ETV Bharat / state

ಸಿದ್ದರಾಮಯ್ಯ ಬಜೆಟ್: ರಾಜ್ಯ ಸಾಲದ ಕೂಪಕ್ಕೆ ಹೋಗುವ ಲಕ್ಷಣಗಳು ಎದ್ದು ಕಾಣಸ್ತಿವೆ ಎಂದ ಪ್ರಹ್ಲಾದ್ ಜೋಶಿ

author img

By

Published : Jul 7, 2023, 3:32 PM IST

Updated : Jul 7, 2023, 7:16 PM IST

ಯಾವುದೇ ಪ್ಲಾನಿಂಗ್, ಗುರಿ ಇಲ್ಲದ ಬಜೆಟ್‌ ಮಂಡನೆ ಇದಾಗಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ. ಡಿಕೆಶಿ ಚುನಾವಣೆ ಮೊದಲು ಪಾದಯಾತ್ರೆ ಮಾಡಿ ಮೇಕೆದಾಟುಗೆ 3 ಸಾವಿರ, ಮಹದಾಯಿಗೆ 10 ಕೋಟಿ ಮೀಸಲು ಅಂತ ಹೇಳಿದ್ರು. ಆದರೆ ಹಣ ಮೀಸಲಿಟ್ಟಿಲ್ಲ.ಸಿದ್ದರಾಮಯ್ಯ ಅವರು ಡಿಕೆಶಿ ಮೇಲೆ ಸೇಡು ತೀರಿಸಿಕೊಂಡಂತಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

Minister Prahlad Joshi spoke to reporters.
ಸುದ್ದಿಗಾರರೊಂದಿಗೆ ಸಚಿವ ಪ್ರಹ್ಲಾದ್​ ಜೋಶಿ ಮಾತನಾಡಿದರು.

ಸುದ್ದಿಗಾರರೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಮಾತನಾಡಿದರು.

ಧಾರವಾಡ: ಸಿಎಂ ಸಿದ್ದರಾಮಯ್ಯ ಪ್ರಸಕ್ತ ಸಾಲಿನ ಬಜೆಟ್​ದಲ್ಲಿ ಆಸ್ತಿ, ಮದ್ಯ ತೆರಿಗೆ ಹೆಚ್ಚಳ ಮಾಡಿದ್ದಾರೆ. ಶೇ 10ರಷ್ಟು ತೆರಿಗೆ ಹೆಚ್ಚಿಸಿದ್ದಾರೆ. ಮತ್ತೆ ಯಾವ ಯಾವ ತೆರಿಗೆ ಹೆಚ್ಚಳ ಮಾಡ್ತಾರೆ ನೋಡೋಣ ಎಂದು ರಾಜ್ಯದ ಸರ್ಕಾರದ ಬಜೆಟ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹರಿಹಾಯ್ದಿದ್ದಾರೆ.

ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಒಟ್ಟಾರೆ ಯಾವುದೇ ಪ್ಲಾನಿಂಗ್ ಇಲ್ಲದ ಬಜೆಟ್‌ ಮಂಡನೆ ಆಗುತ್ತಿದೆ. ಬಜೆಟ್ ನಿಂದ ರಾಜ್ಯ ಸಾಲದ ಕೂಪಕ್ಕೆ ಹೋಗುವ ಲಕ್ಷಣಗಳು ಎದ್ದು ಕಾಣುತ್ತಿದೆ. ಪದೇ ಪದೆ ಭಾರತ ಸರ್ಕಾರದ ಮೇಲೆ ಮಂತ್ರಿಗಳು ಸಚಿವರು ಆರೋಪ ಮಾಡ್ತಿದ್ದಾರೆ. ಜುಲೈ 1ಕ್ಕೆ ನೀಡಿರುವ ಅಕ್ಕಿಯೂ ಕೇಂದ್ರ ಸರ್ಕಾರದ್ದು, ಕರ್ನಾಟಕ ಸೇರಿ 80 ಕೋಟಿ ಜನರಿಗೆ ಅಕ್ಕಿ ವಿತರಣೆ ಮಾಡಿದ್ದೇವೆ ಎಂದು ತಿಳಿಸಿದರು.

ಈ ಅಕ್ಕಿಯನ್ನು ಕೇಂದ್ರ ಸರ್ಕಾರದಿಂದ ಕೊಟ್ಟಿದ್ದೇವೆ. ನೀವು ರಾಜ್ಯ ಸರ್ಕಾರ ಅಕ್ಕಿಯನ್ನು ಕೊಟ್ಟಿಲ್ಲ. ಅದನ್ನ ನೀವು ಒಪ್ಪಿ ಕೊಳ್ಳಲೇಬೇಕು. ಎಲ್ಲ ಯೋಜನೆ ಅನಗತ್ಯ ಷರತ್ತು ಹಾಕಲಾಗಿದೆ. ಗ್ಯಾರಂಟಿ ಯೋಜನೆ ಷರತ್ತು ವಿಧಿಸಲಾಗುತ್ತಿದ್ದು, ಆ ಮೂಲಕ ನೀವು ಜನರಿಗೆ ಮೋಸ ಮಾಡಿದ್ದೀರಿ. ಸಿಎಂ ಕಾರ್ಯಾವಧಿ ಶುರುವಾಗುತ್ತಿದ್ದಂತೆ ವರ್ಗಾವಣೆಯಲ್ಲಿ‌ ಅನೇಕ ಕಡೆ ಒಂದೊಂದು ಪೋಸ್ಟಿಗೆ ನಾಲ್ಕು ನಾಲ್ಕು ಪತ್ರ ಕೊಡುತ್ತಿದ್ದಾರೆ ಎಂದು ದೂರಿದರು.

ವರ್ಗಾವಣೆ ಜೊತೆಗೆ ವಸೂಲಿ ಕೂಡ ಶುರುವಾಗಿದೆ. ಭ್ರಷ್ಟಾಚಾರ ಅಂತಾ ಮಾತನಾಡಿ ಬಂದ್ರೂ..! ಈಗ ವಸೂಲಿ ಕೆಲಸ ಆರಂಭ ಮಾಡಿದ್ದಾರೆ. ನೀವು ಮಾಧ್ಯಮದವರು ಕೂಡ ಆಂತರಿಕವಾಗಿ ತನಿಖೆ ಮಾಡಿ, ಯಾವ ರೀತಿ ವಸೂಲಿ ಆಗುತ್ತೆ ಅನೋದು ಗೊತ್ತಾಗುತ್ತದೆ. ಕನಿಷ್ಠ ಆರು ತಿಂಗಳಾದರೂ ಕೆಲಸ ಸರಿಯಾಗಿ ಮಾಡಿ ಎಂದು ಜೋಶಿ ಸಲಹೆ ನೀಡಿದರು.

ಈ ಬಜೆಟ್​​ನಿಂದ ನಿರಾಸೆ ಕರ್ನಾಟಕಕ್ಕೆ ಮಾತ್ರವಲ್ಲ, ಡಿಕೆಶಿಗೂ ನಿರಾಸೆ ಆಗಿದೆ: ವಿಜಯೇಂದ್ರ: ಬಜೆಟ್ ನಿಂದ ನಿರಾಸೆ ಆಗಿರೋದು ಕರ್ನಾಟಕ ಮಾತ್ರವಲ್ಲ ಡಿಕೆಶಿ ಅವರಿಗೂ ನಿರಾಸೆ ಆಗಿದೆ ಎಂದು ಬಿಜೆಪಿ ಶಾಸಕ ಬಿ ವೈ ವಿಜಯೇಂದ್ರ ಆರೋಪಿಸಿದರು. ಬೆಂಗಳೂರು ವಿಧಾನಸೌಧದಲ್ಲಿ ಮಾತನಾಡಿದ ಅವರು, ಡಿಕೆಶಿ ಅವರು ಚುನಾವಣೆ ಮೊದಲು ಪಾದಯಾತ್ರೆ ಮಾಡಿದ್ರು. ಮೇಕೆದಾಟುಗೆ 3 ಸಾವಿರ, ಮಹದಾಯಿಗೆ 10 ಕೋಟಿ ಮೀಸಲು ಅಂತ ಹೇಳಿದ್ರು. ಆದ್ರೆ ಹಣ ಮೀಸಲಿಟ್ಟಿಲ್ಲ. ಸಿದ್ದರಾಮಯ್ಯ ಅವರು ಡಿಕೆಶಿ ಮೇಲೆ ಸೇಡು ತೀರಿಸಿಕೊಂಡಂತಿದೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಅವರು ಮಂಡನೆ ಮಾಡ್ತಿರೋ 14ನೇ ಬಜೆಟ್ ಇದಾಗಿದೆ. ಬಹಳ ನಿರೀಕ್ಷೆ ಇತ್ತು. ಸಿದ್ದರಾಮಯ್ಯ ಅವರು ಮಂಡಿಸಿರೋ ಬಜೆಟ್ ನಿರಾಶಾದಾಯಕ ಬಜೆಟ್. ಸಿದ್ದರಾಮಯ್ಯ ಅವರು ಶ್ರಮ, ಬುದ್ದಿವಂತಿಕೆ ಎಲ್ಲಾ ವ್ಯರ್ಥ ಆಗಿದೆ. ಕೇಂದ್ರದ ಮೇಲೆ ಗೂಬೆ ಕೂರಿಸೋದು, ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಬೈಯೋದನ್ನ ಮಾಡಿದ್ದಾರೆ ಅಷ್ಟೇ ಎಂದರು.

ಆಶಾ, ಅಂಗನವಾಡಿ ಕಾರಗಯಕರ್ತೆಯರಿಗೆ ಹಣ ಮೀಸಲಿಟ್ಟಿಲ್ಲ. ಇಡೀ ಬಜೆಟ್ ಪೊಲಿಟಿಕಲ್ ಸ್ಟೇಟ್ಮೆಂಟ್ ಅಂದ್ರೆ ತಪ್ಪಾಗಲ್ಲ. ನಿಜವಾಗಲು ಇದು ದುರಾದೃಷ್ಟ. ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸಿದ್ದಾರೆ‌. ಬಿಜೆಪಿ ಆರ್ಥಿಕ ಶಿಸ್ತು ಕಾಪಾಡದಿದ್ರೆ ಇವತ್ತು ಕಷ್ಟ ಆಗ್ತಿತ್ತು. ಬಂಡವಾಳ ಹೂಡಿಕೆಯಲ್ಲೂ 9.8ಲಕ್ಷ ಕೋಟಿ MOU ಆಗಿದೆ. ಭ್ರಷ್ಟಾಚಾರ ಅಂತ ಆರೋಪಿಸಿ ಗೂಬೆ ಕೂರಿಸಿದ್ದಾರೆ. ಭ್ರಷ್ಟಾಚಾರ ನಡೆದಿದ್ರೆ GST ಹೆಚ್ಚಳವಾಗ್ತಿತ್ತಾ.?. ಬಜೆಟ್ ಮಂಡನೆ ಮೂಲಕ, ಡಿಕೆಶಿ ಅವರಿಗೆ ಪಾಠ ಕಲಿಸಿದ್ದಾರೆ ಎಂದು ಕುಟುಕಿದರು.

ಇದನ್ನೂಓದಿ:ಸಿಎಂ ಸಿದ್ದರಾಮಯ್ಯ ಲೆಕ್ಕ: ಆದಾಯ ಸಂಗ್ರಹಕ್ಕೆ ಹೆಚ್ಚು ಒತ್ತು, ₹85,818 ಕೋಟಿ ಸಾಲದ ಮೊರೆ

Last Updated : Jul 7, 2023, 7:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.