ETV Bharat / state

ಫೆ.10 ರಂದು ಸಮುದಾಯ ನಾಯಕರ ಜೊತೆಗೆ ಸಭೆ, ಬಳಿಕ ಮುಂದಿನ ನಿರ್ಧಾರ: ಜಯ ಮೃತ್ಯುಂಜಯ ಸ್ವಾಮೀಜಿ

author img

By

Published : Feb 6, 2021, 1:35 AM IST

ಜಯ ಮೃತ್ಯುಂಜಯ ಸ್ವಾಮೀಜಿ
ಜಯ ಮೃತ್ಯುಂಜಯ ಸ್ವಾಮೀಜಿ

ಫೆ.10 ರಂದು ತುಮಕೂರು ಶಿರಾ ಪಟ್ಟಣದಲ್ಲಿ ಎಲ್ಲ ಪಕ್ಷದ ಪಂಚಮಸಾಲಿ ಸಮುದಾಯದ ಹಾಲಿ, ಮಾಜಿ ಶಾಸಕರು, ಸಂಸದರು, ವಿಧಾನ ಪರಿಷತ್, ರಾಜ್ಯಸಭೆ ಸದಸ್ಯರ ಜೊತೆ ನಡೆಸಲಾಗುವುದು ಎಂದರು. ಸಭೆಯಲ್ಲಿ ಬೆಂಗಳೂರು ಸಮಾವೇಶ, ವಿಧಾನಸಭೆ ಮುತ್ತಿಗೆ ದಿನಾಂಕ ನಿಗದಿಪಡೆಸಲಾಗುವುದು ಎಂದು ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಚಿತ್ರದುರ್ಗ: ನಾವು ಸಿಎಂ ಹೇಳಿಕೆಯನ್ನ ಅಪಾರ್ಥ ಮಾಡಿಕೊಂಡಿಲ್ಲ. ಗೊಂದಲ ಸೃಷ್ಟಿಸುವ ಹೇಳಿಕೆ ಹಿನ್ನೆಲೆ ಹೋರಾಟ ತೀವ್ರಗೊಳಿಸಿದ್ದೇವೆ ಎಂದು ಪಂಚಮಸಾಲಿ ಪೀಠಾಧ್ಯಕ್ಷ ಜಯ ಬಸವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿಯಲ್ಲಿ ಪಂಚಮಸಾಲಿ ಶಾಸಕರು, ಮುಖಂಡರು ಜೊತೆಗೆ ಸಭೆ ಬಳಿಕ ಮಾತನಾಡಿದ ಶ್ರೀಗಳು, ಸದನದಲ್ಲಿ ಸಿಎಂ ಬಿಎಸ್‌ವೈ ಸಕಾರಾತ್ಮಕವಾದ ಹೇಳಿಕೆ ನಿರಾಸೆ ತಂದಿದೆ‌. ಅದಕ್ಕೆ ನಾವು ಆಕ್ರೋಶ ವ್ಯಕ್ತಪಡಿಸಿ ಹೋರಾಟ ತೀವ್ರಗೊಳಿಸಿದೇವೆ. ಫೆ.10 ರಂದು ತುಮಕೂರು ಶಿರಾ ಪಟ್ಟಣದಲ್ಲಿ ಎಲ್ಲ ಪಕ್ಷದ ಪಂಚಮಸಾಲಿ ಸಮುದಾಯದ ಹಾಲಿ, ಮಾಜಿ ಶಾಸಕರು, ಸಂಸದರು, ವಿಧಾನ ಪರಿಷತ್, ರಾಜ್ಯಸಭೆ ಸದಸ್ಯರ ಜೊತೆ ನಡೆಸಲಾಗುವುದು ಎಂದರು. ಸಭೆಯಲ್ಲಿ ಬೆಂಗಳೂರು ಸಮಾವೇಶ, ವಿಧಾನಸಭೆ ಮುತ್ತಿಗೆ ದಿನಾಂಕ ನಿಗದಿಪಡೆಸಲಾಗುವುದು ಎಂದು ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಇನ್ನು ಶೀಘ್ರವಾಗಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು. ಹಿಂದುಳಿದ ಆಯೋಗಕ್ಕೆ ಸಿಎಂ ಆದೇಶ ನೀಡಬೇಕು. ಪಾದಯಾತ್ರೆ ಸಿರಾ ಪಟ್ಟಣ ತಲುಪಿದ ಬಳಿಕ ಪಂಚಮಸಾಲಿ ಸಮುದಾಯದ ಎಲ್ಲ ನಾಯಕರೊಂದಿಗೆ ಸಭೆಯ ಮುಂದಿನ ನಡೆಗಳ ಕುರಿತಾಗಿ ಮಾಹಿತಿ ನೀಡುವುದಾಗಿ ಕೂಡಲಸಂಗಮ ಪೀಠಾಧ್ಯಕ್ಷ ಜಯ ಬಸವ ಮೃತ್ಯುಂಜಯ ಸ್ವಾಮೀಜಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.