ETV Bharat / state

ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯದಂತೆ ರಾಜ್ಯಪಾಲರಿಗೆ ಮನವಿ: ಪ್ರಮೋದ್ ಮುತಾಲಿಕ್

author img

By

Published : Jun 24, 2023, 12:23 PM IST

Updated : Jun 24, 2023, 12:41 PM IST

ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್
ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್

ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವ ನಿರ್ಧಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ಧಾರೆ.

ಹಾಸನ: ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯದಂತೆ ರಾಜ್ಯಪಾಲರಿಗೆ ಒತ್ತಾಯ ಮಾಡುವ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಶ್ರೀರಾಮಸೇನೆಯ ರಾಜ್ಯಕಾರಣಿ ಸಭೆಯ ನಂತರ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ’’ಪಠ್ಯ ಪುಸ್ತಕಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರ ಕೆಲ ವಿಷಯಗಳನ್ನು ವಾಪಸ್ ಪಡೆಯುತ್ತೇವೆ ಅಂದಿದ್ದಾರೆ. ಭಗತ್ ಸಿಂಗ್, ಸಾವರ್ಕರ್ ಸೇರಿದಂತೆ ಮೂರು ಪಾಠ ವಾಪಾಸ್ ತೆಗೆದುಕೊಳ್ಳುತ್ತೇವೆ ಅಂದ್ದಿದ್ದಾರೆ. ಸಾವರ್ಕರ್, ಭಗತ್ ಸಿಂಗ್ ಇವರೆಲ್ಲಾ ದೇಶಕ್ಕಾಗಿ ಜೀವ ಮುಡುಪಿಟ್ಟವರು. ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯ ಭದ್ರತೆ ಬಗ್ಗೆ ಕಾಳಜಿ ಇಲ್ಲ. ಉತ್ತಮ ವಿಚಾರ ಯಾರು ಬರೆದರೆ ಏನು? ವಿಷಯ ಮುಖ್ಯ. ನೀವು ಶಿಕ್ಷಣ ಪಡೆಯುವ ಮಕ್ಕಳ ವಿಚಾರದಲ್ಲಿ ರಾಜಕೀಯ ಮಾಡಬೇಡಿ‘‘ ಎಂದರು.

ಅಧಿಕಾರಕ್ಕೆ ಬಂದರೆ ಏನು ಬೇಕಾದರೂ ಮಾಡಬಹುದೇನು? ಇದ್ರಿಷ್ ಪಾಷಾ ಎಂಬ ಗೋವು ಕಳ್ಳನಿಗೆ 25 ಲಕ್ಷ ಕೊಟ್ಟಿದ್ದು, ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು. ಇದು ರೈತರಿಗೆ ಮಾಡಿದ ದ್ರೋಹ ಎಂದು ಕಿಡಿಕಾರಿದರು. ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಬಂದ ಮೇಲೆ ಕೆಲವರಿಗೆ ಮದ ಬಂದಿದೆ. ಹಿಂದೂ ಸಂಘಟನೆ ಬ್ಯಾನ್ ಮಾಡುತ್ತೇವೆ, ಹಲಾಲ್, ಹಿಜಾಬ್ ಬಗ್ಗೆ ಮಾತನಾಡಿದರೆ ಒದ್ದು ಒಳಗೆ ಹಾಕುತ್ತೇವೆ ಅಂತ ಕೆಲವು ಮಂತ್ರಿಗಳೇ ಹೇಳುತ್ತಿದ್ದಾರೆ. ಇಂದಿರಾ ಗಾಂಧಿ ಕಾಲದಲ್ಲಿ ಎಮರ್ಜನ್ಸಿ ಹೇರಿದ್ದಾಗ ಹಿಂದೂ ಸಂಘಟನೆ ಹೆದರಲಿಲ್ಲ ಎಂದು ಸರ್ಕಾರದ​ ವಿರುದ್ಧ ಮುತಾಲಿಕ್​​ ಹರಿಹಾಯ್ದರು.

ಮುಂದುವರಿದು ಮಾತನಾಡಿದ ಅವರು, ಮತಾಂತರ ಮತ್ತು ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತಂದು ಬಿಜೆಪಿಯವರು ನಾಟಕ ಮಾಡಿದರು. ಆದರೆ, ಒಂದೇ ಒಂದು ಗೋ ರಕ್ಷಣೆ ಮಾಡಲಿಲ್ಲ. ನಿಮಗೆ ಮಾಹಿತಿ ಇದ್ದರು, ನಾವು ಮಾಹಿತಿ ಕೊಟ್ಟರೂ ಒಂದೇ ಒಂದು ಗೋವು ಹಿಡಿಯಲಿಲ್ಲ. ಮತಾಂತರ ಕಾಯಿದೆ ಜಾರಿ ಕೇವಲ ಪೇಪರ್​ನಲ್ಲಿ ತಂದರಷ್ಟೆ. ಕಾನೂನು ಬಾಹಿರ ಎಂದು ಒಂದೇ ಒಂದು ಚರ್ಚ್ ಅ​ನ್ನು ತೆರವುಗೊಳಿಸಲು ಬಿಜೆಪಿಗೆ ಆಗಲಿಲ್ಲ. ಇನ್ನು ಕಾಂಗ್ರೆಸ್​ನದ್ದು ಅದೇ ಕಥೆ ಎಂದರು.

ಅಲ್ಲದೆ, ಗೋ ಹತ್ಯೆ ಬಿಲ್ ಪಾಸ್ ಮಾಡಬಾರದು ಅಂತ ರಾಜ್ಯಪಾಲರಿಗೆ ನಾವು ಮನವಿ ಪತ್ರ ಸಲ್ಲಿಸುತ್ತೇವೆ ಎಂದು ಮುತಾಲಿಕ್​ ಹೇಳಿದರು.

ಇದನ್ನೂ ಓದಿ: ಚುನಾವಣಾ ಪ್ರಣಾಳಿಕೆಯಲ್ಲಿ ಹೇಳುವಾಗ ಜ್ಞಾನ ಇರಲಿಲ್ಲವಾ?: ಕಾಂಗ್ರೆಸ್ ವಿರುದ್ಧ ಈಶ್ವರಪ್ಪ ಕಿಡಿ ..ಕಿಡಿ!

Last Updated :Jun 24, 2023, 12:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.