ETV Bharat / state

ಸಿರಿಯಾ ಹಡಗಿನಲ್ಲಿ ದೋಷ.. 15 ಮಂದಿ ರಕ್ಷಣೆ, ಕೋಸ್ಟ್ ಗಾರ್ಡ್ ಸುಪರ್ದಿಯಲ್ಲಿ ವಿದೇಶಿ ಪ್ರಜೆಗಳು

author img

By

Published : Jun 22, 2022, 7:05 PM IST

Problem in Syrian ship
ಸಿರಿಯಾದ ಹಡಗಿನಲ್ಲಿ ದೋಷ

ಮಂಗಳೂರಿನ ಕಡಲತೀರದಲ್ಲಿ ದೋಷ ಕಾಣಿಸಿಕೊಂಡ ಹಡಗಿನಿಂದ ರಕ್ಷಿಸಲ್ಪಟ್ಟ 15 ಮಂದಿ ಸಿರಿಯನ್ ಪ್ರಜೆಗಳು ಕೋಸ್ಟ್ ಗಾರ್ಡ್ ಸುಪರ್ದಿಯಲ್ಲಿದ್ದಾರೆ. ಹಸ್ತಾಂತರ ಪ್ರಕ್ರಿಯೆ ಮುಗಿದ ನಂತರ ಸಿರಿಯಾ ದೇಶಕ್ಕೆ ಅವರನ್ನು ಕಳುಹಿಸಲಾಗುವುದು ಎಂದು ತಿಳಿದುಬಂದಿದೆ.

ಮಂಗಳೂರು: ಇಲ್ಲಿನ ಕಡಲತೀರದಲ್ಲಿ ಸಿರಿಯಾ ದೇಶದ ಹಡಗಿನಲ್ಲಿ ದೋಷ ಕಂಡುಬಂದ ಪರಿಣಾಮ ಅಪಾಯದಲ್ಲಿದ್ದ 15 ಮಂದಿ ವಿದೇಶಿಗರನ್ನು ಮಂಗಳವಾರ ರಕ್ಷಿಸಲಾಗಿತ್ತು. ಇದೀಗ ಅವರು ಕೋಸ್ಟ್ ಗಾರ್ಡ್ ಸುಪರ್ದಿಯಲ್ಲಿದ್ದಾರೆ. ಮಂಗಳೂರಿನ ಉಳ್ಳಾಲದ 5 ರಿಂದ 6 ನಾಟಿಕಲ್ ಮೈಲ್ ದೂರದಲ್ಲಿ MV PRINCESS MIRAL ಎಂಬ ಸಿರಿಯಾ ದೇಶದ ಹಡಗಿನಲ್ಲಿ ದೋಷ ಕಾಣಿಸಿಕೊಂಡಿತ್ತು. ಈ ಹಡಗಿನಲ್ಲಿ 8 ಸಾವಿರ ಟನ್ ಸ್ಟೀಲ್ ಕಾಯಿಲ್​ನ್ನು ಒಮನ್​ನಿಂದ ಈಜಿಪ್ಟ್​ಗೆ ಸಾಗಿಸಲಾಗುತ್ತಿತ್ತು.

ಮಂಗಳೂರು ಕಡಲತೀರದಲ್ಲಿ ಪ್ರಯಾಣ ಬೆಳೆಸುವಾಗ ಈ ಹಡಗಿನ ಒಳಭಾಗದ ಸಣ್ಣ ರಂಧ್ರದ ಮೂಲಕ ನೀರು ಬರಲು ಆರಂಭಿಸಿತ್ತು. ಇದರಿಂದ ಹಡಗಿನಲ್ಲಿದ್ದ 15 ಮಂದಿ ಸಿಬ್ಬಂದಿ ಅಪಾಯಕ್ಕೆ ಸಿಲುಕಿದ್ದರು. ಈ ಬಗ್ಗೆ ಮಾಹಿತಿ ಪಡೆದ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ ಅಪಾಯದಲ್ಲಿದ್ದ 15 ಮಂದಿಯನ್ನು ರಕ್ಷಿಸಿದ್ದರು.

ಇದನ್ನೂ ಓದಿ: ಮಂಗಳೂರು: ಸಿರಿಯಾ ದೇಶದ ಹಡಗಿನಲ್ಲಿ ದೋಷ, 15 ಸಿಬ್ಬಂದಿ ರಕ್ಷಣೆ

ಕೋಸ್ಟ್ ಗಾರ್ಡ್​ನ ಪ್ರಕ್ರಿಯೆ ಮುಗಿದ ಬಳಿಕ ಅವರನ್ನು ಪಣಂಬೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗುತ್ತದೆ. ಆ ಬಳಿಕ ಅವರನ್ನು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮೂಲಕ ಹಾಸ್ಟೆಲ್​ನಲ್ಲಿ ವಾಸ್ಯವ್ಯದಲ್ಲಿರಿಸಲಾಗುತ್ತದೆ. ನಂತರ ನೆಲಮಂಗಲದ ವಿದೇಶಿ ಪತ್ತೆ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ರಾಯಭಾರ ಕಚೇರಿಯ ಆದೇಶದ ಬಳಿಕ ಅವರನ್ನು ಸಿರಿಯಾ ದೇಶಕ್ಕೆ ಕಳುಹಿಸಲಾಗುತ್ತದೆ. ಇದೀಗ ಇವರೆಲ್ಲರೂ ಕೋಸ್ಟ್ ಗಾರ್ಡ್ ಸುಪರ್ದಿಯಲ್ಲಿದ್ದು, ದೋಷಯುಕ್ತ ಹಡಗನ್ನು ನವಮಂಗಳೂರು ಬಂದರಿನ ವ್ಯಾಪ್ತಿಯಲ್ಲಿ ಇರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.