ETV Bharat / state

ಹಿಂಸಾತ್ಮಕ ಗೇಮ್​ಗಳ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿ: ಖಾದರ್

author img

By

Published : Apr 6, 2021, 5:24 PM IST

ಮಂಗಳೂರು ಬಳಿಯ ಕೆ.ಸಿ ರೋಡ್​ನಲ್ಲಿ ಪಬ್​ಜಿ ಆಟದ ವಿಚಾರಕ್ಕೆ ಬಾಲಕನ ಕೊಲೆ ನಡೆದಿರುವುದಕ್ಕೆ ಮಾಜಿ ಸಚಿವ ಯು.ಟಿ.ಖಾದರ್ ಆತಂಕ ವ್ಯಕ್ತಪಡಿಸಿದ್ದು, ಹಿಂಸಾತ್ಮಕ ಆಟಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
UT Khadar urged govt to Control violent games
ಮಂಗಳೂರಿನಲ್ಲಿ ಯುಟಿ ಖಾದರ್ ಸುದ್ದಿಗೋಷ್ಠಿ

ಮಂಗಳೂರು: ಪಬ್​ಜಿಯಂತಹ ಹಿಂಸೆಯನ್ನು ಪ್ರಚೋದಿಸುವ ಗೇಮ್ಸ್​ಗಳ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಯು.ಟಿ.ಖಾದರ್ ಆಗ್ರಹಿಸಿದರು.

ನಗರದಲ್ಲಿ ಮಾತನಾಡಿದ ಅವರು, ಆನ್​ಲೈನ್​ ಗೇಮ್​ಗಳು ದೇಶದ ಮಾನವ ಸಂಪನ್ಮೂಲವನ್ನು ಹಾಳುಗೆಡವಿ, ಪರೋಕ್ಷವಾಗಿ ದುರ್ಬಲರನ್ನಾಗಿ ಮಾಡುತ್ತಿವೆ. ಅಲ್ಲದೆ, ಮಕ್ಕಳಲ್ಲಿ ಹಿಂಸೆಯನ್ನು ಪ್ರಚೋದಿಸುವ ಕಾರ್ಯ ಮಾಡುತ್ತಿವೆ. ಇದನ್ನು ತಡೆಗಟ್ಟಲು ಸೂಕ್ತ ನೀತಿ ರೂಪಿಸಬೇಕು ಎಂದರು.

ಮಾಜಿ ಸಚಿವ ಯು.ಟಿ.ಖಾದರ್

ಓದಿ : ಮೊಬೈಲ್ ಗೇಮ್‍ಗಾಗಿ ಬಾಲಕನ ಕೊಲೆ: ಆರೋಪಿ ತಂದೆಯ ಬಂಧನ

ಈ ನಿಟ್ಟಿನಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಮತ್ತು ಸೋಷಿಯಲ್ ಮೀಡಿಯಾ ಘಟಕದಿಂದ ಗ್ರಾಮಗಳಲ್ಲಿ ಪೇರೆಂಟ್ ಕೋಡ್ ಅಕ್ಸೆಸ್ ಬಗ್ಗೆ ಜಾಗೃತಿ ಮೂಡಿಸಿ, ಮಕ್ಕಳು ಮೊಬೈಲ್​ನಲ್ಲಿ ಏನು ಮಾಡುತ್ತಿದ್ದಾರೆ ಎಂಬುವುದನ್ನು ಗಮನಿಸಲು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತದೆ ಎಂದು ತಿಳಿಸಿದರು.

ಕಟೀಲ್​ ಹೇಳಿಕೆಗೆ ಪ್ರತಿಕ್ರಿಯೆ:

ಕೇರಳದಲ್ಲಿ ಬಿಜೆಪಿ 10 ಸ್ಥಾನ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರೀಯಿಸಿದ ಖಾದರ್, ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದ್ದು ಪುಣ್ಯ ಎಂದು ವ್ಯಂಗ್ಯವಾಡಿದರು. ಕೇರಳದಲ್ಲಿ ಈ ಬಾರಿ ಯುಡಿಎಫ್ ಅಧಿಕಾರಕ್ಕೇರಲಿದೆ. ಎಲ್​ಡಿಎಫ್ ಅಧಿಕಾರಕ್ಕೆ ಬರುತ್ತದೆ ಎಂಬ ಸಮೀಕ್ಷೆಗಳು ನಾಮಪತ್ರ ಸಲ್ಲಿಕೆ ಆದಾಗ ಬಂದದ್ದು. ಸಮೀಕ್ಷೆ ಬಿತ್ತರಿಸಿದ 3 ಟಿವಿಗಳಿಗೆ ಸರ್ವೆ ಮಾಡಿದ ಏಜೆಂಟ್ ಒಬ್ಬರೇ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.