ETV Bharat / state

ಎಲೆಬಳ್ಳಿಗೆ ಕೊಳೆ ರೋಗ: ನಿವಾರಣೆಗೆ ಇವರು ನೀಡಿದ್ರು ಮಾರ್ಗದರ್ಶನ

author img

By

Published : Jan 22, 2020, 8:13 PM IST

G P Rekha  Guide to Prevention of Leaf Root Disease
ಎಲೆಬಳ್ಳಿಯ ಬೇರು ಕೊಳೆ ರೋಗ ನಿವಾರಣೆಗೆ ಜಿ.ಪಿ ರೇಖಾ ಮಾರ್ಗದರ್ಶನ

ಎಲೆಬಳ್ಳಿಯ ಬೇರಿನ ಕೊಳೆ ರೋಗ ಅಥವಾ ಸೊರಗು ರೋಗ ಹತೋಟಿ ಮಾಡಲು ರೈತರು ಸಮಗ್ರ ರೋಗ ನಿರ್ವಹಣೆಯ ಬಗ್ಗೆ ತೋಟಗಾರಿಕೆ ಇಲಾಖೆ ನೀಡುವ ಸಲಹೆಗಳನ್ನು ಸದುಪಯೋಗ ಮಾಡಿಕೊಳ್ಳಿ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಜಿ.ಪಿ ರೇಖಾ ಹೇಳಿದ್ದಾರೆ.

ಹರಿಹರ : ಎಲೆಬಳ್ಳಿಯ ಬೇರಿನ ಕೊಳೆ ರೋಗ ಅಥವಾ ಸೊರಗು ರೋಗ ಹತೋಟಿ ಮಾಡಲು ರೈತರು ಸಮಗ್ರ ರೋಗ ನಿರ್ವಹಣೆಯ ಬಗ್ಗೆ ತೋಟಗಾರಿಕೆ ಇಲಾಖೆ ನೀಡುವ ಸಲಹೆಗಳನ್ನು ಸದುಪಯೋಗ ಮಾಡಿಕೊಳ್ಳಿ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಜಿ.ಪಿ ರೇಖಾ ಹೇಳಿದ್ದಾರೆ.

ತಾಲೂಕಿನ ಹನಗವಾಡಿ ಗ್ರಾಮದಲ್ಲಿನ ಎಲೆಬಳ್ಳಿ ರೋಗಗಳಿಗೆ ತುತ್ತಾಗಿರುವ ಜಮೀನುಗಳಿಗೆ ಭೇಟಿ ನೀಡಿ, ರೈತರಿಗೆ ಬೆಳೆಗಳ ಬಗ್ಗೆ ಅರಿವು ಮೂಡಿಸಿದ ಅವರು, ಎಲೆಬಳ್ಳಿ ತೋಟಗಳಿಗೆ ಬೇರು ಕೊಳೆರೋಗ ಅಥವಾ ಸೊರಗು ರೋಗ ಕಂಡುಬಂದಿದ್ದು, ತೋಟಗಾರಿಕೆ ಇಲಾಖೆಯಿಂದ ನಮ್ಮ ತಂಡ ಎಲೆಬಳ್ಳಿ ತೋಟಗಳಿಗೆ ಭೇಟಿ ನೀಡಿ ರೈತರಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮಾಹಿತಿ ನೀಡಲಾಗುತ್ತಿದೆ ಎಂದರು.

ರೋಗ ಪೀಡಿತ ಎಲೆಬಳ್ಳಿಗಳ ಎಲೆಗಳು ನಿಧಾನವಾಗಿ ಹಳದಿ ಬಣ್ಣಕ್ಕೆ ತಿರುಗುವುದು ಮತ್ತು ಒಂದೆರಡು ವಾರದಲ್ಲಿ ಕ್ರಮೇಣವಾಗಿ ಎಲೆಬಳ್ಳಿಗಳು ಸಂಪೂರ್ಣ ಒಣಗುತ್ತದೆ. ಅಂತಹ ಗಿಡದ ಬೇರುಗಳನ್ನು ಅಗೆದು ನೋಡಿದರೆ ಕಾಂಡವು ಕಂದು ಬಣ್ಣಕ್ಕೆ ತಿರುಗಿರುವುದು ಮತ್ತು ಕೊಳೆತಿರುವುದನ್ನು ಗಮನಿಸಲಾಯಿತು. ನೆಲದ ಮೇಲ್ಮಟ್ಟದಲ್ಲಿ ಕಾಂಡವು ಸತ್ತುಹೋಗಿರುವುದು ಮತ್ತು ದಾರದಂತೆ ಬಿಡಿ-ಬಿಡಿಯಾಗಿ ನಶಿಸಿರುವುದನ್ನು ಗಮನಿಸಿ, ಔಷಧ ಸಿಂಪಡಿಸುವಂತೆ ತಿಳಿಸಿದರು.

ಕೊಳೆ ರೋಗದ ಹತೋಟಿ ಕ್ರಮಗಳು:

ರೋಗಗ್ರಸ್ಥ ಬಳ್ಳಿಗಳನ್ನು ತೋಟದಿಂದ ತೆಗೆದು ಹಾಕಿ ಸುಟ್ಟು ಹಾಕುವುದು. ಬಳ್ಳಿಗಳನ್ನು ತೆಗೆದ ಜಾಗಕ್ಕೆ ಶೇ.1ರ ಬೋರ್ಡೊ ದ್ರಾವಣ ಅಥವಾ ತಾಮ್ರದ ಆಕ್ಸಿಕ್ಲೋರೈಡ್ ದ್ರಾವಣವನ್ನು ಪ್ರತಿ ಲೀಟರ್ ನೀರಿಗೆ 2 ಗ್ರಾಂ. ನಂತೆ ಬೆರೆಸಿ 1 ರಿಂದ 2 ಲೀಟರ್ ದ್ರಾವಣವನ್ನು ಸುರಿಯಬೇಕು. ರೋಗ ರಹಿತ ಬಳ್ಳಿಗಳನ್ನು ಉಪಯೋಗಿಸಬೇಕು ಎಂದು ಸಲಹೆ ನೀಡಿದ್ದಾರೆ.

Intro:ಎಲೆಬಳ್ಳಿಯ ಬೇರು ಕೊಳೆ ರೋಗ ನಿವಾರಣೆಗೆ ಜಿ.ಪಿ ರೇಖಾ ಮಾರ್ಗದರ್ಶನ

intro:
ಹರಿಹರ : ಎಲೆಬಳ್ಳಿಯ ಬೇರು ಕೊಳೆ ರೋಗ ಅಥವಾ ಸೊರಗು ರೋಗ ಹತೋಟಿ ಮಾಡಲು ಎಲೆ ಬಳ್ಳಿ ಬೆಳೆಯುವ ರೈತರು ಸಮಗ್ರ ರೋಗ ನಿರ್ವಹಣೆಯ ಬಗ್ಗೆ ತೋಟಗಾರಿಕೆ ಇಲಾಖೆ ನೀಡುವ ಸಲಹೆಗಳನ್ನು ಸದುಪಯೋಗ ಮಾಡಿಕೊಳ್ಳಿ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಜಿ.ಪಿ ರೇಖಾ ಹೇಳಿದರು.

body:
ತಾಲೂಕಿನ ಹನಗವಾಡಿ ಗ್ರಾಮದಲ್ಲಿನ ಎಲೆಬಳ್ಳಿ ಬೆಳೆಗಳು ರೋಗಗಳಿಗೆ ತುತ್ತಾಗಿಗಿರುವ ಜಮೀನುಗಳಿಗೆ ಭೇಟಿ ನೀಡಿ, ರೈತರಿಗೆ ಬೆಳೆಗಳ ಬಗ್ಗೆ ಅರಿವು ಮೂಡಿಸಿದರು. ಎಲೆಬಳ್ಳಿ ತೋಟಗಳಿಗೆ ಬೇರು ಕೊಳೆರೋಗ ಅಥವಾ ಸೊರಗುರೋಗ ಕಂಡುಬಂದಿದ್ದು, ತೋಟಗಾರಿಕೆ ಇಲಾಖೆಯ ವತಿಯಿಂದ ನಮ್ಮ ತಂಡ ಎಲೆಬಳ್ಳಿ ತೋಟಗಳಿಗೆ ಭೇಟಿ ನೀಡಿ ರೈತರಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮಾಹಿತಿ ನೀಡಲಾಗುತ್ತಿದೆ ಎಂದರು.
ರೋಗ ಪೀಡಿತ ಎಲೆಬಳ್ಳಿಗಳ ಎಲೆಗಳು ನಿಧಾನವಾಗಿ ಹಳದಿ ಬಣ್ಣಕ್ಕೆ ತಿರುಗುವುದು ಮತ್ತು ಒಂದೆರಡು ವಾರದಲ್ಲಿ ಕ್ರಮೇಣವಾಗಿ ಎಲೆಬಳ್ಳಿಗಳು ಸಂಪೂರ್ಣ ಒಣಗುತ್ತದೆ. ಅಂತಹ ಗಿಡದ ಬೇರುಗಳನ್ನು ಹಗೆದು ನೋಡಿದರೆ ಕಾಂಡವು ಕಂದು ಬಣ್ಣಕ್ಕೆ ತಿರುಗಿರುವುದು ಮತ್ತು ಕೊಳೆತಿರುವುದನ್ನು ಗಮನಿಸಲಾಯಿತು. ನೆಲದ ಮೇಲ್ಮಟ್ಟದಲ್ಲಿ ಕಾಂಡವು ಸತ್ತುಹೋಗಿರುವುದು ಮತ್ತು ದಾರದಂತೆ ಬಿಡಿ-ಬಿಡಿಯಾಗಿ ನಶಿಸಿರುವುದನ್ನು ಗಮನಿಸಿ, ಔಷಧಿ ಸಿಂಪಡಿಸುವಂತೆ ತಿಳಿಸಿದರು.
ಅತಿ ಹೆಚ್ಚು ಮಣ್ಣಿನ ತೇವಾಂಶ, ಕಾಲುವೆಗಳ ಮೂಲಕ ಹರಿ ನೀರನ್ನು ತೋಟದಲ್ಲಿ ಗಿಡಗಳಿಂದ ಗಿಡಗಳಿಗೆ ಹಾಯಿಸುವುಸುದು, ರೋಗವುಳ್ಳ ತೋಟದಿಂದ ಎಲೆಬಳ್ಳಿಯ ಆಧಾರ ಅಥವಾ ಆಸರೆಗಿಡಗಳು ಮತ್ತು ಎಲೆಬಳ್ಳಿಯ ಕಾಂಡಗಳನ್ನು ನಾಟಿ ಮಾಡಲು ಒಂದು ತೋಟದಿಂದ ಇನ್ನೊಂದು ತೋಟಕ್ಕೆ ಬಳಸುವುದರಿಂದ ರೋಗವು ಉಲ್ಬಣವಾಗಲು ಕಾರಣವಾಗುತ್ತವೆ ಎಂದರು.
ಎಲೆಬಳ್ಳಿಯ ಬೇರು ಕೊಳೆ ರೋಗದ ಹತೋಟಿ ಕ್ರಮಗಳು:
ರೋಗಗ್ರಸ್ಥ ಬಳ್ಳಿಗಳನ್ನು ತೋಟದಿಂದ ತೆಗೆದು ಹಾಕಿ ಸುಟ್ಟು ಹಾಕುವುದು. ಬಳ್ಳಿಗಳನ್ನು ತೆಗೆದ ಜಾಗಕ್ಕೆ ಶೇ.೧ರ ಬೋರ್ಡೊ ದ್ರಾವಣ ಅಥವಾ ತಾಮ್ರದ ಆಕ್ಸಿಕ್ಲೋರೈಡ್ ದ್ರಾವಣವನ್ನು ಪ್ರತಿ ಲೀಟರ್ ನೀರಿಗೆ ೨ ಗ್ರಾಂ. ನಂತೆ ಬೆರೆಸಿ ೧ ರಿಂದ ೨ ಲೀಟರ್ ದ್ರಾವಣವನ್ನು ಸುರಿಯಬೇಕು. ರೋಗ ರಹಿತ ಬಳ್ಳಿಗಳನ್ನು ಮತ್ತು ಆಧಾರ ಗಿಡಗಳನ್ನು ಉಪಯೋಗಿಸಬೇಕು.
ರೋಗವು ಕಂಡುಬಂದಾಗ ಮುಂಜಾಗ್ರತೆ ಕ್ರಮವಾಗಿ ವೈಟಾವ್ಯಾಕ್ಸಪವರ್ ಎಂಬ ಶಿಲೀಂದ್ರ ನಾಶಕ ಪುಡಿಯನ್ನು ೨ಗ್ರಾಂ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಪ್ರತಿ ಬಳ್ಳಿಯ ಬುಡಕ್ಕೆ ೨ ಲೀಟರ್ ನಷ್ಟು ದ್ರಾವಣ ಮಣ್ಣಿನಲ್ಲಿ ಸೇರಿಸಬೇಕು. ವರ್ಷಕ್ಕೆ ೨ ಬಾರಿ ಪ್ರತಿ ಬಳ್ಳಿಯ ಬುಡಕ್ಕೆ ಅರ್ಥ ಕೆ.ಜಿ. ಬೇವಿನ ಹಿಂಡಿ ಹಾಕುವುದರಿಂದ ಬಾಧೆಯನ್ನು ತಡೆಗಟ್ಟಬಹುದು.
ಟ್ರೈಕೋಡರ್ಮಾ ಮತ್ತು ಸೂಡೋಮೋನಾಸ್ಫ್ಲೋರೆಸೆನ್ಸ್ ಎಂಬ ಜೈವಿಕ ಶಿಲೀಂದ್ರ ನಾಶಕಗಳನ್ನು ಕೊಟ್ಟಿಗೆ ಗೊಬ್ಬರದ ಜೊತೆ ಬೆರೆಸಿ ಮಣ್ಣಿನಲ್ಲಿ ಸೇರಿಸುವುದರಿಂದ ಅವು ಪ್ರತಿವರ್ಷ ವೃದ್ದಿಯಾಗಿ ರೋಗವನ್ನು ತಡೆಯುವಲ್ಲಿ ಯಶಸ್ವಿಯಾಗುತ್ತವೆ ಎಂದು ರೈತರಿಗೆ ಮಾಹಿತಿ ನೀಡಿದರು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ತೋಟಗಾರಿಕೆ ಅಧಿಕಾರಿ ಹರಿಹರ ಅಥವಾ ಮಲೆಬೆನ್ನೂರು ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು ಎಂದರು.
Body:ಎಲೆಬಳ್ಳಿಯ ಬೇರು ಕೊಳೆ ರೋಗ ನಿವಾರಣೆಗೆ ಜಿ.ಪಿ ರೇಖಾ ಮಾರ್ಗದರ್ಶನ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.