ETV Bharat / state

ಧಾರವಾಡ ಜಿಲ್ಲೆಯ 48 ಗ್ರಾಮಗಳಿಗೆ ಸ್ಮಶಾನವೇ ಇಲ್ಲ: ಬಗೆಹರೆಯದ ರುದ್ರಭೂಮಿ ಸಮಸ್ಯೆ

author img

By

Published : Dec 21, 2022, 10:28 PM IST

ರುದ್ರಭೂಮಿ ಸಮಸ್ಯೆ
ರುದ್ರಭೂಮಿ ಸಮಸ್ಯೆ

ಧಾರವಾಡ ಜಿಲ್ಲೆಯ ಒಟ್ಟು 40 ಹಳ್ಳಿಗಳಲ್ಲಿ ರುದ್ರಭೂಮಿಯೇ ಇಲ್ಲ. ಕಳೆದ 10 ವರ್ಷಗಳಲ್ಲಿ 200 ಹಳ್ಳಿಗಳಲ್ಲಿ ರುದ್ರಭೂಮಿ ಇರದೇ ಇದ್ದ ಸಂಖ್ಯೆಯನ್ನು ಈಗ ಧಾರವಾಡ ಜಿಲ್ಲಾಡಳಿತ ಕಡಿಮೆ ಮಾಡಿದೆ.

ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ಮಾತನಾಡಿದರು

ಧಾರವಾಡ: ದೇಶಕ್ಕೆ ಸ್ವಾತಂತ್ರ್ಯ ದೊರೆತು ಅಮೃತ ಮಹೋತ್ಸವ ಆಚರಣೆ ಮಾಡಲಾಗುತ್ತಿದೆ. ಆದರೆ ಇನ್ನೂ ಕೆಲವು ಕಡೆಗಳಲ್ಲಿ ರುದ್ರಭೂಮಿ ಇಲ್ಲದಿರುವುದು ಸ್ವಂತ ಜಮೀನುಗಳಲ್ಲಿ ಅಂತ್ಯಕ್ರಿಯೆ ಮಾಡುತ್ತಿದ್ದಾರೆ. ಸದ್ಯ ಇದೇ ಸಮಸ್ಯೆ ಧಾರವಾಡ ಜಿಲ್ಲೆಯಲ್ಲಿದೆ. ಎಷ್ಟೋ‌ ವರ್ಷಗಳಿಂದ ಇಲ್ಲಿಯ ಜನರು ರುದ್ರಭೂಮಿಗಾಗಿ‌ ಪರದಾಟ ನಡೆಸಿದ್ದಾರೆ.

ಸತ್ತಾಗ ಅಂತ್ಯಕ್ರಿಯೆ ಮಾಡಲು ಒಂದು ಜಾಗವಾದ್ರು ಬೇಕು.‌ ಆದರೆ ಅದೇ ಜಾಗ ಇಲ್ಲ ಎಂದರೆ ಅಂತ್ಯಕ್ರಿಯೆ ಮಾಡುವುದೆಲ್ಲಿ ಎಂಬ ಪ್ರಶ್ನೆ ಈಗ ಧಾರವಾಡ ಜಿಲ್ಲೆಯಲ್ಲಿ ಉದ್ಭವಿಸುತ್ತಿದೆ. ಹೌದು, ಧಾರವಾಡ ಜಿಲ್ಲೆಯ ಒಟ್ಟು 40 ಹಳ್ಳಿಗಳಲ್ಲಿ ರುದ್ರಭೂಮಿಯೇ ಇಲ್ಲ. ಕಳೆದ 10 ವರ್ಷಗಳಲ್ಲಿ 200 ಹಳ್ಳಿಗಳಲ್ಲಿ ರುದ್ರಭೂಮಿ ಇರದೇ ಇದ್ದ ಸಂಖ್ಯೆಯನ್ನು ಈಗ ಧಾರವಾಡ ಜಿಲ್ಲಾಡಳಿತ ಕಡಿಮೆ ಮಾಡಿದೆ.

ರುದ್ರಭೂಮಿ ಸಮಸ್ಯೆ: ಬಹುತೇಕ ಗ್ರಾಮದ ಜನರು ಗ್ರಾಮದಲ್ಲಿ ಸಾವಾದರೆ ರುದ್ರಭೂಮಿ ಇಲ್ಲದೇ ಬೇರೆ ಯಾರದೋ ಹೊಲದಲ್ಲೇ ಅಂತ್ಯಕ್ರಿಯೆ ಮಾಡುತಿದ್ದರು. ಆದರೆ ಈಗ ಹಳ್ಳಿಯಲ್ಲಿ ಕೂಡಾ ಹೊಲದಲ್ಲಿ ಅಂತ್ಯಕ್ರಿಯೆ ಮಾಡಲು ಅವಕಾಶ ಸಿಗುತ್ತಿಲ್ಲ. ಇದರಿಂದ ಸಮಸ್ಯೆ ಎದುರಿಸುತಿದ್ದ ಜನರು ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಸದ್ಯ ಧಾರವಾಡ ಜಿಲ್ಲಾಡಳಿತ 200 ಗ್ರಾಮದ ರುದ್ರಭೂಮಿಯ ಸಂಖ್ಯೆ ಕಡಿಮೆ ಮಾಡಿದ್ದರೂ, ಇನ್ನು 48 ಗ್ರಾಮಗಳಲ್ಲಿ ರುದ್ರಭೂಮಿಗೆ ಜಮೀನು ಸಿಗುತ್ತಿಲ್ಲ.

ಅದರಲ್ಲೂ 12 ಹಳ್ಳಿಯ ಜನರಿಗೆ ಅಲ್ಲಿರುವ ಹೊಲದ ಮಾಲೀಕರು ಕೂಡಾ ಸ್ಮಶಾನಕ್ಕೆ ಜಮೀನು ಕೊಡಲ್ಲ ಎಂದು ಸ್ಪಷ್ಟಪಡಿಸಿದ್ದು‌, ಇದು ಧಾರವಾಡ ಜಿಲ್ಲಾಡಳಿತಕ್ಕೆ ದೊಡ್ಡ ತಲೆ ನೋವಾಗಿದೆ. ಜಿಲ್ಲಾಡಳಿತ ಈ 12 ಹಳ್ಳಿಗಳಲ್ಲಿ ಜಮೀನು ಖರೀದಿ ಮಾಡಿ ಸ್ಮಶಾನಕ್ಕೆ ಕೊಡಬೇಕೆಂದ್ರೆ ಅಲ್ಲಿ ಹೆಚ್ಚಿನ ಬೆಲೆ ಹೇಳಲಾಗುತ್ತಿದೆ. ಹೀಗಾಗಿ ಸರ್ಕಾರಿ ಬೆಲೆಯಲ್ಲೇ ದರ ನಿಗದಿ ಮಾಡುವ ಜಿಲ್ಲಾಡಳಿತಕ್ಕೆ ಇದು ಸಮಸ್ಯೆಯಾಗಿದೆ.

'ನಮ್ಮಲ್ಲಿ 48 ಹಳ್ಳಿಗಳಿಗೆ ಸ್ಮಶಾನ ಇಲ್ಲ. ಧಾರವಾಡದಲ್ಲಿ 200ಕ್ಕಿಂತಲೂ ಹೆಚ್ಚಿನ ಹಳ್ಳಿಗಳಲ್ಲಿ ಸ್ಮಶಾನ ಇರಲಿಲ್ಲ. ಆ ಸಮಯದಲ್ಲಿ ನಿರ್ಭಯ್​ ಸರ್ಕಾರಿ ಜಾಗ ಯಾವುದಿದೆ ಎಂದು ಗುರುತಿಸಿ ಅದನ್ನು ಸ್ಮಶಾನದ ಜಾಗವೆಂದು ಸುಮಾರು ನೂರು ಗ್ರಾಮಗಳನ್ನು ರಿಸರ್ವ್​ ಮಾಡಿದ್ದೆವು. ಅದಾದ ನಂತರವೂ 60 ಹಳ್ಳಿಗಳಲ್ಲಿ ಖಾಸಗಿ ಜಮೀನಿನವರು ಭೂಮಿ ಕೊಡಲು ಮುಂದೆ ಬಂದಾಗ ಆ ಜಾಗವನ್ನು ಸರ್ಕಾರದ ವತಿಯಿಂದ ಖರೀದಿ ಮಾಡಿ ಅದನ್ನು ಕೊಟ್ಟಿದ್ದೇವೆ. ಅದಾದ ನಂತರ ಸರ್ಕಾರಿ ಜಮೀನಿನಲ್ಲೂ ಲಭ್ಯವಿಲ್ಲ. ಹಾಗೂ ಪ್ರೈವೇಟ್​ ನವರು ಮುಂದೆ ಬರುತ್ತಿಲ್ಲ. ನಮ್ಮ ತಹಶಿಲ್ದಾರ್ ಅವರು ಕೂಡಾ ಖಾಸಗಿ ಜಮೀನಿನವರಿಂದ ಭೂಮಿ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ಬಹುಶಃ ಇನ್ನು 10 ರಿಂದ 12 ಹಳ್ಳಿಗಳಲ್ಲಿ ಈ ಸಮಸ್ಯೆ ಉಳಿಯಬಹುದು. ಅದನ್ನು ಕೂಡಾ ಖಾಸಗಿ ಜಮೀನು ಖರೀದಿ ಮಾಡಿ ಪರಿಹರಿಸುತ್ತೇವೆ' ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ಹೇಳಿದ್ದಾರೆ.

ಅಂತ್ಯಕ್ರಿಯೆಗೆ ಸ್ಮಶಾನ ವ್ಯವಸ್ಥೆ: ಮತ್ತೊಂದು ಕಡೆ ಸಾರ್ವಜನಿಕ ವಲಯದಲ್ಲಿ ಇದು ಆಕ್ರೋಶ ತರಿಸಿದೆ. ಸರ್ಕಾರ ಬೆಲೆ ಬಗ್ಗೆ ವಿಚಾರ ಮಾಡುತ್ತ ಕುಳಿತರೇ ಸತ್ತವರನ್ನ ಎಲ್ಲಿ ಹೂಳಬೇಕು ಎಂಬುದು. ಎಷ್ಟೇ ಬೆಲೆ ಇದ್ದರೂ ನಮಗೆ ಅಂತ್ಯಕ್ರಿಯೆಗೆ ಸ್ಮಶಾನ ವ್ಯವಸ್ಥೆ ಮಾಡಿ ಎಂದು ಸರ್ಕಾರದ ಬಳಿ ಮನವಿ ಮಾಡುವಂತೆ ಆಗಿದೆ. ಜಿಲ್ಲೆಯ ಗಡಿ ಭಾಗದ ಹುಣಶಿಕುಮರಿ, ಅಳ್ನಾವರ ತಾಲೂಕು, ಅಣ್ಣಿಗೇರಿ ತಾಲೂಕಿನ ಸಾಸ್ವಿಹಳ್ಳಿ ಸೇರಿದಂತೆ ಹಲವು ಭಾಗದಲ್ಲಿ ಸ್ಮಶಾನ ಇಲ್ಲ. ಇಲ್ಲಿಯ ಜನ ಸತ್ತರೆ ಏನು ಮಾಡಬೇಕು ಎಂಬ ಪ್ರಶ್ನೆ ಜನರು ಮಾಡುತ್ತಿದ್ದಾರೆ.

ಓದಿ: ಹಾವೇರಿಯಲ್ಲಿ ಸ್ಮಶಾನ ಸಮಸ್ಯೆ: ಜಮೀನು, ರಸ್ತೆ ಪಕ್ಕದಲ್ಲೇ ನಡೆಯುತ್ತಿದೆ ಅಂತ್ಯಕ್ರಿಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.