ETV Bharat / state

ಈಟಿವಿ ಭಾರತ ವರದಿಗೆ ಸ್ಪಂದಿಸಿದ ಪುತ್ತೂರು ನಗರ ಪೊಲೀಸರು! ಅಕ್ರಮ ಚಟುವಟಿಕೆಗಳಿಗೆ ಕತ್ತರಿ

author img

By

Published : Nov 13, 2020, 9:12 PM IST

Updated : Nov 13, 2020, 9:47 PM IST

Puttur city police responded to ETV Bharat report
ಖಾಸಗಿ ಆಂಬ್ಯುಲೆನ್ಸ್

ಪುತ್ತೂರಿನಲ್ಲಿ ಕೆಲವು ಖಾಸಗಿ ಆಂಬ್ಯುಲೆನ್ಸ್​ಗಳು ಕಾನೂನು ಮೀರಿ ಟಿಂಟ್ ಅಳವಡಿಸಿಕೊಂಡು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿರುವ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ ಎಚ್ಚತ್ತ ಪೊಲೀಸರು ಅವುಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಪುತ್ತೂರು : ಖಾಸಗಿ ಆಂಬ್ಯುಲೆನ್ಸ್​ಗಳು ಕಾನೂನು ಮೀರಿ ಗ್ಲಾಸ್​ಗಳಿಗೆ ಟಿಂಟ್ ಅಳವಡಿಸಿ ಓಡಾಡುತ್ತಿವೆ ಎಂಬ ಈಟಿವಿ ಭಾರತ ವರದಿ ಹಿನ್ನೆಲೆ ಇದೀಗ ಪೊಲೀಸ್​ ಇಲಾಖೆ ಅಕ್ರಮವಾಗಿ ಟಿಂಟ್ ಅಳವಡಿಸಿದ ಆಂಬ್ಯುಲೆನ್ಸ್​ಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ.

ಪುತ್ತೂರಿನ ಕೆಲವು ಆಂಬ್ಯುಲೆನ್ಸ್​ಗಳು ಈ ರೀತಿ ಅಕ್ರಮವಾಗಿ ಟಿಂಟ್ ಅಳವಡಿಸಿ ಕಾರ್ಯಾಚರಣೆ ನಡೆಸುತ್ತಿರುವ ಹಾಗೂ ಈ ಮೂಲಕ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿವೆ ಎಂಬ ಆರೋಪದ ಹಿನ್ನೆಲೆ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿತ್ತು.

ಟಿಂಟ್ ಅಳವಡಿಸಿದ ಆಂಬ್ಯುಲೆನ್ಸ್​ಗಳ ವಿರುದ್ಧ ಕ್ರಮ

ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ ಎಚ್ಚೆತ್ತ ಪುತ್ತೂರು ನಗರ ಪೊಲೀಸರು ಟಿಂಟ್ ಅಳವಡಿಸಿರುವ ಎಲ್ಲಾ ಆಂಬ್ಯುಲೆನ್ಸ್​ಗಳು ತಕ್ಷಣವೇ ಅವುಗಳನ್ನು ತೆರವುಗೊಳಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಪೊಲೀಸ್​ ಠಾಣೆಗೆ ಕರೆಸಿ ಅಲ್ಲೇ ಕೆಲವು ಆಂಬ್ಯುಲೆನ್ಸ್​ಗಳ ಟಿಂಟ್​ಗಳನ್ನು ತೆರವುಗೊಳಿಸಿದ್ದಾರೆ. ಜೊತೆಗೆ ದಂಡವನ್ನು ಸಹ ಹಾಕಿದ್ದಾರೆ.

Last Updated :Nov 13, 2020, 9:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.