ETV Bharat / state

ಸಚಿವ ಸಿಸಿ ಪಾಟೀಲ್ ವಿರುದ್ಧ ದಿಂಗಾಲೇಶ್ವರ ಶ್ರೀಗಳ ಪ್ರತಿಭಟನೆ: ಶ್ರೀಗಳನ್ನು ತಡೆದ ಪೊಲೀಸರು

author img

By

Published : Apr 28, 2022, 8:42 AM IST

dingaleshwara-swamij-protest-against-cc-patil
ಸಚಿವ ಸಿಸಿ ಪಾಟೀಲ್ ವಿರುದ್ಧ ದಿಂಗಾಲೇಶ್ವರ ಶ್ರೀಗಳ ಪ್ರತಿಭಟನೆ : ಶ್ರೀಗಳನ್ನು ತಡೆದ ಪೊಲೀಸರು

ಸಚಿವ ಸಿ ಸಿ ಪಾಟೀಲ್ ದಿಂಗಾಲೇಶ್ವರ ಸ್ವಾಮೀಜಿಗಳ ವಿರುದ್ಧ ಆರೋಪ ಮಾಡಿರುವ ಬಗ್ಗೆ, ಶ್ರೀಗಳು ಸಚಿವ ಸಿಸಿ ಪಾಟೀಲ್ ಮನೆ ಮುಂದೆ ಪ್ರತಿಭಟನೆ ನಡೆಸಲು ಬಂದಿದ್ದಾರೆ. ಈ ವೇಳೆ ಪ್ರತಿಭಟನೆ ನಡೆಸದಂತೆ ಪೊಲೀಸರು ತಡೆದಿದ್ದಾರೆ.

ಗದಗ​: ರಾಜ್ಯ ಸರಕಾರದ ವಿರುದ್ಧ ದಿಂಗಾಲೇಶ್ವರ ಶ್ರೀಗಳು ಮಾಡಿದ್ದ ಶೇ.30 ಕಮೀಷನ್ ಆರೋಪ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಹಲವು ಪ್ರಭಾವಿ ಸಚಿವರಗಳು ದಿಂಗಾಲೇಶ್ವರ ಶ್ರೀಗಳ ವಿರುದ್ಧ ಮುಗಿಬಿದ್ದಿದ್ದರು. ಅದರಲ್ಲೂ ಸಚಿವ ಸಿ ಸಿ ಪಾಟೀಲ್​ ಶ್ರೀಗಳ ವೈಯಕ್ತಿಕ ವಿಷಯಗಳ ಬಗೆಗೆ ಹೇಳಿಕೆ ನೀಡಿದ್ದು, ಈ ಬಗ್ಗೆ ಶ್ರೀಗಳು ಸಚಿವ ಸಿಸಿ ಪಾಟೀಲ್​ ಮನೆ ಮುಂದೆ ಧರಣಿ ನಡೆಸಲು ತೀರ್ಮಾನಿಸಿದ್ದರು. ತಮ್ಮ ಪೂರ್ವಾಪರದ ಬಗ್ಗೆ ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿ ಸಚಿವರ ಮನೆ ಮುಂದೆ ಧರಣಿಗೆ ಮುಂದಾಗಿದ್ದರು.

ಸಚಿವ ಸಿಸಿ ಪಾಟೀಲ್ ವಿರುದ್ಧ ದಿಂಗಾಲೇಶ್ವರ ಶ್ರೀಗಳ ಪ್ರತಿಭಟನೆ,ಪ್ರತಿಭಟನೆಗೆ ಆಗಮಿಸಿದ ಶ್ರೀಗಳನ್ನು ತಡೆದ ಪೊಲೀಸರು

ಸಚಿವ ಸಿಸಿ ಪಾಟೀಲ್ ಮತ್ತು ಶಿರಹಟ್ಟಿ ಮಠದ ಫಕೀರ್​​ ದಿಂಗಾಲೇಶ್ವರ ಶ್ರೀಗಳ ನಡುವೆ ಜಂಗೀಕುಸ್ತಿ ಏರ್ಪಟ್ಟಿದ್ದು, ದಿಂಗಾಲೇಶ್ವರ ಶ್ರೀಗಳ ​ ಪೂರ್ವಾಶ್ರಮದ ವಿಚಾರಗಳ ಕುರಿತು ಮಾತನಾಡಿರುವ ಬೆನ್ನಲ್ಲೆ ಸಚಿವ ಸಿಸಿ ಪಾಟೀಲ್ ವಿರುದ್ಧ ಅವರ ಮನೆ ಮುಂದೆ ಪ್ರತಿಭಟನೆ ನಡೆಸಲು ಬಂದಿದ್ದಾರೆ. ಶ್ರೀಗಳು ನರಗುಂದದಲ್ಲಿರುವ ಸಚಿವರ ಮನೆಯ ಬಳಿ ಬರುತ್ತಿರುವಂತೆ ಪೊಲೀಸರು ಶ್ರೀಗಳನ್ನು ತಡೆದಿದ್ದಾರೆ.

ಈ ಬಗ್ಗೆ ಶ್ರೀಗಳು ಕೇವಲ 30 ನಿಮಿಷಗಳ ಕಾಲ ಶಾಂತಿಯುತ ಪ್ರತಿಭಟನೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡರೂ ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ಶ್ರೀಗಳು ಅರ್ಧಕ್ಕೆ ತಮ್ಮ ಪ್ರತಿಭಟನೆ ಕೈ ಬಿಟ್ಟು ಬಂದ ದಾರಿಗೆ ಸುಂಕ ಇಲ್ಲದಂತೆ ಶಿರಹಟ್ಟಿಗೆ ಮರಳಿದ್ದಾರೆ. ಸಚಿವ ಸಿಸಿ ಪಾಟೀಲ್ ಪೊಲೀಸರ ಮೂಲಕ ನಮ್ಮ ಪ್ರತಿಭಟನೆ ಹತ್ತಿಕ್ಕಿದ್ದಾರೆ ಎಂದು ಆರೋಪಿಸಿದ್ದು, ಸಿ ಸಿ ಪಾಟೀಲ್ ಈ ಬಗ್ಗೆ ಕ್ಷಮೆ ಕೇಳಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿ ಆಗ್ರಹಿಸಿದ್ದಾರೆ.

ಆದರೆ, ಶ್ರೀಗಳು ಸ್ಥಳಕ್ಕೆ ಆಗಮಿಸುವ ಬಗ್ಗೆ ತಿಳಿದ ಸಿಸಿ ಪಾಟೀಲ್ ಬೆಂಬಲಿಗರು ಸಚಿವರ ಮನೆ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸಿಸಿ ಪಾಟೀಲ್ , ದಿಂಗಾಲೇಶ್ವರ ಶ್ರೀಗಳ ಪ್ರತಿಭಟನೆಗೆ ನಮ್ಮ ವಿರೋಧವಿಲ್ಲ. ಈ ಬಗ್ಗೆ ಪೊಲೀಸರಿಗೆ ನಾನು ಯಾವುದೇ ರೀತಿಯ ನಿರ್ದೇಶನ ನೀಡಿಲ್ಲ. ಅವರು ಅವರ ಕೆಲಸ ಮಾಡುತ್ತಿದ್ದಾರೆ. ಶ್ರೀಗಳ ಮೇಲಿರುವ ಕೇಸ್​ಗಳ ಬಗ್ಗೆಯೇ ನಾನು ಆರೋಪ ಮಾಡಿದ್ದು, ಹೊಸದಾಗಿ ನಾನೇನು ಹೇಳಿಲ್ಲ. ನಾನು ಯಾಕೆ ಅವರನ್ನು ಕ್ಷಮೆ ಯಾಕೆ ಕೇಳಬೇಕು ಎಂದು ಹೇಳಿದ್ದಾರೆ.

ಓದಿ : ಬಾಲಿವುಡ್ ನಟ ಅಜಯ್ ದೇವಗನ್ ಅಧಿಕ ಪ್ರಸಂಗತನ ಮೆರೆದಿದ್ದಾರೆ : ಹೆಚ್ ಡಿಕೆ, ಸಿದ್ದು ಕಿಡಿ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.