ETV Bharat / state

ಮತದಾರರ ಸೆಳೆಯಲು ಸಖಿ, ಲಂಬಾಣಿ ಸಂಸ್ಕೃತಿ ಬಿಂಬಿಸುವ ಮತಗಟ್ಟೆ

author img

By

Published : May 9, 2023, 2:27 PM IST

Updated : May 9, 2023, 5:58 PM IST

polling booth
ಮತಗಟ್ಟೆ

ದಾವಣಗೆರೆಯಲ್ಲಿ ಮತದಾರರನ್ನು ಸೆಳೆಯಲು ವಿಶೇಷ ಮತಗಟ್ಟೆಗಳನ್ನು ತೆರೆಯಲಾಗಿದೆ.

ಮತದಾರರ ದಾವಣಗೆರೆಯಲ್ಲಿ ಮತಗಟ್ಟೆ

ದಾವಣಗೆರೆ: ನಾಳೆ (ಬುಧವಾರ) ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳು ಮಾಡಿದ್ದಾರೆ. ಮತದಾರರನ್ನು ಆಕರ್ಷಿಸಲು ಜಿಲ್ಲೆಯಲ್ಲಿ ಸಖಿ ಹಾಗು ಲಂಬಾಣಿ ಸಂಸ್ಕೃತಿಯನ್ನು ಬಿಂಬಿಸುವ ವಿಶೇಷ ಮತಗಟ್ಟೆಗಳನ್ನು ತೆರೆಯಲಾಗಿದೆ. ಯುವ ಮತದಾರರನ್ನು ಸೆಳೆಯಲು ಯೂತ್ ಆಫೀಸರ್ಸ್ ಹೆಸರಿನ ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದೆ.

ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲೆಯಲ್ಲಿ ಒಟ್ಟು1685 ಮತಗಟ್ಟೆಗಳಿವೆ. ಎಲ್ಲ ಮತಗಟ್ಟೆಗಳಿಗೆ 8,050 ಮತಗಟ್ಟೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಒಂದು ಬೂತ್‌ನಲ್ಲಿ ನಾಲ್ವರು ಸಿಬ್ಬಂದಿಗಳಿರಲಿದ್ದಾರೆ. ಚುನಾವಣಾ ಪ್ರಕ್ರಿಯೆ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.

ಚುನಾವಣೆಗೆ ಎಂ3 ಮಾಡೆಲ್ ಮತಪತ್ರಗಳು ಬಂದಿವೆ. ಅದನ್ನು ಯಾವ ರೀತಿ ಆಪರೇಟ್ ಮಾಡಬೇಕೆಂಬ ಬಗ್ಗೆ ತರಬೇತಿ ಹಾಗು ಮಾರ್ಗದರ್ಶನ ನೀಡಲಾಗಿದೆ‌. ಪೋಲಿಂಗ್ ಬೂತ್‌ಗೆ ತೆರಳಲು ಹಾಗು ಮತಗಟ್ಟೆಯಿಂದ ಹಿಂತಿರುಗುವ ತನಕ ಭದ್ರತೆಗಾಗಿ ಸೆಂಟ್ರಲ್ ಆರ್ಮ್ಡ್‌ ಫೋರ್ಸ್ ನಿಯೋಜನೆ ಮಾಡಲಾಗಿದೆ‌ ಎಂದರು.

16 ವಿಶೇಷ ಮತೆಗಟ್ಟೆಗಳು: ಜಿಲ್ಲೆಯಲ್ಲಿ ಒಟ್ಟು 16 ವಿಶೇಷ ಮlಗಟ್ಟೆಗಳಿದ್ದು, 7 ಸಖಿ ಮತಗಟ್ಟೆ, 7 ಪಿಡ್ಲ್ಯೂಡಿ ಮತಗಟ್ಟೆಗಳು, 1 ಲಂಬಾಣಿ ಸಂಸ್ಕೃತಿ ಬಿಂಬಿಸುವ ಮತಗಟ್ಟೆ ಹಾಗು ಯೂತ್ ಆಫಿಸರ್ಸ್ ಮತಗಟ್ಟೆಗಳನ್ನು ತೆರೆಯಲಾಗಿದೆ. 338 ಬೂತ್‌ಗಳು ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳಿವೆ. ಎಲ್ಲ ಮತಗಟ್ಟೆಗಳ ಭದ್ರತೆಗೆ ಸೆಂಟ್ರಲ್ ಆರ್ಮ್ಡ್‌ ಫೋರ್ಸ್ ನಿಯೋಜನೆ ಮಾಡಲಾಗಿದ್ದು, ಸಿಸಿಟಿವಿ ಹಾಕಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು.

ಎಸ್ಪಿ ಅರುಣ್​ ಕೆ ಮಾತನಾಡಿ, ಮತದಾನದ ದಿನದಂದು ಜಿಲ್ಲೆಯಾದ್ಯಂತ ಭದ್ರತೆಯ ದೃಷ್ಟಿಯಿಂದ ಒಟ್ಟು 4,099 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಿಬ್ಬಂದಿ ಮತಗಟ್ಟೆಗಳಿಗೆ ಇವಿಎಂ ಮಷಿನ್ ತರಲು ಹಾಗು ತೆಗೆದುಕೊಂಡು ಹೋಗಲು ವಿಶೇಷ ಸೆಂಟ್ರಲ್ ಆರ್ಮ್ಡ್‌ ಪೊಲೀಸ್ ಫೋರ್ಸ್​ಗಳನ್ನು ನಿಯೋಜನೆ ಮಾಡಲಾಗಿದೆ‌.

ಜಿಲ್ಲೆಯಲ್ಲಿ 144 ಸೆಷನ್ ಅನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ. ಸೂಕ್ಷ್ಮ ಹಾಗು ಅತಿ ಸೂಕ್ಷ್ಮ ಮತಗಟ್ಟೆ ಹಾಗು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಿಗಾ ವಹಿಸಲಾಗಿದೆ‌. ನಾಳೆ ಎಲ್ಲ ಕಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸೋಷಿಯಲ್ ಮೀಡಿಯಾ ಮೇಲೂ ನಿಗಾ ವಹಿಸಲಾಗಿದೆ. ಒಟ್ಟು 24 ರೌಡಿ ಶೀಟರ್​ಗಳನ್ನು ಗಡಿಪಾರು ಮಾಡಲಾಗಿದೆ. ಗುಂಡಾ ಕಾಯ್ದೆಯನ್ನೂ ಹಾಕಲಾಗಿದೆ. 416 ರೌಡಿಗಳ ಮನೆಗಳನ್ನು ಪರಿಶೀಲನೆ ನಡೆಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಮಾಹಿತಿ ನೀಡಿದರು.

ರಾಜ್ಯದಲ್ಲಿ ಭದ್ರತೆಗೆ 1.5 ಲಕ್ಷ ಪೊಲೀಸ್​ : ಮತದಾನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ಉದ್ದೇಶದಿಂದ ರಾಜ್ಯ ಪೊಲೀಸ್​ ಪಡೆಯು ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಒಟ್ಟು 1.5 ಲಕ್ಷ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಿದ್ದು, 464 ಪ್ಯಾರಾಮಿಲಿಟರಿ ಫೋರ್ಸ್, 304 ಡಿವೈಎಸ್ಪಿ, 991 ಇನ್ಸ್ಪೆಕ್ಟರ್​ಗಳು ಸೇರಿ 84 ಸಾವಿರ ಪೊಲೀಸರು ಕಾರ್ಯನಿರ್ವಹಿಸಲಿದ್ದಾರೆ.

ಇದನ್ನೂ ಓದಿ: ನಾಳೆ ಪ್ರಜಾ ತೀರ್ಪು! ಚುನಾವಣಾ ಭದ್ರತೆಗೆ 1.5 ಲಕ್ಷ ಸಿಬ್ಬಂದಿ ನಿಯೋಜನೆ

Last Updated :May 9, 2023, 5:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.