ETV Bharat / state

ರಾಜಕೀಯದಲ್ಲಿ ಇವೆಲ್ಲಾ ಸಹಜ, ಸಿಎಂ ಇಬ್ರಾಹಿಂ ಇನ್ನೂ ನಮ್ಮ ಪಕ್ಷದಲ್ಲಿದ್ದಾರೆ : ಸತೀಶ್ ಜಾರಕಿಹೊಳಿ

author img

By

Published : Jan 31, 2022, 5:10 PM IST

Satish Zarakiholi
ಕೆಪಿಸಿಸಿ‌ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌

ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇದೆ. ಆರು ತಿಂಗಳ‌ ಮುಂಚಿತವಾಗಿ ಟಿಕೆಟ್​ ಹಂಚುವ ಪ್ರಕ್ರಿಯೆ ನಡೆಯುತ್ತದೆ. ಕಾಂಗ್ರೆಸ್​​ಗೆ ಯಾರ್ಯಾರು ಬರುತ್ತಾರೆ ಎಂಬುದನ್ನ ಹಿರಿಯರು ನಿರ್ಣಯಿಸುತ್ತಾರೆ..

ದಾವಣಗೆರೆ : ರಾಜಕೀಯದಲ್ಲಿ ಇವೆಲ್ಲಾ ಸಹಜ. ಸಿ ಎಂ ಇಬ್ರಾಹಿಂ ಇನ್ನೂ ನಮ್ಮ ಪಕ್ಷದಲ್ಲಿದ್ದಾರೆ. ಅವರ ವಿಚಾರದ ಬಗ್ಗೆ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ನಮ್ಮಲ್ಲಿ ಯಾವುದೇ ಒಡಕಿಲ್ಲ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಕೆಪಿಸಿಸಿ‌ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ.

ಸಿ ಎಂ ಇಬ್ರಾಹಿಂ ಕುರಿತಂತೆ ಕೆಪಿಸಿಸಿ‌ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಪ್ರತಿಕ್ರಿಯೆ ನೀಡಿರುವುದು..

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಮಠದ ಆವರಣದಲ್ಲಿ ಮಾತನಾಡಿದ ಅವರು, ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇದೆ. ಆರು ತಿಂಗಳ‌ ಮುಂಚಿತವಾಗಿ ಟಿಕೆಟ್​ ಹಂಚುವ ಪ್ರಕ್ರಿಯೆ ನಡೆಯುತ್ತದೆ. ಕಾಂಗ್ರೆಸ್​​ಗೆ ಯಾರ್ಯಾರು ಬರುತ್ತಾರೆ ಎಂಬುದನ್ನ ಹಿರಿಯರು ನಿರ್ಣಯಿಸುತ್ತಾರೆ ಎಂದರು.

ನಿವೃತ್ತ ನ್ಯಾ.ನಾಗಮೋಹನ್ ದಾಸ್ ವರದಿ ನೀಡಿದ್ದರು: ಎಸ್​ಟಿ ಸಮುದಾಯ 7.5ರಷ್ಟು ಮೀಸಲಾತಿ ಪಡೆಯಲು ಅರ್ಹತೆ ಹೊಂದಿದೆ. ಆದ್ರೆ, ಅದನ್ನು ಉಪಸಮಿತಿಗೆ ಹಾಕಿದ್ರು. ಉಪಸಮಿತಿಯ ಅಧ್ಯಕ್ಷರು ನಮ್ಮವರೇ ಆದ ಶ್ರೀರಾಮುಲು ಆಗಿದ್ದರು. ಆದ್ರೆ, ನಮಗೆ ಸಾಮಾಜಿಕ ನ್ಯಾಯ ಸಿಗಲಿಲ್ಲ ಎಂದು ಹರಿಹರ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಪ್ರಸನ್ನಾನಂದ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ದಿ. ಮಾದೇಗೌಡರ ಅವಹೇಳನ: ಶಿವರಾಮೇಗೌಡರನ್ನು ಪಕ್ಷದಿಂದ ಹೊರಹಾಕಲು ಹೆಚ್​​ಡಿಕೆ ಸೂಚನೆ

ಇಂದು ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಉಪಸಮಿತಿಯಿಂದ ಉನ್ನತ ಕಮಿಟಿಗೆ ಹಾಕಿದ್ದಾರೆ. ಎಸ್​ಟಿ ಸಮುದಾಯಕ್ಕೆ ಮೀಸಲಾತಿಯಲ್ಲಿ ನ್ಯಾಯ ಸಿಕ್ಕಿಲ್ಲ. ಎಸ್​ಟಿ ಸಮುದಾಯಕ್ಕೆ 7.5ರಷ್ಟು ಮೀಸಲಾತಿ ನೀಡುವುದು ಕನಸಾಗಿದೆ. ಅದಕ್ಕೆ ಹೋರಾಟ ಮಾಡಿಯೇ ಪಡೆಯಬೇಕು. ಆ ಕಾರಣಕ್ಕಾಗಿ ವಾಲ್ಮೀಕಿ ಜಾತ್ರೆ ನಡೆಸುತ್ತಿದ್ದೇವೆ ಎಂದು ಹೇಳುವ ಮೂಲಕ ಸರ್ಕಾರದ ವಿರುದ್ಧ ವಾಲ್ಮೀಕಿ ಶ್ರೀಗಳು ಬೇಸರ ವ್ಯಕ್ತಪಡಿಸಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಅಪಪ್ರಚಾರ : ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಂದು ರಾಜನಹಳ್ಳಿ ಗುರುಪೀಠದ ವಾಲ್ಮೀಕಿ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. ಒಳ್ಳೆ ವ್ಯಕ್ತಿತ್ವ ರೂಪುಗೊಳ್ಳಲು ಟೀಕೆ-ಟಿಪ್ಪಣಿಯನ್ನ ಎದುರಿಸಬೇಕಾಗುತ್ತೆ. ಅದೆಲ್ಲದಕ್ಕೂ ಮುಂದಿನ ದಿನಗಳಲ್ಲಿ ಉತ್ತರ ಕೊಡುತ್ತೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.