ETV Bharat / state

ಕೇಸರಿ, ಕುಂಕುಮ ಮನುವಾದದ ಸಂಕೇತವೇ? ಸಿದ್ದರಾಮಯ್ಯಗೆ ಸಿ.ಸಿ ಪಾಟೀಲ್ ಪ್ರಶ್ನೆ

author img

By

Published : Feb 7, 2023, 10:19 AM IST

Minister CC  Patil
ಸಿ.ಸಿ ಪಾಟೀಲ್

ಕೇಸರಿ ಕಂಡ್ರೆ ಭಯ ಆಗತ್ತದೆ, ಕುಂಕುಮ ಕಂಡರೆ ಭಯ ಆಗತ್ತದೆ ಅಂತಾ ಹೇಳಿದವರ್ಯಾರು. ಕೇಸರಿ ಮನುವಾದಿನಾ? ಕುಂಕುಮ ಮನುವಾದೀನಾ? ಸಿದ್ದರಾಮಯ್ಯನವರ ಮನುವಾದದ ವಿರೋಧಿ ಹೇಳಿಕೆಗೆ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಪ್ರತಿಕ್ರಿಯೆ.

ಕಾಂಗ್ರೆಸ್​​ ನಾಯಕರ ವಿರುದ್ಧ ಸಿ.ಸಿ ಪಾಟೀಲ್ ವಾಗ್ದಾಳಿ..

ಗದಗ: ನಾನು ಹಿಂದೂ ವಿರೋಧಿ ಅಲ್ಲ. ಹಿಂದುತ್ವ ಹಾಗೂ ಮನುವಾದದ ವಿರೋಧಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್​​ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, 'ಕೇಸರಿ, ಕುಂಕುಮ ಕಂಡರೆ ಭಯ ಆಗತ್ತದೆ ಎಂದು ಹೇಳಿದವರು ಯಾರು?. ಇದೇ ಸಿದ್ದರಾಮಯ್ಯ ತಾನೇ. ಹಾಗಾದರೆ ಕೇಸರಿ ಮನುವಾದಿನಾ?, ಕುಂಕುಮ ಮನುವಾದಿನಾ?' ಎಂದು ಪ್ರಶ್ನಿಸಿದ್ದಾರೆ.

ಕೇಸರಿ ಮತ್ತು ಕುಂಕುಮ ಹಿಂದೂ ಮತ್ತು ಹಿಂದುತ್ವದ ಸಂಕೇತ. ವಿನಾ ಕಾರಣ ಚುನಾವಣೆಯಲ್ಲಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನೋ ಹಾಗಾಗಿದೆ ಇವರ ಹೇಳಿಕೆ. ಕೊನೆ ಹಂತದ ಸರ್ವೇ ವರದಿ ಬರುತ್ತಿರುವುದರಿಂದ ಅವರು ಕುಗ್ಗಿದ್ದಾರೆ. ಕಾಂಗ್ರೆಸ್ 150-160 ಸ್ಥಾನ ಗೆಲ್ಲುವುದಿಲ್ಲ. ಅಷ್ಟು ಸ್ಥಾನ ಗೆದ್ದರೆ ನಾನು ರಾಜಕೀಯದಿಂದ ನಿವೃತ್ತಿ ಆಗುತ್ತೇನೆ' ಎಂದು ಸಿ ಸಿ ಪಾಟೀಲ್​ ಸವಾಲು ಹಾಕಿದರು.

ಕಾಂಗ್ರೆಸ್​ ನಾಯಕರ ವಿರುದ್ಧ ವಾಗ್ದಾಳಿ: ಆತ್ಮಸಾಕ್ಷಿಗೆ ಅನುಗುಣವಾಗಿ ರಾಜಕೀಯ ಮಾಡಬೇಕು. ಜನರ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ಸಚಿವ ಸಿ ಸಿ ಪಾಟೀಲ್​​ ಕಾಂಗ್ರೆಸ್​ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಗದಗ ಜಿಲ್ಲೆಯನ್ನು ಯಾವ ರೀತಿ ಅಭಿವೃದ್ಧಿ ಮಾಡಲಾಗಿದೆ ಅನ್ನೋದನ್ನು ಎಲ್ಲರು ನೋಡುತ್ತಿದ್ದಾರೆ. ನಾನು ಲೋಕೋಪಯೋಗಿ ಇಲಾಖೆಯ ಸಚಿವನಾದ ಬಳಿಕ ಇಲ್ಲಿಯ ರಸ್ತೆಗಳು ಡಾಂಬರ್​ ಕಾಣುತ್ತಿವೆ. ಅದಕ್ಕೂ ಮುನ್ನ ಇಲ್ಲಿನ ರಸ್ತೆಗಳು ಏನನ್ನು ಕಂಡಿರಲಿಲ್ಲ. ಇವರು (ಕಾಂಗ್ರೆಸ್​) ಈ ಹಿಂದೆ 5 ವರ್ಷ ಆಡಳಿತ ನಡೆಸಿದರು. ಸತತ ರಾಜಕೀಯ ಕುಟುಂಬದಿಂದ ಬೆಳೆದು ಬಂದವರು. ಕಾಂಗ್ರೆಸ್​ನವರ ಕೊಡುಗೆ ಏನಿದೆ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್​ ಕೊಡುಗೆ ಶೂನ್ಯ: ಮಹದಾಯಿಗೆ ಕಾಂಗ್ರೆಸ್​ ಕೊಡುಗೆ ಶೂನ್ಯ. 'ಕೃಷ್ಣೆಯ ಕಣ್ಣೀರು' ಅಂತಾ ಪುಸ್ತಕ ಬರೆದರು. ವರ್ಷಕ್ಕೆ 10 ಸಾವಿರ ಕೋಟಿ ರೂಪಾಯಿ ಬಜೆಟ್​ನಲ್ಲಿ ಮೀಸಲಿಡುತ್ತೇವೆ ಅಂತಾ ಹೇಳಿದ್ದರು. 1 ಸಾವಿರೂ ಕೋಟಿ ರೂಪಾಯಿ ಸಹ ಇಡಲಿಲ್ಲ. ಮಹದಾಯಿ ಯೋಜನೆಯಲ್ಲಿ ಕಾಂಗ್ರೆಸ್ ಕೊಡುಗೆ ಏನೂ ಇಲ್ಲ. ಆತ್ಮಸಾಕ್ಷಿ ಅನುಗುಣವಾಗಿ ಅನುಗುಣವಾಗಿ ಮತನಾಡಬೇಕು. ಕಳಸಾ ಬಂಡೂರಿ ಅಭಿವೃದ್ಧಿ ಎಷ್ಟೋ ಮುಂದುವರೆದಿದ್ದರೆ ಅದು ಬಿಜೆಪಿಯಿಂದ ಮಾತ್ರ. ಇವರಿಂದ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ದೂರಿದರು.

ಗೋವಾ ಚುನಾವಣೆ ನಡೆಯುತ್ತಿದ್ದ ವೇಳೆ ಇವರ ಅಧಿನಾಯಕಿ ಸೋನಿಯಾ ಒಂದು ಹನಿ ನೀರನ್ನು ಕರ್ನಾಟಕ್ಕೆ ಕೊಡುವುದಿಲ್ಲ ಅಂತಾ ಹೇಳಿದ್ದರು. ಇವರ ಹೇಳಿಕೆಯನ್ನು ರಾಜ್ಯದ ಯಾವುದೇ ಕಾಂಗ್ರೆಸ್​ ನಾಯಕ ವಿರೋಧ ವ್ಯಕ್ತಪಡಿಸಲಿಲ್ಲ. ಹರಿದು ಬರುತ್ತಿದ್ದ 2 ಟಿಎಂಸಿ ನೀರಿಗೆ ಅಡ್ಡಗೋಡೆಯನ್ನು ಕಟ್ಟಿದ್ದೇ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ಸಾಧನೆ. ಅದರೊಳಗೆ ಸಚಿವ ಸಂಪುಟದ ಸದಸ್ಯರಾದ ಹೆಚ್. ಕೆ ಪಾಟೀಲ್​ ಅವರ ಸಾಧನೆ ಕೂಡ ಸೇರಿದೆ ಎಂದು ಸಚಿವರು ಕುಟುಕಿದರು.

ಇದನ್ನೂ ಓದಿ: ನಾನು ಹಿಂದೂ ವಿರೋಧಿಯಲ್ಲ, ಹಿಂದುತ್ವದ ವಿರೋಧಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಹೆಚ್​ಡಿಕೆ ಮಾತಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ: ಇದೇ ವೇಳೆ ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಸಿ.ಸಿ ಪಾಟೀಲ್​​, 'ಜನರ ವಿಚಾರವನ್ನು ಬೇರೆ ಕಡೆ ಸೆಳೆಯುವ ಕಲೆ ಕುಮಾರಸ್ವಾಮಿ ಅವರಿಗೆ ಗೊತ್ತು. ಸತತ ನಾಲ್ಕು ಬಾರಿ ಪ್ರಹ್ಲಾದ್​ ಜೋಶಿ ಚುನಾಯಿತರಾಗಿ ಸಾಧನೆ ಮೂಲಕ ಈ ಹಂತಕ್ಕೆ ಬಂದಿದ್ದಾರೆ. ಪ್ರತಿ ದಿನ ಪ್ರಧಾನಮಂತ್ರಿಗಳ ಜೊತೆಗೆ, ಗೃಹ ಸಚಿವರ ಜೊತೆಗೆ ಪ್ರತಿಕ್ರಿಯಿಸುವಂತ ಹಂತಕ್ಕೆ ಬೆಳೆದು ನಿಂತಿದ್ದಾರೆ. ಅಂತಹ ಖಾತೆಗೆ ಬರಬೇಕಾದರೆ ಜಾತಿಯಿಂದ ಬರಲು ಸಾಧ್ಯವಿಲ್ಲ. ಜಾತಿಯಿಂದ ಬರುವುದು ಜೆಡಿಎಸ್​​ ಪಕ್ಷದಲ್ಲಿ ಮಾತ್ರ ಇದೆ. ಕುಮಾರಸ್ವಾಮಿ ಮಾತಿಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು.

ಇದನ್ನೂ ಓದಿ: ಹಿಂದೂ ಬೇರೆ ಹಿಂದುತ್ವ ಬೇರೆ ಎನ್ನುವ ವಾದವೇ ಸರಿಯಿಲ್ಲ: ಶಾಸಕ ಮಹೇಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.