ETV Bharat / state

ಮಂಗಳೂರಲ್ಲಿ ಶಾಲಾ ವಾಹನದ ಮೇಲೆ ಬಿತ್ತು ಬೃಹತ್​ ಗಾತ್ರದ ಮರ

author img

By

Published : Aug 14, 2019, 11:48 AM IST

Updated : Aug 14, 2019, 11:56 AM IST

ಶಾಲಾ ವಾಹನದ ಮೇಲೆ ಬಿದ್ದ ಮರ

ಮಂಗಳೂರಿನಲ್ಲಿ ಶಾಲಾ ವಾಹನದ ಮೇಲೆ ಮರ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 17 ಮಕ್ಕಳು ಮತ್ತು ವಾಹನ ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಮಂಗಳೂರು: ಭಾರಿ ಮಳೆಗೆ ಮರವೊಂದು ಚಲಿಸುತ್ತಿದ್ದ ಶಾಲಾ ವಾಹನದ ಮೇಲೆ ಬಿದ್ದ ಘಟನೆ ನಂತೂರುನಲ್ಲಿ ನಡೆದಿದೆ.

ಅದೃಷ್ಟವಶಾತ್ ಶಾಲಾ ವಾಹನದಲ್ಲಿದ್ದ 17 ಮಕ್ಕಳು ಮತ್ತು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನ ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಪಂಪ್ ವೆಲ್ ದಾರಿಯಲ್ಲಿ ಕರೆದುಕೊಂಡು ಬರುತ್ತಿದ್ದ ವೇಳೆ ಹೆದ್ದಾರಿಯ ಪಕ್ಕದ ಗುಡ್ಡದ ಮೇಲಿಂದ ಒಂದು ಬೃಹತ್ ಮರ ಜಾರಿ ಬಿದ್ದಿದೆ. ಮರದ ರೆಂಬೆಗಳು ಶಾಲಾ ವಾಹನದ ಮೇಲೆ ಉರುಳಿ ಬಿದ್ದಿವೆ.

ಶಾಲಾ ವಾಹನದ ಮೇಲೆ ಬಿದ್ದ ಮರ

ಮರ ಪೂರ್ತಿ ವಾಹನದ ಮೇಲೆ ಬೀಳದ್ದಕ್ಕೆ ವಿದ್ಯಾರ್ಥಿಗಳೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಕೂಡಲೇ ಬಿದ್ದ ಮರವನ್ನು ಕಡಿದು ಸಂಚಾರ ವ್ಯವಸ್ಥೆ ಸುಗಮಗೊಳಿಸಲಾಯಿತು.‌ ಸ್ಥಳಕ್ಕೆ ಮಂಗಳೂರು ಡಿಸಿಪಿ ಲಕ್ಷ್ಮೀ ಗಣೇಶ್ ಭೇಟಿ ನೀಡಿ ಪರಿಶೀಲಿಸಿದರು.

Intro:ಮಂಗಳೂರು: ಮಂಗಳೂರಿನಲ್ಲಿ ಸುರಿಯುತ್ತಿರುವ ಮಳೆಗೆ ಮರವೊಂದು ಚಲಿಸುತ್ತಿದ್ದ ಶಾಲಾ ವಾಹನದ ಮೇಲೆ ಬಿದ್ದ ಘಟನೆ ಮಂಗಳೂರಿನ ನಂತೂರುನಲ್ಲಿ ನಡೆದಿದೆ.


Body:ಶಾಲಾ ವಾಹನದಲ್ಲಿ 17 ಶಾಲಾ ಮಕ್ಕಳು ಮತ್ತು ಚಾಲಕ ಇದ್ದು ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
ಮಂಗಳೂರಿನ ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಪಂಪ್ ವೆಲ್ ದಾರಿಯಲ್ಲಿ ಕರೆದುಕೊಂಡು ಬರುತ್ತಿದ್ದ ವೇಳೆ ಹೆದ್ದಾರಿಯ ಪಕ್ಕದಲ್ಲಿದ್ದ ಗುಡ್ಡದ ಮೇಲಿಂದ ಒಂದು ಬೃಹತ್ ಮರ ಜಾರಿ ಬಿದ್ದಿದ್ದು , ಅದರ ರೆಂಬೆಗಳು ಶಾಲಾ ವಾಹನದ ಮೇಲೆ ಬಿದ್ದಿದೆ. ಆದರೆ ಮರ ಪೂರ್ತಿ ವಾಹನದ ಮೇಲೆ ಬೀಳದ ಕಾರಣ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.
ಘಟನೆಯಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದ್ದು ಬಳಿಕ ನಂತೂರುನಿಂದ ಪಂಪ್ ವೆಲ್ ಹೋಗುವ ದಾರಿಯಲ್ಲಿ ಪಂಪ್ ವೆಲ್ ನಿಂದ ಬರುವ ವಾಹನಗಳಿಗೆ ವ್ಯವಸ್ಥೆ ಮಾಡಲಾಯಿತು. ಬಳಿಕ ಬಿದ್ದ ಮರವನ್ನು ಕಡಿದು ಸಂಚಾರ ವ್ಯವಸ್ಥೆ ಸುಗಮಗೊಳಿಸಲಾಯಿತು‌ ಸ್ಥಳಕ್ಕೆ ಮಂಗಳೂರು ಡಿಸಿಪಿ ಲಕ್ಷ್ಮೀ ಗಣೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
reporter- vinodpudu


Conclusion:
Last Updated :Aug 14, 2019, 11:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.