ETV Bharat / state

ಹುಬ್ಬಳ್ಳಿಯ ಉಣಕಲ್ ಬಳಿ ಕಾರು, ಬೈಕ್​ ಅಪಘಾತ : ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

author img

By

Published : Apr 25, 2021, 10:45 PM IST

Updated : Apr 26, 2021, 8:25 AM IST

horrific scene captured in CCTv
ಹುಬ್ಬಳ್ಳಿಯ ಉಣಕಲ್ ಬಳಿ ಕಾರು,ಬೈಕ್​ ಅಪಘಾತ

ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್ ಹಾಗೂ ಸವಾರರು ಗಾಳಿಯಲ್ಲಿ ಹಾರಿ ಬಿದಿದ್ದಾರೆ. ಈ ಸಂಬಂಧ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ..

ಹುಬ್ಬಳ್ಳಿ : ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ತೀವ್ರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯ ಉಣಕಲ್ ಕ್ರಾಸ್​ನ ಪ್ರೆಸಿಡೆಂಟ್ ಹೋಟೆಲ್ ಮುಂಭಾಗದಲ್ಲಿ ನಡೆದಿದೆ. ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹುಬ್ಬಳ್ಳಿಯ ಉಣಕಲ್ ಬಳಿ ಕಾರು, ಬೈಕ್​ ಅಪಘಾತ

ರಸ್ತೆಯಲ್ಲಿ ಹೋಗುತ್ತಿರುವಾಗ ಬೈಕ್ ಸವಾರ ಮುಂದೆ ಹೊರಟು ತಕ್ಷಣವೇ ಬೈಕ್ ರಿಟರ್ನ್ ತೆಗೆದುಕೊಂಡಿದ್ದಾನೆ. ಇದರಿದ ಹಿಂದೆ ಬರುತ್ತಿದ್ದ ಕಾರು ಬೈಕ್​ಗೆ ಡಿಕ್ಕಿ ಹೊಡೆದಿದೆ.

ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್ ಹಾಗೂ ಸವಾರರು ಗಾಳಿಯಲ್ಲಿ ಹಾರಿ ಬಿದಿದ್ದಾರೆ. ಈ ಸಂಬಂಧ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Last Updated :Apr 26, 2021, 8:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.