ETV Bharat / state

ಯೋಗೇಶ್ ಗೌಡ ಕೊಲೆ ಪ್ರಕರಣ.. ಖಾಸಗಿ ಹೋಟೆಲ್‌ಗೆ ಭೇಟಿ‌ ನೀಡಿ ಮಾಹಿತಿ‌ ಕಲೆ ಹಾಕಿದ ಸಿಬಿಐ

author img

By

Published : Nov 11, 2020, 2:15 PM IST

Updated : Nov 11, 2020, 3:13 PM IST

CCB  Visit a private hotel
ಯೋಗೇಶ್ ಗೌಡ ಕೊಲೆ ಪ್ರಕರಣ: ಖಾಸಗಿ ಹೋಟೆಲ್‌ಗೆ ಭೇಟಿ‌ ನೀಡಿ ಮಾಹಿತಿ‌ ಕಲೆ ಹಾಕಿದ ಸಿಬಿಐ

ಹುಬ್ಬಳ್ಳಿ: ಯೋಗೇಶ್​ ಗೌಡ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐ ಅಧಿಕಾರಿಗಳು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಈಗಾಗಲೇ ಮಾಜಿ‌ ಸಚಿವ ವಿನಯ್​ ಕುಲಕರ್ಣಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಅಧಿಕಾರಿಗಳು ಕಾಂಗ್ರೆಸ್ ಮುಖಂಡ ನಾಗರಾಜ್​ ಗೌರಿ ಅವರನ್ನ ವಿಚಾರಣೆಗೆ ಒಳಪಡಿಸಿದ್ದಾರೆ.

ಯೋಗೇಶ್ ಗೌಡ ಕೊಲೆ ಪ್ರಕರಣ.. ಖಾಸಗಿ ಹೋಟೆಲ್‌ಗೆ ಭೇಟಿ‌ ನೀಡಿ ಮಾಹಿತಿ‌ ಕಲೆ ಹಾಕಿದ ಸಿಬಿಐ

ಯೋಗೇಶ್ ಗೌಡ ಪತ್ನಿ ಮಲ್ಲಮ್ಮ ಕಾಂಗ್ರೆಸ್​ ಪಕ್ಷ ಸೇರುವಾಗ ನಗರದ ಖಾಸಗಿ ಹೋಟೆಲ್​ನಲ್ಲಿ ಬಸವರಾಜ್​ ಮುತ್ತಗಿ ಹಾಗೂ ನಾಗರಾಜ್​ ಗೌರಿ ಎಂಬುವವರು ಸಭೆ ನಡೆಸಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಸಿಬಿಐ ಅಧಿಕಾರಿಗಳು, ಅಂದು ಆರೋಪಿಗಳು ಸಭೆ ನಡೆಸಿದ್ದ ಖಾಸಗಿ ಹೋಟೆಲ್​ಗೆ ಭೇಟಿ‌ ನೀಡಿ ಮಾಹಿತಿ ‌ಕಲೆ ಹಾಕಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಈ ನಡುವೆ ಬಸವರಾಜ ಮುತ್ತಗಿ ಅವರನ್ನ ತೀವ್ರ ವಿಚಾರಣೆಗೆ ಒಳಪಡಿಸಿರುವ ಸಿಬಿಐ ಅಧಿಕಾರಿಗಳು, ಘಟನೆಗೆ ಸಂಬಂಧಿಸಿದಂತೆ ಇಂಚಿಂಚು ಮಾಹಿತಿ ಕಲೆ ಹಾಕುತ್ತಿದೆ ಎಂದು ಹೇಳಲಾಗುತ್ತಿದೆ.

Last Updated :Nov 11, 2020, 3:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.