ETV Bharat / state

ಅರ್ಧ ಕೋಟಿಗೂ ಅಧಿಕ ಹಣ ದರೋಡೆ ಪ್ರಕರಣ: ಆರೋಪಿಗಳು ಅಂದರ್​​​

author img

By

Published : Mar 20, 2020, 7:04 PM IST

police arrested four accused at Hassan
ಅರ್ಧ ಕೋಟಿಗೂ ಅಧಿಕ ಹಣ ದೋಚಿದ್ದ ಪ್ರಕರಣ

ಹಾಸನದಲ್ಲಿ ಅರ್ಧ ಕೋಟಿಗೂ ಅಧಿಕ ಹಣವನ್ನು ದೋಚಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಾಸನ: ಮಾರಕಾಸ್ತ್ರಗಳನ್ನು ತೋರಿಸಿ ಅರ್ಧ ಕೋಟಿಗೂ ಅಧಿಕ ಹಣವನ್ನು ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಚನ್ನರಾಯಪಟ್ಟಣದ ಆದರ್ಶ (27), ದಿವಾಕರ (24), ಮಂಜುನಾಥ್ (23) ಮತ್ತು ಶಿವಮೊಗ್ಗ ಮೂಲದ ವಸಂತ (20) ಬಂಧಿತ ಆರೋಪಿಗಳು. ಮಾ. 18ರಂದು ಚನ್ನರಾಯಪಟ್ಟಣದ ಬೆಲಸಿಂದ ಪಾರ್ಕ್​ ಬಳಿ ಲಾಂಗ್ ತೋರಿಸಿ ಹಣ ದೋಚಿದ್ದರು. ಈ ಸಂಬಂಧ ಕಂಪನಿ ನೌಕರ ಆದರ್ಶ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದ.

ನುಗ್ಗೇಹಳ್ಳಿ ಬಸ್ ನಿಲ್ದಾಣದ ಬಳಿ ಆರೋಪಿ ದಿವಾಕರ್ ಇರುವ ಮಾಹಿತಿ ಕಲೆಹಾಕಿದ ಪೊಲೀಸರು ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಣ ಕಳೆದುಕೊಂಡವನೇ ಪ್ರಕರಣದ ಸೂತ್ರಧಾರ ಎಂಬ ಮಾಹಿತಿ ತನಿಖೆಯಿಂದ ಬಯಲಾಗಿದ್ದು, ಐಷಾರಮಿ ಜೀವನಕ್ಕಾಗಿ ಇಂತಹ ಕೃತ್ಯ ಮಾಡಿರುವುದಾಗಿ ತನಿಖೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಎಸ್ಪಿ ಶ್ರೀನಿವಾಸಗೌಡ ಮಾರ್ಗದರ್ಶನದಲ್ಲಿ ಡಿವೈಎಸ್​​ಪಿ ಲಕ್ಷ್ಮೇಗೌಡ, ಸಿಪಿಐ ಕುಮಾರ್ ಮತ್ತು ಪಿಎಸ್​ಐ ಕಿರಣ್ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಿದ್ದು, ಆರೋಪಿಗಳ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಸಿಬ್ಬಂದಿಗೆ ಶ್ಲಾಘಿಸಿದ್ರು. ಇನ್ನು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.