ETV Bharat / state

ಸರ್ಕಾರಿ ನೌಕರಿ ಸಿಗದೇ ಕೃಷಿಯತ್ತ ಮುಖಮಾಡಿದ ಯುವಕ: 30 ಗುಂಟೆಯಲ್ಲಿ ಟೊಮೆಟೊ ಬೆಳೆದು ಲಕ್ಷಾಧೀಶನಾದ ರೈತ

author img

By

Published : Aug 9, 2023, 6:55 AM IST

Updated : Aug 9, 2023, 12:31 PM IST

tomato
ಟೊಮೆಟೊ

ಟೊಮೆಟೊ ಬೆಳೆದ ಅನ್ನದಾತರು ಭರ್ಜರಿ ಜಾಕ್‌ಪಾಟ್ ಹೊಡೆದಿದ್ದಾರೆ‌‌. ದಾವಣಗೆರೆಯ ಯುವ ರೈತ ಕೇವಲ 30 ಗುಂಟೆಯಲ್ಲಿ ಟೊಮೆಟೊ ಬೆಳೆದು ಲಕ್ಷ ಲಕ್ಷ ಸಂಪಾದಿಸಿದ್ದಾನೆ.

ಟೊಮೆಟೊ ಬೆಳೆದು ಲಕ್ಷಾಧೀಶನಾದ ಯುವ ರೈತ ವಿಜಯ್

ದಾವಣಗೆರೆ : ಟೊಮೆಟೊಗೆ ಚಿನ್ನದ ಬೆಲೆ ಸಿಕ್ಕಿದ್ದರಿಂದ ರೈತರು ಹೆಚ್ಚಿನ ಲಾಭ ಪಡೆಯುತ್ತಿದ್ದು, ಕೆಂಪು ಸುಂದರಿ ಬೆಳೆಯಲು ಮುಂದಾಗಿದ್ದಾರೆ. ಕೆಲ ರೈತರು ಕೋಟಿಗಟ್ಟಲೇ ಲಾಭ ಪಡೆದರೆ ಇನ್ನೂ ಕೆಲವರು ಲಕ್ಷಗಟ್ಟಲೇ ಆದಾಯ ಗಳಿಸಿದ್ದಾರೆ. ಈ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಕ್ಕನೂರು ಗ್ರಾಮದ ರೈತರೊಬ್ಬರು ಸೇರಿದ್ದಾರೆ. ಕೇವಲ ಮೂವತ್ತು ಗುಂಟೆ ಜಮೀನಿನಲ್ಲಿ 7 ಲಕ್ಷ ರೂ. ಲಾಭ ಪಡೆದಿದ್ದು, ಇನ್ನೂ ಮೂರು ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದಾರೆ.

ಹೌದು, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಕ್ಕನೂರಿನ ಯುವ ರೈತ ವಿಜಯ್ ಗಂಟೇರ್ ಅವರು ತಮ್ಮ ಮೂವತ್ತು ಗುಂಟೆ ಜಮೀನಿನಲ್ಲಿ ಟೊಮೆಟೊ ಬೆಳೆದು ಲಕ್ಷಾಧೀಶ ಆಗಿದ್ದಾರೆ. ಕಳೆದ ಮೂರು ವರ್ಷಗಳಿಂದ ವಿಜಯ್ ಟೊಮೆಟೊ ಬೆಳೆಯುತ್ತಿದ್ದು, ಈ ವರ್ಷ ಮಾತ್ರ ಬೆಳೆ ಕೈ ಹಿಡಿದಿದೆ.‌ ನಾನಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರುವ ಯುವ ರೈತ ವಿಜಯ್, ಎಂಎ ಪದವೀಧರರಾಗಿದ್ದು ಎಲ್ಲೂ ಕೆಲಸ ಸಿಗದೇ ಕೃಷಿಯತ್ತ ಮುಖ ಮಾಡಿ ಟೊಮೆಟೊ ಬೆಳೆದು ಲಾಭ ಗಳಿಸಿದ್ದಾರೆ.

ಒಟ್ಟು ಎಂಟು ಎಕರೆ ಜಮೀನಿನಲ್ಲಿ ಐದು ಎಕರೆ ಭತ್ತ ಬೆಳೆಯುತ್ತಿದ್ದು, ಎರಡು ಎಕರೆಯಲ್ಲಿ ಅಡಿಕೆ ತೋಟ, ಉಳಿದ 01 ಎಕರೆಯಲ್ಲಿ ಇರಲು ಮನೆ ನಿರ್ಮಾಣ ಮಾಡಿಕೊಂಡು ಮೂವತ್ತು ಗುಂಟೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದಾರೆ. ಪ್ರಸ್ತುತ, ಟೊಮೆಟೊ ಬೆಲೆ ಗಗನಕ್ಕೇರಿಕೆಯಾಗಿದ್ದರಿಂದ ಕೇವಲ 30 ಗುಂಟೆಯಲ್ಲಿ ಬೆಳೆದ ಟೊಮೆಟೊ ಈವರೆಗೆ 7 ಲಕ್ಷ ರೂ. ಆದಾಯ ತಂದುಕೊಟ್ಟಿದೆ.

ಇದನ್ನೂ ಓದಿ : Tomato price : ಟೊಮೆಟೊ ಬೆಳೆದು ಕೋಟ್ಯಾಧಿಪತಿಯಾದ ರೈತ.. ಅದೃಷ್ಟ ಅಂದ್ರೆ ಇದು...

ಅವಿಭಕ್ತ ಕುಟುಂಬದಲ್ಲಿ ಹುಟ್ಟಿದ ರೈತ ವಿಜಯ್​ಗೆ ಕೃಷಿ ಮಾಡಲು ಇಡೀ ಕುಟುಂಬಸ್ಥರು ಸಾಥ್ ನೀಡಿದ್ದಾರೆ. ಸರ್ಕಾರಿ ನೌಕರಿಗಾಗಿ ಸಾಕಷ್ಟು ಪರೀಕ್ಷೆಗಳನ್ನು ಎದುರಿಸಿರುವ ವಿಜಯ್, ನೌಕರಿ ಸಿಗದ ಬೆನ್ನಲ್ಲೇ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.

2500 ರೂ.ಗೆ ಒಂದು ಬಾಕ್ಸ್ ಟೊಮೆಟೊ ಮಾರಾಟ : ಮೊದಲಿಗೆ 60 ಪೈಸೆಯಂತೆ ಒಟ್ಟು 4000 ಸಸಿಗಳನ್ನು ತರಿಸಿದ್ದ ರೈತ ವಿಜಯ್ ಅವರು ತಮ್ಮ ಜಮೀನಿನಲ್ಲಿ ಕೂರಿಸಿದ್ದರು.‌ ಮೊಟ್ಟ ಮೊದಲ ಬಾರಿಗೆ 25 ಕೆ.ಜಿ ಟೊಮೆಟೊ ಬಾಕ್ಸ್ ಅನ್ನು 1,400 ರೂಪಾಯಿಯಂತೆ ಮಾರಾಟ ಮಾಡಿದ್ದರು. ಬಳಿಕ, 1600 ರೂಪಾಯಿಯಂತೆ, 1800 ರೂ.ಗಳಂತೆ, ಈಗ 2500 ರೂ. ಗೆ ಮಾರಾಟವಾಗಿದೆ. ವಿಜಯ್ ಬೆಳೆದ ಟೊಮೆಟೊ ಹೊನ್ನಾಳಿ, ಹರಿಹರ, ಮಲೇಬೆನ್ನೂರು ಮಾರುಕಟ್ಟೆಯಲ್ಲಿ ಮಾರಾಟ ಆಗುತ್ತಿದ್ದು, ಇದಲ್ಲದೇ ಕೊಕ್ಕನೂರು ಗ್ರಾಮದ ಸುತ್ತಮುತ್ತ ನಡೆಯುವ ಸಂತೆಗಳಲ್ಲೂ ಟೊಮೆಟೊಗೆ ಬೇಡಿಕೆ ಇದೆಯಂತೆ.

ಇದನ್ನೂ ಓದಿ : Tomato : 12 ಎಕರೆಯಲ್ಲಿ ಟೊಮೆಟೊ ಬೆಳೆದು ₹40 ಲಕ್ಷ ಆದಾಯ ; ಚಾಮರಾಜನಗರ ಸಹೋದರರ ಕೃಷಿಖುಷಿ

ರೈತ ಹೇಳಿದ್ದೇನು? : ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯ್​, ಮೊಟ್ಟಮೊದಲ ಬಾರಿಗೆ ರೈತರು ಗುಣಮಟ್ಟದ ಬಿತ್ತನೆ ಬೀಜ ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಮಳೆ ಇಲ್ಲದಿದ್ದರೂ ಬೋರ್​ವೆಲ್ ನೀರಿನಲ್ಲಿ ಆಶ್ರಯ ಪಡೆಯಬೇಕಾಗಿದೆ. ಈ ಹಿಂದೆ ಅಲೂಗಡ್ಡೆ ಬೆಳೆದು ಯಶಸ್ಸು ಕಂಡಿದ್ದೇ. ಇದೀಗ ಟೊಮೆಟೊ ನನ್ನ ಕೈ ಹಿಡಿದಿದೆ. ಕಾಲಕ್ಕೆ ತಕ್ಕಂತೆ ಬೆಳೆ ಬೆಳೆಯಬೇಕಾಗಿದೆ ಎಂದರು.

Last Updated :Aug 9, 2023, 12:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.