ETV Bharat / state

ಕಲಾವಿದನ ಸಂದೇಶ: ಧಾರವಾಡದಲ್ಲಿ ಗೋಡೆ ಬರಹದ ಮೂಲಕ ಕೊರೊನಾ ಜಾಗೃತಿ

author img

By

Published : May 21, 2021, 7:37 PM IST

artists-message-corona-awareness-through-wall-writing-in-dharwad
ಧಾರವಾಡದಲ್ಲಿ ಗೋಡೆ ಬರಹದ ಮೂಲಕ ಕೊರೊನಾ ಜಾಗೃತಿ

ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಧಾರವಾಡದ ಜುಬಿಲಿ ಸರ್ಕಲ್ (ಆಲೂರು ವೆಂಕಟರಾವ್ ವೃತ್ತ)ನಲ್ಲಿ ಕೊರೊನಾ ಜಾಗೃತಿಗಾಗಿ ಗೋಡೆ ಮೇಲೆ ಸಂದೇಶ ಹಾಗೂ ಚಿತ್ರಗಳನ್ನು ಬರೆದು‌ ಜಾಗೃತಿ ಕಾರ್ಯಕ್ಕೆ ಮುಂದಾಗಿದ್ದಾರೆ.

ಧಾರವಾಡ: ಕೊರೊನಾ ವೈರಸ್ 2ನೇ ಅಲೆ ಅಬ್ಬರ ಜೋರಾಗಿದೆ‌‌‌. ಇದರ ನಿಯಂತ್ರಣಕ್ಕೆ ಅನೇಕ ಸಂಘ ಸಂಸ್ಥೆಗಳು ಜಾಗೃತಿ ಕೆಲಸ ಮಾಡಲು ಮುಂದಾಗಿವೆ. ಅದರಂತೆ ನಗರದ ಕಲಾವಿದನೋರ್ವ ಗೋಡೆ ಬರಹ ಬರೆದು ಜನರಲ್ಲಿ ತಿಳಿವಳಿಕೆ ಮೂಡಿಸುತ್ತಿದ್ದಾರೆ.‌‌

ಗೋಡೆ ಬರಹದ ಮೂಲಕ ಕಲಾವಿದನಿಂದ ಕೊರೊನಾ ಜಾಗೃತಿ

ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು, ನಗರದ ಜುಬಿಲಿ ಸರ್ಕಲ್ (ಆಲೂರು ವೆಂಕಟರಾವ್ ವೃತ್ತ)ನಲ್ಲಿ ಕೊರೊನಾ ಜಾಗೃತಿಗಾಗಿ ಗೋಡೆ ಮೇಲೆ ಸಂದೇಶ ಹಾಗೂ ಚಿತ್ರಗಳನ್ನು ಬರೆದು‌ ಜಾಗೃತಿ ಕಾರ್ಯಕ್ಕೆ ಮುಂದಾಗಿದ್ದಾರೆ.

ಇಷ್ಟು ದಿನ ಕಲಾವಿದ ಮಂಜುನಾಥ ಹಿರೇಮಠ ಸ್ವಂತ ವಾಹನದಲ್ಲಿ ವಿವಿಧ ಸ್ಥಳಗಳಿಗೆ ತೆರಳಿ ಜಾಗೃತಿ ಮೂಡಿಸಿದ್ದರು. ಬಳಿಕ ದಿನಸಿ ಕಿಟ್ ಸಹ ವಿತರಣೆ ಮಾಡಿದ್ದಾರೆ. ಇವರಿಗೆ ಅನಿವಾಸಿ ಭಾರತೀಯರು ಸಹ ಕೈ ಜೋಡಿಸಿದ್ದಾರೆ.

ಅಮೆರಿಕ, ಫಿಲಿಡೆಲ್ಫಿಯಾ ನಗರಗಳಿಂದ ಅನಿವಾಸಿ ಭಾರತೀಯರು ಮಂಜುನಾಥ ಅವರ ಜಾಗೃತಿ ಕಾರ್ಯಕ್ಕೆ ಕೈಜೋಡಿಸಿದ್ದು, ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ.

ಓದಿ: ದಾವಣಗೆರೆ : ಮೆಡಿಕಲ್ ಕಾಲೇಜ್ ನಿರ್ದೇಶಕರಿಗೆ ಸಚಿವ ಸುಧಾಕರ್​ ತರಾಟೆ !

ETV Bharat Logo

Copyright © 2024 Ushodaya Enterprises Pvt. Ltd., All Rights Reserved.