ETV Bharat / state

ಮಲಪ್ರಭಾ ನದಿಗೆ ಜಲಾಶಯದಿಂದ ನೀರು:ಗದಗದಲ್ಲಿ ಮತ್ತೆ ನೆರೆ ಭೀತಿ

author img

By

Published : Aug 16, 2020, 1:33 PM IST

ಮಲಪ್ರಭಾ ಜಲಾಶಯದಿಂದ ನೀರು ಬಿಡುಗಡೆ ಹಿನ್ನೆಲೆ ಗದಗ ಜಿಲ್ಲೆಯ ಹಲವು ಹಳ್ಳಿಗಳಿಗೆ ಪ್ರವಾಹದ ಭೀತಿ ಎದುರಾಗಿದೆ.

fdfdf
ಗದಗ ಜಿಲ್ಲೆಯಲ್ಲಿ ಮತ್ತೆ ನೆರೆ ಭೀತಿ

ಗದಗ: ಜಲಾಶಯದಿಂದ 13 ಸಾವಿರ ಕ್ಯೂಸೆಕ್​ ನೀರು ಮಲಪ್ರಭಾ ನದಿಗೆ ಬಿಡುಗಡೆ ಮಾಡಿರುವ ಹಿನ್ನೆಲೆ ಜಿಲ್ಲೆಯ ನದಿ ಪಾತ್ರದ ಗ್ರಾಮಸ್ಥರಿಗೆ ಆತಂಕ ಶುರುವಾಗಿದೆ.

ನರಗುಂದ ಮತ್ತು ರೋಣ ತಾಲೂಕಿನ ಸುಮಾರು 16 ಹಳ್ಳಿಗಳಿಗೆ ಪ್ರವಾಹದ ಭೀತಿ ಎದುರಾಗಿದೆ. ಕೊಣ್ಣೂರ, ಕಲ್ಲಾಪುರ, ಲಖಮಾಪೂರ, ಶಿರೋಳ, ಹೊಳೆ ಆಲೂರು, ಮೆಣಸಿಗಿ, ಹೊಳೆ ಹಡಗಲಿ, ಹೊಳೆ ಮಣ್ಣೂರು ಸೇರಿದಂತೆ ಹಲವು ಹಳ್ಳಿಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ಈಗಾಗಲೇ ಕಳೆದ ವರ್ಷದ ಪ್ರವಾಹದಿಂದಾಗಿ ಈ ಹಳ್ಳಿಗಳು ಸಾಕಷ್ಟು ಹಾನಿಗೊಳಗಾಗಿದ್ದವು. ಸದ್ಯ ಮಲಪ್ರಭಾ ಜಲಾಶಯ ಒಳಹರಿವು 19,000 ಇದ್ದು ಹೊರಹರಿವು 12,000 ಕ್ಯೂಸೆಕ್​ ಇದೆ.

ಗದಗ ಜಿಲ್ಲೆಯಲ್ಲಿ ಮತ್ತೆ ನೆರೆ ಭೀತಿ

ಜೊತೆಗೆ ಕಾಲುವೆಗಳಿಗೆ 1,300 ಕ್ಯೂಸೆಕ್ ನೀರನ್ನು​ ಹರಿ ಬಿಡಲಾಗುತ್ತಿದ್ದು, ಸದ್ಯ ಜಲಾಶಯದ ನೀರಿನ ಮಟ್ಟ 2,076 ಅಡಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಡಳಿತ ಲಖಮಾಪೂರ ಗ್ರಾಮಸ್ಥರನ್ನು ಬೇರೆಡೆ ಸ್ಥಳಾಂತರ ಆಗಲು ಗ್ರಾಮಸ್ಥರಿಗೆ ಸೂಚನೆ ನೀಡಲು ಮುಂದಾಗಿದೆ. ಜೊತೆಗೆ ಅಗತ್ಯ ಬಿದ್ದಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.