಹೆದ್ದಾರಿ, 96 ಎಂಡಿಆರ್ ರಸ್ತೆ, 103 ಅಂಗನವಾಡಿ, 631 ಶಾಲೆಗಳು, 78 ಕೆರೆಕಟ್ಟೆಗಳು 94 ಸಮುದಾಯ ಭವನ 27 ಆಸ್ಪತ್ರೆ ಕಟ್ಟಡಗಳು ಮತ್ತು 51 ಸೇತುವೆಗಳು ಹಾನಿಗೊಳಗಾಗಿದ್ದು, ದುರಸ್ತಿಗೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ರು.

ಅಮೃತ್ ಯೋಜನೆಗೆ 117 ಕೋಟಿ ಅನುದಾನ ಮಂಜೂರು:
ಜಿಲ್ಲೆಯಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಗೆ ಹಾಸನ ನಗರವ್ಯಾಪ್ತಿಯಲ್ಲಿ ಅಮೃತ್ ಯೋಜನೆಯಡಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು 117 ಕೋಟಿ ಅನುದಾನ ಮಂಜೂರಾಗಿದ್ದು, ಇದರಲ್ಲಿ 114 ಕೋಟಿಗೆ ಕಾರ್ಯಾದೇಶ ನೀಡಲಾಗಿದೆ. ಶೇ. 90ರಷ್ಟು ಕಾಮಗಾರಿಯು ಪೂರ್ಣಗೊಂಡಿದ್ದು ಸದರಿ ಅನುದಾನದಲ್ಲಿ ಹಾಸನ ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೈಪ್​​ಲೈನ್ ಅಳವಡಿಸುವ ಕಾಮಗಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ದಿನದ 24 ಗಂಟೆ ಹಾಗೂ ವಾರದಲ್ಲಿ ಎರಡು ದಿನ ಸಾರ್ವಜನಿಕರಿಗೆ ಸಮರ್ಪಕ ಕುಡಿಯುವ ನೀರನ್ನು ಸರಬರಾಜು ಮಾಡುವ ಯೋಜನೆ ಇದಾಗಿದೆ. ಇದರ ಜೊತೆಗೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ 15 ಹಣಕಾಸು ಆಯೋಗದ ಯೋಜನೆಯಡಿ 20 ಕೋಟಿ ಅನುದಾನ ನಿಗದಿ ಪಡಿಸಲಾಗಿದ್ದು ಇಲ್ಲಿವರೆಗೆ 10 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.

ಕಾಲೇಜುಗಳ ನಿರ್ಮಾಣಕ್ಕೆ 170 ಕೋಟಿ ಅನುದಾನ:

ಹಾಸನ ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆವರಣದ ಮೂಲಭೂತ ಸೌಕರ್ಯಕ್ಕೆ 50 ಕೋಟಿ ಹಾಸನ ವೈದ್ಯಕೀಯ ಕಾಲೇಜಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು 50 ಕೋಟಿ ಹಾಗೂ ಮೊಸಳೆ ಹೊಸಹಳ್ಳಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣ ಕಾಮಗಾರಿಗೆ 58 ಕೋಟಿ, ಅರಸೀಕೆರೆ ಇಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ 58 ಕೋಟಿ, ಮೊಸಳೆಹೊಸಳ್ಳಿ ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣಕ್ಕೆ 12.5 ಕೋಟಿ, ಹೊಳೆನರಸೀಪುರ ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣಕ್ಕೆ 9.9 ಕೋಟಿ ಅನುದಾನದಲ್ಲಿ ಕಾಲೇಜುಗಳ ಮೂಲಭೂತ ಸೌಕರ್ಯ ಮತ್ತು ನಿರ್ಮಾಣ ಮಾಡಲು ಸರ್ಕಾರ ಕೈಗೆತ್ತಿಕೊಂಡಿದೆ ಎಂದರು.

53 ಕೋಟಿ ರೂಪಾಯಿ ವೆಚ್ಚದಲ್ಲಿ ನ್ಯಾಯಾಲಯ ಸಂಕೀರ್ಣ ಸ್ಥಾಪನೆ:

ಹಾಸನ ನಗರದಲ್ಲಿ ಕೌಟುಂಬಿಕ ನ್ಯಾಯಾಲಯ, 13 ಕೋಟಿ ವೆಚ್ಚದಲ್ಲಿ ಅರಸೀಕೆರೆ ತಾಲೂಕು ನ್ಯಾಯಾಲಯ ಸಂಕೀರ್ಣ ಮತ್ತು 40 ಕೋಟಿ ರೂಪಾಯಿ ವೆಚ್ಚದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ 15 ಕಟ್ಟಡ ಕಾಮಗಾರಿಗಳನ್ನ ಕೈಗೆತ್ತಿಕೊಳ್ಳಲಾಗಿದೆ ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ:ವಾಟ್ಸ್‌ಆ್ಯಪ್ ಪ್ರೈವಸಿ.. ನಾಗರಿಕರ ಗೌಪ್ಯತೆ ಸರ್ಕಾರದ ಜವಾಬ್ದಾರಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.