ETV Bharat / state

ಉಸೇನ್ ಬೋಲ್ಟ್ ದಾಖಲೆ ಮುರಿದ ಕಂಬಳ ವೀರ ಶ್ರೀನಿವಾಸ ಗೌಡ ವಿರುದ್ಧ ದೂರು

author img

By

Published : Jul 20, 2022, 12:26 PM IST

Updated : Jul 20, 2022, 4:37 PM IST

complaint-against-kambala-racer-srinivas-gowda
ಉಸೇನ್ ಬೋಲ್ಟ್ ದಾಖಲೆ ಮುರಿದಿದ್ದ ಕಂಬಳ ವೀರ ಶ್ರೀನಿವಾಸ ಗೌಡ ವಿರುದ್ಧ ದೂರು

ಕಂಬಳ ಓಟದಲ್ಲಿ ದಾಖಲೆ ಬರೆದಿರುವ ಕಂಬಳ ವೀರ ಶ್ರೀನಿವಾಸ ಗೌಡ ಅವರ ವಿರುದ್ಧ ಮೂಡಬಿದಿರೆ ಪೊಲೀಸ್​​ ಠಾಣೆಯಲ್ಲಿ ದೂರು ನೀಡಲಾಗಿದೆ.

ಮಂಗಳೂರು: ಉಸೇನ್ ಬೋಲ್ಟ್ ದಾಖಲೆಯನ್ನು ಕಂಬಳ ಓಟದಲ್ಲಿ ಮುರಿದು ಗಮನ ಸೆಳೆದಿದ್ದ ಮೂಡಬಿದ್ರೆಯ ಕಂಬಳ ವೀರ ಶ್ರೀನಿವಾಸ ಗೌಡ ಅವರ ವಿರುದ್ಧ ಮೂಡಬಿದಿರೆ ಪೊಲೀಸ್​​ ಠಾಣೆಯಲ್ಲಿ ದೂರು ನೀಡಲಾಗಿದೆ. ಶ್ರೀನಿವಾಸ ಅವರ ದಾಖಲೆಯು ನಕಲಿ ಎಂದು ದೂರಲಾಗಿದೆ.

ಮೂಡಬಿದಿರೆಯ ಶ್ರೀನಿವಾಸ ಗೌಡ 2020ರಲ್ಲಿ ನಡೆದ ಐಕಳ ಕಂಬಳದಲ್ಲಿ 100 ಮೀಟರ್ ದೂರವನ್ನು 9.55 ಸೆಕೆಂಡ್​​ನಲ್ಲಿ ಕ್ರಮಿಸಿದ್ದರು. ಇದು 2009ರಲ್ಲಿ ಉಸೇನ್ ಬೋಲ್ಟ್ ಅವರ 100 ಮೀಟರ್​ನ್ನು 9.58 ಸೆಕೆಂಡ್​​ನಲ್ಲಿ ಕ್ರಮಿಸಿದ ದಾಖಲೆಯನ್ನು ಮೀರಿಸಿತ್ತು. ಬೋಲ್ಟ್ ದಾಖಲೆಯನ್ನು ಮೀರಿಸಿದ ಕಾರಣಕ್ಕೆ ಶ್ರೀನಿವಾಸ ಗೌಡರಿಗೆ ರಾಜ್ಯ ಸರ್ಕಾರ ಸೇರಿದಂತೆ ದೇಶದ ಹಲವು ಸಂಸ್ಥೆಗಳು ಸೇರಿ ನಗದು ಪುರಸ್ಕಾರ ನೀಡಿ ಗೌರವಿಸಿದ್ದವು.

ಇದನ್ನೂ ಓದಿ: ಕಂಬಳ ಕರೆಯಲ್ಲಿ ಕರಾವಳಿ ಕುವರನ ಹೊಸ ದಾಖಲೆ: ವೇಗದಲ್ಲಿ ಪಾರುಪತ್ಯ ಸಾಧಿಸಿದ ಶ್ರೀನಿವಾಸ್​​

ಆದರೆ ಈ ದಾಖಲೆ ನಕಲಿಯಾಗಿದೆ ಎಂದು ಕಂಬಳ ಕೋಣಗಳ ಯಜಮಾನ, ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಸದಸ್ಯ ಲೋಕೇಶ್ ಶೆಟ್ಟಿ ಎಂಬವರು ಮೂಡಬಿದಿರೆಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶ್ರೀನಿವಾಸ ಗೌಡ, ಕಂಬಳ ಅಕಾಡೆಮಿ ನಡೆಸುವ ಗುಣಪಾಲ ಕಡಂಬ, ಲೇಸರ್ ಬೀಮ್ ಮೂಲಕ ಕಂಬಳದ ಫಲಿತಾಂಶ ಘೋಷಿಸುವ ಸ್ಕೈ ವೀವ್ ಮಾಲೀಕ ರತ್ನಾಕರ ಎಂಬುವರನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನಲ್ಲಿ ಏನಿದೆ: ನಾನು ಜಿಲ್ಲಾ ಕಂಬಳ ಸಮಿತಿಯ ಸದಸ್ಯನಾಗಿದ್ದು , ಆರೋಪಿಗಳು ಸಮಿತಿ ಸದಸ್ಯರಾಗಿರುವುದಿಲ್ಲ. ಮೊದಲನೇ ಆರೋಪಿ ಕೆ ಗುಣಪಾಲ ಕಡಂಬ ಕಂಬಳ ಆಕಾಡೆಮಿಯನ್ನು ನಡೆಸಿಕೊಂಡು ಬರುತ್ತಿದ್ದು, ತನ್ನ ಸ್ವಂತ ಲಾಭಕ್ಕಾಗಿ ಜಿಲ್ಲಾ ಕಂಬಳ ಸಮಿತಿಯಲ್ಲಿ ಅಕ್ರಮ ಪ್ರವೇಶ ಮಾಡಿದ್ದರು. ಮಾತ್ರವಲ್ಲದೆ ಕಂಬಳ ಕೂಟದ ಸಭೆಗಳಲ್ಲಿ ಮೈಕ್ ಹಿಡಿದು ತಾನೊಬ್ಬ ಮಹಾಸಾಧಕ, ನನ್ನಿಂದಲೇ ಕಂಬಳ ಉಳಿದಿದೆ ಎಂದು ಸಾರ್ವಜನಿಕರಲ್ಲಿ ಬಿಂಬಿಸಿ, ತನ್ನ ಸ್ವಾರ್ಥ ಸಾಧನೆಗೆ ಕಂಬಳವನ್ನು ದುರುಪಯೋಗಪಡಿಸಿಕೊಂಡಿದ್ದಾರೆ.

complaint-against-kambala-racer-srinivas-gowda
ದೂರು ನೀಡುತ್ತಿರುವುದು

ಅಷ್ಟೇ ಅಲ್ಲದೆ ಅವರ ಆಕಾಡೆಮಿಯಲ್ಲಿ ತರಬೇತಿ ಪಡೆದಿದ್ದರೆನ್ನಲಾದ ಎರಡನೇ ಆರೋಪಿ ಶ್ರೀನಿವಾಸ ಗೌಡ ಹೆಸರಲ್ಲಿ ಹಲವು ನಕಲಿ ದಾಖಲೆ ಸೃಷ್ಟಿಸಿದ್ದು, ಮಾಧ್ಯಮಗಳ ಮೂಲಕ ಬೊಗಳೆ ಬಿಟ್ಟು ಕಂಬಳದ ಅಭಿಮಾನಿಗಳು ಮತ್ತು ಸಾರ್ವಜನಿಕರಿಗೆ. ಮಾಧ್ಯಮ ಮತ್ತು ಜನಪ್ರತಿನಿಧಿಗಳಿಗೆ ನಂಬಿಕೆ ಬರುವಂತೆ ಮೋಸದಿಂದ ನಡೆದುಕೊಂಡಿದ್ದಾರೆ.

ಈ ಆರೋಪಿಗಳು ನಕಲಿ ದಾಖಲೆ ಮತ್ತು ದಾಸ್ತಾವೇಜು ಸೃಷ್ಟಿಸುವ ಮೂಲಕ ಸರ್ಕಾರ ಮತ್ತು ಸಾರ್ವಜನಿಕ ವಲಯದಿಂದ ಲಕ್ಷಾಂತರ ರೂಪಾಯಿ ದೇಣಿಗೆ ಪಡೆದು ಯಾವುದೇ ಲೆಕ್ಕಪತ್ರ ಮಂಡನೆ ಮಾಡದೆ ವಂಚಿಸಿದ್ದಾರೆ. ಅಷ್ಟೇ ಅಲ್ಲದೆ ಅವರ ಆಕಾಡೆಮಿಯಲ್ಲಿ ತರಬೇತಿ ಪಡೆದಿದ್ದರೆನ್ನಲಾದ ಎರಡನೇ ಆರೋಪಿ ಹೆಸರಲ್ಲಿ ಹಲವು ನಕಲಿ ದಾಖಲೆ ಸೃಷ್ಟಿಸಿದ್ದು, ಮಾಧ್ಯಮಗಳ ಮೂಲಕ ಬೊಗಳೆ ಬಿಟ್ಟು ಕಂಬಳದ ಅಭಿಮಾನಿಗಳು ಮತ್ತು ಸಾರ್ವಜನಿಕರಿಗೆ ವಂಚಿಸಿರುತ್ತಾರೆ.

ಈ ರತ್ನಾಕರ್ ಯಾವುದೇ ಘನ ಸರ್ಕಾರದ ಪರವಾನಿಗೆ ಪಡೆಯದೇ ಕಂಬಳಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಹಾಗೇಯ ಸರಕಾರವನ್ನು ವಂಚಿಸಿ ಸರ್ಕಾರಕ್ಕೆ ದಾಖಲೆಯನ್ನು ನೀಡಿ ಕಾರ್ಮಿಕ ಇಲಾಖೆಯಿಂದ ಸಹಾಯ ಧನವನ್ನೂ ಪಡೆದಿದ್ದಾರೆ. ಈ ಮೂಲಕ ಯುವ ಓಟಗಾರರ ಮನೋಸೈರ್ಯವನ್ನು ಹಾಳು ಮಾಡಿದ್ದಾರೆ. ಅಷ್ಟೇ ಅಲ್ಲದೇ ಕಂಬಳದಲ್ಲಿ ಯಥೇಚ್ಚಾಗಿ ನಡೆಯುವಂತ ಜೂಜುಕೋರರಿಗೆ ಪರೋಕ್ಷವಾಗಿ ಸಹಕರಿಸುತ್ತಿರುವ ಬಗ್ಗೆ ಇತ್ತಿಚೆಗೆ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯ ಕಂಬಳ ಸಮಿತಿ ರಚನೆಯ ಬಗ್ಗೆ ಸುತ್ತೋಲೆ ಹೋರಡಿಸಿತ್ತು .

ಇದರ ಬಗ್ಗೆ ಯಾವುದೇ ಕಂಬಳ ಸಮಿತಿಯ ಅಜೀವ ಸದಸ್ಯರೊಡನೆ ಚರ್ಚಿಸದೇ ತನ್ನ ಇಚ್ಚಾ ಪ್ರಕಾರವಾಗಿ ಕೆಲವರ ಹೆಸರನ್ನು ಬರೆದು ಸರ್ಕಾರಕ್ಕೆ ಕಳುಹಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ, ಅದಲ್ಲದೆ ಕೆ . ಗುಣಪಾಲ ಕಡಂಬ ತನ್ನನ್ನು ತಾನೆ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದಾರೆ. ತಾವುಗಳು ದಯವಿಟ್ಟು ಈ ಸಮಿತಿಗೆ ಅಂಗೀಕರಿಸದೆ, ಅನುಮತಿ ನೀಡದೆ ನ್ಯಾಯಯುತವಾಗಿ ಬಳಸಿ ಸಮಿತಿಯ ಅಜೀವ ಸದಸ್ಯರ , ವ್ಯವಸ್ಥಾಪಕರ , ಕೋಣಗಳ ಯಜಮಾನರುಗಳು ಹಾಗೂ ಕಂಬಳ ಅಭಿಮಾನಿಗಳ ಸಭೆಯನ್ನು ಕರೆದು ಸರ್ಕಾರದ ನೇತೃತ್ವದಲ್ಲಿ ಈ ಸಮಿತಿ ರಚನೆಯಾಗಬೇಕು ಹಾಗೂ ಕೆ . ಗುಣಪಾಲ ಕಡಂಬ ಶ್ರೀನಿವಾಸ ಗೌಡ ರತ್ನಾಕರ್ ಹಾಗೂ ನಿಕಟ ಪೂರ್ವ ಅಧ್ಯಕ್ಷರಾಗಿರುವ ಪಿ . ಆರ್ . ಶೆಟ್ಟಿ , ರೋಹಿತ್‌ ಹೆಗ್ಡೆ ಅವರನ್ನು ವಿಚಾರಿಸಿ ಕಂಬಳಕ್ಕೆ ಹಾಗೂ ಕಂಬಳ ಅಭಿಮಾನಿಗಳಿಗೆ ನ್ಯಾಯವನ್ನು ಒದಗಿಸಿ ಕೊಡಬೇಕಾಗಿ ವಿನಂತಿ ಎಂದು ದೂರುದಾರ ಲೋಕೇಶ್ ಅವರು ಬರೆದಿದ್ದಾರೆ.

ಏನಿದು ಲೇಸರ್ ಬೀಮ್ ತಂತ್ರಜ್ಞಾನ: ಕಂಬಳದಲ್ಲಿ ವೇಗವನ್ನು ತಿಳಿದುಕೊಳ್ಳಲು ಲೇಸರ್ ಬೀಮ್ ತಂತ್ರಜ್ಞಾನ ಅಳವಡಿಸಲಾಗುತ್ತದೆ. ಕಂಬಳದಲ್ಲಿ ಕೋಣಗಳ ಓಟ ಥರ್ಡ್‌ ಅಂಪೈರ್‌ಗೂ ನಿರ್ಧರಿಸಲಾಗದಷ್ಟು ಸೂಕ್ಷ್ಮವಾಗಿದ್ದು, ಕಂಬಳ ಓಟದಲ್ಲಿ ಅಂತಿಮ ಗೆರೆಯ ಮೇಲೆ ಮೊದಲು ಕಾಲಿಟ್ಟ ಕೋಣದ ಜೋಡಿಗೆ ಗೆಲುವು ಅಂತ ಘೋಷಿಸಲಾಗುತ್ತೆ. ಅದರೆ. ಸೆಕೆಂಡ್ ಗಳ ಲೆಕ್ಕದಲ್ಲಿ ಮೊದಲು ಗೆರೆ ಮೇಲೆ ಕಾಲಿಟ್ಟದ್ದು ಯಾವ ಕೋಣಗಳ ಜೋಡಿ ಎನ್ನುವುದನ್ನು ನಿರ್ಧರಿಸುವುದು ಕಷ್ಟ. ಇದಕ್ಕಾಗಿ ಎಂಡ್‌ ಪಾಯಿಂಟ್‌ನಲ್ಲಿ ಅಳವಡಿಸಿರುವ ಹೊಸ ಟೆಕ್ನಾಲಜಿ ಲೇಸರ್‌. ಕೋಣದ ವೇಗವನ್ನು ಅಳೆಯಲು ಈಗ ಲೇಸರ್‌ ಬೀಮ್‌ ತಂತ್ರಜ್ಞಾನ ಹಾಗೂ ಸಮಯ ಅಳೆಯಲು ಇಲೆಕ್ಟ್ರಿಕ್‌ ಟೈಮರ್‌ ಅನ್ನು ಅಳವಡಿಸಲಾಗುತ್ತದೆ. ಇದರಿಂದ ಲೆಕ್ಕಾಚಾರ ಮಾಡಿ ವಿಜಯಿ ಕೋಣಗಳನ್ನು ಘೋಷಿಸಲಾಗುತ್ತದೆ.

ಇದನ್ನೂ ಓದಿ: ಬಿಜೆಪಿ ಬೆಂಬಲಿಸಿದರಷ್ಟೇ ಸಚಿವ ಎಸ್.ಅಂಗಾರರ ಕ್ಷೇತ್ರದಲ್ಲಿ ಸರ್ಕಾರಿ ಸೌಲಭ್ಯ? ಆಡಿಯೋ ವೈರಲ್

Last Updated :Jul 20, 2022, 4:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.