ETV Bharat / state

ದೇವೇಗೌಡರು ಹಳ್ಳಿಯಲ್ಲಿ ಹುಟ್ಟಿ ಪ್ರಧಾನಿ ಆದರು: ಸಿದ್ದರಾಮಯ್ಯ ರಾಷ್ಟ್ರದ ರಾಜಕಾರಣಕ್ಕೆ ಹೋದರೆ ತಪ್ಪಿಲ್ಲ : ಹೆಚ್ ವಿಶ್ವನಾಥ

author img

By ETV Bharat Karnataka Team

Published : Sep 5, 2023, 3:11 PM IST

ಎಂಎಲ್​ಸಿ ವಿಶ್ವನಾಥ್ ಹಾಗೂ ಮಾಜಿ ಸಚಿವ ಎಚ್. ಎಂ ರೇವಣ್ಣ
ಎಂಎಲ್​ಸಿ ವಿಶ್ವನಾಥ್ ಹಾಗೂ ಮಾಜಿ ಸಚಿವ ಎಚ್. ಎಂ ರೇವಣ್ಣ

ಎಂಎಲ್​ಸಿ ವಿಶ್ವನಾಥ್​ ಅವರು ಸಿದ್ದರಾಮಯ್ಯ ರಾಷ್ಟ್ರದ ರಾಜಕಾರಣಕ್ಕೆ ಹೋಗಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಎಂಎಲ್​ಸಿ ವಿಶ್ವನಾಥ್

ಹುಬ್ಬಳ್ಳಿ : ರಾಜಕಾರಣದಲ್ಲಿ ಯಾರು ಕನಸು ಕಂಡಿರೋದಿಲ್ಲ. ಅದರಂತೆ ಸಿಎಂ ಸಿದ್ದರಾಮಯ್ಯ ರಾಷ್ಟ್ರದ ರಾಜಕಾರಣಕ್ಕೆ ಹೋದರೆ ತಪ್ಪಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ ಅವರು ಸಿದ್ದರಾಮಯ್ಯ ರಾಷ್ಟ್ರದ ರಾಜಕಾರಣಕ್ಕೆ ಹೋಗಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಯಾಕೆ ರಾಷ್ಟ್ರದ ರಾಜಕಾರಣಕ್ಕೆ ಹೋಗಬಾರದು. ಈ ಹಿಂದೆ ಹೆಚ್ ಡಿ ದೇವೇಗೌಡ ಅವರು ಪ್ರಧಾನಮಂತ್ರಿ ಆಗುವ ಯಾವುದೇ ಕನಸು ಕಂಡಿರಲಿಲ್ಲ. ಅದರಂತೆ ಸಿದ್ದರಾಮಯ್ಯ ಅವರು ಯಾವುದೇ ಕನಸು ಕಂಡಿಲ್ಲ. ಆದರೆ ನಾವು ಕನಸು ಕಾಣುತ್ತೇವೆ ಎಂದು ಹೇಳಿದರು.

ಇನ್ನು ಸದ್ಯದ ಬಿಜೆಪಿ ಪಕ್ಷದ ರಾಜಕೀಯ ಬೆಳವಣಿಗೆ ಕುರಿತು ಮಾತನಾಡಿ, ರಾಜಕಾರಣಕ್ಕಾಗಿ ಕೆಲವರು ತಮ್ಮ ಮಕ್ಕಳು, ಕುಟುಂಬವನ್ನು ಬಲಿ ಕೊಟ್ಟಿದ್ದಾರೆ. ಯಾರು ಅವರವರ ಸಮಾಜವನ್ನು ತುಳಿಯುವುದಿಲ್ಲ. ಬದಲಾಗಿ ಬೇರೆಯವರನ್ನು ತುಳಿದು ರಾಜಕಾರಣದಲ್ಲಿ ಬೆಳೆಯುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.

ಸನಾತನ ಧರ್ಮದ ಬಗ್ಗೆ ತಮಿಳುನಾಡಿನ ಸಚಿವ ಉದಯ್ ನಿಧಿ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸ್ಟಾಲಿನ್ ದ್ರಾವಿಡ ಹೋರಾಟದಿಂದ ಬಂದವರು. ತಮಿಳುನಾಡು ಅಣ್ಣಾದೊರೈ, ಪೆರಿಯಾರ್ ಎಲ್ಲರೂ ದ್ರಾವಿಡರು. ಆ ನೆಲವೇ ಅಂತದ್ದು ಎಂದರು.

ಅ. 2 ಹಾಗೂ 3 ರಂದು ಬೆಳಗಾವಿಯಲ್ಲಿ ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಸಮಾವೇಶ: ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಎಚ್. ಎಂ ರೇವಣ್ಣ, ದೇಶದಲ್ಲಿ 12 ಕೋಟಿ ಕುರುಬ ಸಮಾಜದವರಿದ್ದಾರೆ. ಇವರೆಲ್ಲರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಅಕ್ಟೋಬರ್ 2 ಹಾಗೂ 3 ರಂದು ಬೆಳಗಾವಿಯಲ್ಲಿ ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದ ಮೂಲಕ ನಾವು ಎಲ್ಲರನ್ನು ಒಗ್ಗೂಡಿಸೋ ಕೆಲಸ ಮಾಡ್ತಿದ್ದೀವಿ. ದೆಹಲಿ, ಹರಿಯಾಣ, ರಾಜಸ್ಥಾನದಲ್ಲಿ ನಾವು ರಾಷ್ಟ್ರೀಯ ಸಮಾವೇಶ ಮಾಡಿದ್ದೇವೆ. ಐದನೇ ಸಮಾವೇಶ ತೆಲಂಗಾಣದಲ್ಲಿ ಮಾಡಿದ್ವಿ. ಇದು ಪಕ್ಷಾತೀತ, ಇಲ್ಲಿ ಯಾವ ಪಕ್ಷ ಇಲ್ಲ ಎಂದರು.

ನಾವು ಸಮಾಜ ಒಗ್ಗೂಡಿಸೋ ಕೆಲಸ ಮಾಡ್ತೀವಿ : ಬೆಳಗಾವಿಯಲ್ಲಿ ಅಕ್ಟೋಬರ್ 2 ರಂದು ಅಖಿಲ ಭಾರತ ಶೆಫರ್ಡ್ ಮುಖಂಡರ ಕಾರ್ಯಕಾರಿಣಿ ಸಭೆ ಮಾಡುತ್ತಿದ್ದೇವೆ. ಹರಿಯಾಣದ ಗವರ್ನರ್, ರಾಜಸ್ಥಾನ, ಉತ್ತರ ಪ್ರದೇಶದ ಸಚಿವರು ಕಾರ್ಯಕ್ರಮಕ್ಕೆ ಬರ್ತಾರೆ. ಇಡೀ ಭಾರತದಲ್ಲಿ ಏಕೈಕ ಕುರುಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ಮೆಚ್ಚಿ ಎಲ್ಲರೂ ಬರೋಕೆ ಒಪ್ಪಿದ್ದಾರೆ. ನಾವು ಸಿದ್ದರಾಮಯ್ಯ ಅವರಿಗೆ ಅಖಿಲ ಭಾರತ ಸನ್ಮಾನ ಮಾಡ್ತೀವಿ. ದೊಡ್ಡ ಸಮಾವೇಶ ಮಾಡೋ ಮೂಲಕ ನಾವು ಸಮಾಜ ಒಗ್ಗೂಡಿಸೋ ಕೆಲಸ ಮಾಡ್ತೀವಿ ಎಂದರು.

ದಲಿತ, ಅಲ್ಪಸಂಖ್ಯಾತರಿಗಿಂತಲೂ ನಾವು ರಾಜಕೀಯವಾಗಿ ಹಿಂದಿದ್ದೇವೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರೋದು ನಮಗೆ ಸಂತೋಷ. ಇಡೀ ರಾಷ್ಟ್ರದಲ್ಲಿ ಸಿದ್ದರಾಮಯ್ಯಗೆ ಮನ್ನಣೆ ಸಿಕ್ಕಿದೆ ಎಂದು ಹೇಳಿದರು.

ಇದನ್ನೂ ಓದಿ: ಪ್ರತಿಷ್ಠಿತ NSE ಪರೀಕ್ಷೆ ಕನ್ನಡ ಮಾಧ್ಯಮದಲ್ಲಿ ಬರೆಯಲು ಅವಕಾಶ ನೀಡುವಂತೆ ಕೋರಿ ಪ್ರಧಾನಿಗೆ ಸಿಎಂ ಪತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.