ETV Bharat / state

ಮಣಿಪಾಲ - ಮಂಗಳೂರು ವಿಮಾನ ನಿಲ್ದಾಣದ ನಡುವೆ 'ಕರಾವಳಿ ಕನ್ನಡ ತೇರು' ವೋಲ್ವೋ ಬಸ್ ಆರಂಭ

author img

By

Published : Nov 1, 2022, 8:17 PM IST

flag-off-to-volvo-bus-between-manipal-and-mangaluru-airport
ಮಣಿಪಾಲ - ಮಂಗಳೂರು ವಿಮಾನ ನಿಲ್ದಾಣದ ನಡುವೆ 'ಕರಾವಳಿ ಕನ್ನಡ ತೇರು' ವೋಲ್ವೋ ಬಸ್ ಆರಂಭ

ಉಡುಪಿ ಜಿಲ್ಲೆಯ ‌ಮಣಿಪಾಲ ಮತ್ತು ಮಂಗಳೂರು ರೈಲ್ವೆ ನಿಲ್ದಾಣದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣ ನಡುವಿನ ಕರಾವಳಿ ಕನ್ನಡ ತೇರು ಬಸ್​ಗಳಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಹಸಿರು ನಿಶಾನೆ ತೋರಿದರು.

ಮಂಗಳೂರು: ಉಡುಪಿ ಜಿಲ್ಲೆಯ ‌ಮಣಿಪಾಲ ಮತ್ತು ಮಂಗಳೂರು ರೈಲ್ವೆ ನಿಲ್ದಾಣದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ವೋಲ್ವೋ ಬಸ್​ ಸೇವೆಗೆ ಇಂದು ನಗರದ ಬಿಜೈನಲ್ಲಿರುವ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು. ಕರಾವಳಿ ಕನ್ನಡ ತೇರು ಹೆಸರಿನ ಮೂರು ಬಸ್​ಗಳಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.

ಈ ಬಸ್ ಮಂಗಳೂರು ರೈಲು ನಿಲ್ದಾಣದಿಂದ ಜ್ಯೋತಿ, ಲಾಲ್ ಭಾಗ್, ಕುಂಟಿಕಾನ, ಕಾವೂರು ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ತಲುಪಲಿದ್ದು, ಬೆಳಗ್ಗೆ 6.30, 8.45, ಪೂರ್ವಾಹ್ನ 11.10, ಮಧ್ಯಾಹ್ನ 3 ಸಂಜೆ 5.15 ರಾತ್ರಿ 7.30ಕ್ಕೆ ಬಸ್​ ಹೊರಡಲಿದೆ. ವಿಮಾ‌ನ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಬೆಳಗ್ಗೆ 7.40, 10.00, ಮಧ್ಯಾಹ್ನ 12.20, ಸಂಜೆ 4.05, ಸಂಜೆ 6.25, ರಾತ್ರಿ 8.45ಕ್ಕೆ ಬಸ್​ ಸಂಚರಿಸಲಿದೆ.

flag-off-to-volvo-bus-between-manipal-and-mangaluru-airport
ಮಣಿಪಾಲ - ಮಂಗಳೂರು ವಿಮಾನ ನಿಲ್ದಾಣದ ನಡುವೆ 'ಕರಾವಳಿ ಕನ್ನಡ ತೇರು' ವೋಲ್ವೋ ಬಸ್ ಆರಂಭ

ಮಣಿಪಾಲದಿಂದ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 7.15, ಬೆಳಗ್ಗೆ 8.45 ಮತ್ತು ಸಂಜೆ 5.15ಕ್ಕೆ ಹೊರಡಲಿದೆ. ವಿಮಾನ ನಿಲ್ದಾಣದಿಂದ ಮಣಿಪಾಲಕ್ಕೆ 10.45, ಮಧ್ಯಾಹ್ನ 12.30 ಮತ್ತು ರಾತ್ರಿ 9.15 ಕ್ಕೆ ತೆರಳಲಿದೆ. ಮಂಗಳೂರು ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣ ದರ 100 ರೂ. ಹಾಗೂ ಮಣಿಪಾಲ ಮತ್ತು ಮಂಗಳೂರು ವಿಮಾನ ನಿಲ್ದಾಣದ ದರ 300 ರೂಪಾಯಿ ನಿಗದಿಪಡಿಸಲಾಗಿದೆ.

ಬಸ್​ಗೆ ಚಾಲನೆ ನೀಡುವ ಸಂದರ್ಭದಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್, ಡಾ.ವೈ.ಭರತ್ ಶೆಟ್ಟಿ, ಉಮಾನಾಥ್ ಕೊಟ್ಯಾನ್, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಮೀನುಗಾರಿಕಾ‌ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ್, ಕೆಎಸ್​ಆರ್​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.

ಇದನ್ನೂ ಓದಿ: ನಿಮ್ಮಲ್ಲಿ ಸ್ಮಾರ್ಟ್ ಫೋನ್ ಇದ್ದರೆ, ನಾಳೆಯಿಂದ ಮೆಟ್ರೋ ಪ್ರಯಾಣ ಇನ್ನೂ ಸುಲಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.