ETV Bharat / state

ಹುಬ್ಬಳ್ಳಿ : ರೈಲ್ವೆ ಹಳಿ ಮೇಲೆ ಅಪರಿಚಿತ ಶವ ಪತ್ತೆ

author img

By

Published : Feb 10, 2021, 3:40 PM IST

unknown dead body found in railway track at Hubli
ರೈಲ್ವೆ ಹಳಿ ಮೇಲೆ ಅಪರಿಚಿತ ಶವ ಪತ್ತೆ

ಧಾರವಾಡ- ಕ್ಯಾರಕೊಪ್ಪ ರೈಲ್ವೆ ನಿಲ್ದಾಣದ ನಡುವೆ ಅಪರಿಚಿತ ಶವ ಪತ್ತೆಯಾಗಿದೆ.

ಹುಬ್ಬಳ್ಳಿ : ರೈಲ್ವೆ ಪೊಲೀಸ್ ಠಾಣೆ ಸರಹದ್ದಿನ ಧಾರವಾಡ- ಕ್ಯಾರಕೊಪ್ಪ ರೈಲ್ವೆ ನಿಲ್ದಾಣದ ನಡುವೆ ಅಪರಿಚಿತ ಶವ ಪತ್ತೆಯಾಗಿದೆ.

ಸುಮಾರು 30 ರಿಂದ 35 ವರ್ಷದ‌ ಯುವಕ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಮೃತ ಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೃತನು 5.5 ಅಡಿ ಎತ್ತರದ ಗೋದಿ ಮೈಬಣ್ಣ, ನೀಳವಾದ ಮೂಗು, ಗುಂಗುರು ಕೂದಲು, ದಪ್ಪ ಮೀಸೆ ಗಡ್ಡ ಹೊಂದಿರುವ ಸಾಧಾರಣ ಶರೀರದ ವ್ಯಕ್ತಿಯಾಗಿದ್ದಾನೆ. ಹಳದಿ ಬಣ್ಣದ ಟಿ ಶರ್ಟ್, ಅದರ ಮೇಲೆ ಕಪ್ಪು ಮತ್ತು ಕೆಂಪು ಮಿಶ್ರಿತ ಜಾಕೆಟ್ ಧರಿಸಿದ್ದಾನೆ.

ಈ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿದೆ. ಅಪರಿಚಿತ ಶವದ ಗುರುತು ಪತ್ತೆಯಾದವರು ಅಥವಾ ವಾರಸುದಾರರು ದೂರವಾಣಿ ಸಂಖ್ಯೆ 0836-2384751 ಹಾಗೂ ಮೊಬೈಲ್ ಸಂಖ್ಯೆ 9480802126 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.