ETV Bharat / state

ಮಂಗಳೂರು ವಿಮಾನ‌ ನಿಲ್ದಾಣದಲ್ಲಿ ಸರಣಿ ದೀಪಾವಳಿ ಸಂಭ್ರಮ

author img

By

Published : Oct 18, 2022, 7:53 PM IST

ಮಂಗಳೂರು ವಿಮಾನ‌ ನಿಲ್ದಾಣ
ಮಂಗಳೂರು ವಿಮಾನ‌ ನಿಲ್ದಾಣ

ದೀಪಾವಳಿ ಆಚರಿಸಲು ಮಂಗಳೂರು ವಿಮಾನ ನಿಲ್ದಾಣವನ್ನು ದೀಪಗಳಿಂದ ಅಲಂಕರಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಈ ದೀಪಾವಳಿಯಲ್ಲಿ ವಿನೋದದಿಂದ ತುಂಬಿದ ಮತ್ತು ಸ್ಮರಣೀಯವಾಗಿಸಲು ವ್ಯವಸ್ಥೆ ಮಾಡಲಾಗಿದೆ.

ಮಂಗಳೂರು: ದೀಪಾವಳಿ‌ ಸಮೀಪಿಸುತ್ತಿದ್ದಂತೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಣಿ ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ. ದೀಪಾವಳಿ ಆಚರಿಸಲು ಮಂಗಳೂರು ವಿಮಾನ ನಿಲ್ದಾಣವನ್ನು ದೀಪಗಳಿಂದ ಅಲಂಕರಿಸಲಾಗಿದೆ. ಇಲ್ಲಿಂದ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಈ ದೀಪಾವಳಿಯಲ್ಲಿ ವಿನೋದದಿಂದ ತುಂಬಿದ ಮತ್ತು ಸ್ಮರಣೀಯವಾಗಿಸಲು ವ್ಯವಸ್ಥೆ ಮಾಡಲಾಗಿದೆ.

ದೀಪಾವಳಿಗಾಗಿ ಶಾಪಿಂಗ್ ಪ್ರಚಾರಗಳು, ಕಲಾತ್ಮಕವಾಗಿ ರಚಿಸಲಾದ ಸೆಲ್ಫಿ ಪಾಯಿಂಟ್‌ಗಳು, ಕ್ರಾಫ್ಟ್ ಕ್ಲಾಸ್‌ಗಳನ್ನು ಒಳಗೊಂಡಿರುವ ಚಟುವಟಿಕೆಗಳ ಸರಣಿಯನ್ನು ಅಕ್ಟೋಬರ್ 15 ರಿಂದ ಆರಂಭಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ದೀಪಾವಳಿ ಹಬ್ಬದ ಉತ್ಸಾಹ 2023 ರ ಹೊಸ ವರ್ಷದವರೆಗೆ ಮುಂದುವರಿಯಲಿದೆ.

ಮಂಗಳೂರು ವಿಮಾನ‌ ನಿಲ್ದಾಣ
ಮಂಗಳೂರು ವಿಮಾನ‌ ನಿಲ್ದಾಣ

ಅಕ್ಟೋಬರ್ 15 ರಿಂದ ಪ್ರಯಾಣಿಕರು ಮಂಗಳೂರು ವಿಮಾನ ನಿಲ್ದಾಣದಲ್ಲಿ 'ಸ್ಪಿನ್ ದಿ ವ್ಹೀಲ್' ಮಾಡುವ ಅವಕಾಶವನ್ನು ಪಡೆಯುತ್ತಿದ್ದಾರೆ. ಇದರಿಂದ ಈ ದೀಪಾವಳಿ ಪ್ರಚಾರದಲ್ಲಿ ಭಾಗವಹಿಸುವ ಆಯ್ದ ಚಿಲ್ಲರೆ ಮಳಿಗೆಗಳಿಂದ ಅತ್ಯಾಕರ್ಷಕ ಶಾಪಿಂಗ್ ಕೊಡುಗೆಗಳನ್ನು ಪಡೆಯುತ್ತಿದ್ದಾರೆ. ಚಿಲ್ಲರೆ ಮಳಿಗೆ ಅಥವಾ ಆಹಾರ ಮಳಿಗೆ ಮತ್ತು ಪಾನೀಯ ಮಳಿಗೆಗಳಲ್ಲಿ ಒಂದು ಗಂಟೆಯೊಳಗೆ ₹2500 ಕ್ಕಿಂತ ಹೆಚ್ಚು ಶಾಪಿಂಗ್ ಮಾಡುವ ಪ್ರಯಾಣಿಕರು ಸ್ಮರಣಿಕೆಗಳೊಂದಿಗೆ ಖಚಿತವಾದ ಉಡುಗೊರೆ ಚೀಲವನ್ನು ಪಡೆಯುತ್ತಿದ್ದಾರೆ.

ಈ ದೀಪಾವಳಿ ಕೊಡುಗೆಗಳು ಹೊಸ ವರ್ಷದವರೆಗೆ ಮುಂದುವರಿಯಲಿದ್ದು, ಜನವರಿ 10, 2023 ರಂದು ಕೊನೆಗೊಳ್ಳಲಿದೆ. MIA ಪ್ರಯಾಣಿಕರಿಗಾಗಿ ಅಕ್ಟೋಬರ್ 18 ರಿಂದ 22 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ಕ್ರಾಫ್ಟ್ ರಚನೆ‌ ಸ್ಪರ್ಧೆಯನ್ನಿಟ್ಟಿದೆ.

ಈಗಾಗಲೇ ವಿಮಾನ ನಿಲ್ದಾಣದಲ್ಲಿ ‘ಕಲ್ಪವೃಕ್ಷ’ದ ದೀಪಾಲಂಕಾರವು ವಿಮಾನ ನಿಲ್ದಾಣದಲ್ಲಿ ಹೊಸ ಸೆಲ್ಫಿ ಹಾಟ್‌ಸ್ಪಾಟ್ ಆಗಿ ಹೊರಹೊಮ್ಮಿದೆ. ವಿಮಾನ ನಿಲ್ದಾಣದ ದೀಪಾವಳಿ ಆಚರಣೆಯ ಶುಭ ಸಂದರ್ಭದಲ್ಲಿ ಟರ್ಮಿನಲ್ ಅನ್ನು ಸಹ ದೀಪಾಲಂಕಾರದಿಂದ ಬೆಳಗಿಸಲಾಗುತ್ತಿದೆ.

ಓದಿ: ಹಸಿರು ಪಟಾಕಿಗಷ್ಟೇ ಅವಕಾಶ: ಆದೇಶ ಮೀರಿದ್ರೆ ಮುಲಾಜಿಲ್ಲದೆ ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.