ETV Bharat / state

ಯುವತಿಗೆ ಬ್ಲ್ಯಾಕ್ ಮೇಲ್: ಪುಣಚ ನಿವಾಸಿ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು

author img

By

Published : Jan 4, 2021, 7:08 AM IST

ಹೆಂಡತಿಯ ಸ್ವಂತ ತಂಗಿಗೆ ನಿರಂತರ ದೈಹಿಕ ಶೋಷಣೆ ಮಾಡಿದ್ದಲ್ಲದೇ, ಆಕೆಯ ನಗ್ನ ಫೋಟೊಗಳನ್ನಿಟ್ಟುಕೊಂಡು ಬ್ಲಾಕ್​ಮೇಲ್​ ಮಾಡುತ್ತಿದ್ದ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

Sexual abuse and Black mail to young woman: case registered in Vitla police station
ಯುವತಿಗೆ ಬ್ಲ್ಯಾಕ್ ಮೇಲ್: ಪುಣಚ ನಿವಾಸಿ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ: ಯುವತಿಯೊಬ್ಬಳ ನಗ್ನ ಫೋಟೋಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ತಾಲೂಕಿನ ಪುಣಚ ನಿವಾಸಿ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುಣಚದ ಬಶೀರ್ ಮೇಲೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ಕಡಂಬು ಬೆದ್ರಕಾಡು ನಿವಾಸಿ 19 ವರ್ಷದ ಅವಿವಾಹಿತ ಯುವತಿಯನ್ನು ಕಳೆದ ಸೆಪ್ಟೆಂಬರ್ ನಿಂದ ಆಕೆಯ ಅಕ್ಕನ ಪತಿಯೇ ಬಲಾತ್ಕಾರವಾಗಿ ನಿರಂತರ ದೈಹಿಕ ಸಂಪರ್ಕ ಮಾಡಿದ್ದ. ಜೊತೆಗೆ ಆಕೆಯ ನಗ್ನ ಚಿತ್ರಗಳನ್ನು ಮೊಬೈಲ್ ನಲ್ಲಿ ತೆಗೆದುಕೊಂಡಿದ್ದ. ತನ್ನ ಬೇಡಿಕೆಗಳನ್ನು ಪೂರೈಸದೇ ಹೋದಲ್ಲಿ ಮೊಬೈಲ್ ನಲ್ಲಿರುವ ಚಿತ್ರಗಳನ್ನು ವೈರಲ್ ಮಾಡುವುದಾಗಿ ಹೆದರಿಸಿದ್ದ ಎಂದು ಠಾಣೆಯಲ್ಲಿ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಷ್ಟೇ ಅಲ್ಲ, ತಾನು ಹೇಳಿದಂತೆ ಕೇಳದಿದ್ದರೆ ಕೊಲ್ಲುವುದಾಗಿ ಜೀವ ಬೆದರಿಕೆಯನ್ನೂ ಹಾಕಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.