ETV Bharat / snippets

ಚೇಸಿಂಗ್ ಮಾಡಿ ದರೋಡೆಕೋರರ ಹೆಡೆಮುರಿ ಕಟ್ಟಿದ ಧಾರವಾಡ ಲೇಡಿ ಪಿಎಸ್​ಐ; ಎಸ್ಪಿ ಶ್ಲಾಘನೆ

author img

By ETV Bharat Karnataka Team

Published : May 23, 2024, 12:19 PM IST

ರೇಣುಕಾ ಐರಾಣಿ
ರೇಣುಕಾ ಐರಾಣಿ (ETV Bharat)

ಧಾರವಾಡ: ರಸ್ತೆಯಲ್ಲಿ ನಿಂತುಕೊಂಡು ದರೋಡೆ ಮಾಡುತ್ತಿದ್ದ ಖದೀಮರನ್ನು ಧಾರವಾಡ ಗ್ರಾಮೀಣ ಪೊಲೀಸರು ಚೇಸಿಂಗ್ ಮಾಡಿ ಹಿಡಿದಿದ್ದಾರೆ.

ಧಾರವಾಡ ತಾಲೂಕಿನ ಮಂಡಿಹಾಳ ಗ್ರಾಮದ ಬಳಿ ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ತಡೆದ ಖದೀಮರು ಅವರಲ್ಲಿ ಹಣ ಹಾಗೂ ಮೊಬೈಲ್​ ದರೋಡೆ ಮಾಡಿ ಅಲ್ಲಿಂದ ಎಸ್ಕೇಪ್​ ಆಗಿದ್ದರು. ಕೂಡಲೇ ಆ ವ್ಯಕ್ತಿ ಧಾರವಾಡ ಗ್ರಾಮೀಣ ಪಿಎಸ್ಐ ರೇಣುಕಾ ಐರಾಣಿ ಅವರಿಗೆ ಕರೆ ಮಾಡಿ ಘಟನೆ ಕುರಿತು ತಿಳಿಸಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ರೇಣುಕಾ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ದರೋಡೆಕೋರರು ಹೋಗಿದ್ದ ರಸ್ತೆಯನ್ನು ಅನುಸರಿಸಿ ಸಿನಿಮಿಯ ರೀತಿಯಲ್ಲಿ ಚೇಸ್​ ಮಾಡಿದ ಲೇಡಿ ಸಿಂಗಮ್​ ಇಬ್ಬರನ್ನು ಸೆರೆ ಹಿಡಿದಿದ್ದಾರೆ. ಪಿಎಸ್ಐ ರೇಣುಕಾ ಅವರ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿ ಬಹುಮಾನವನ್ನು ನೀಡಿ ಗೌರವಿಸಿದ್ದಾರೆ.

ಇದನ್ನೂ ಓದಿ: ಕ್ಯಾಂಟರ್ ಅಡ್ಡಗಟ್ಟಿ ₹32 ಲಕ್ಷ ದರೋಡೆ ಪ್ರಕರಣ: ಐವರ ಬಂಧನ, ₹31 ಲಕ್ಷ ರಿಕವರಿ - robbery case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.