ETV Bharat / state

ಮುಳ್ಳಯ್ಯನಗಿರಿಯಲ್ಲಿ ಅತಿ ಅಪರೂಪದ ಸಸ್ಯ ಪ್ರಭೇದ ಪತ್ತೆ

author img

By

Published : Feb 10, 2021, 5:41 PM IST

ಸಸ್ಯ ಪ್ರಭೇದ
ಸಸ್ಯ ಪ್ರಭೇದ

ಕನ್ನಡದಲ್ಲಿ ವೈಬಿಯಾ ಹಾಗೂ ಇಂಗ್ಲೀಷ್​​ನಲ್ಲಿ ಆರ್ಕಿಡೇಸಿ ಈ ಆರ್ಕೀಡ್ ಎಂದು ಕರೆಯಲ್ಪಡುವ ಸಸ್ಯ ಜಾತಿ ತುಂಬಾ ವಿರಳವಾಗಿ ಕಾಣಸಿಗುತ್ತವೆ. ಇಂತಹದ್ದೆ ಜಾತಿಗೆ ಸೇರಿದ ಸೇಡನ್ ಫಡೇನಿಯಲ್ಲಾ ಸೆಲಿಮಿ ಎಂಬ ಸಸ್ಯ ಮುಳ್ಳಯ್ಯನಗಿರಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.

ಚಿಕ್ಕಮಗಳೂರು: ಜಿಲ್ಲೆಯ ಚಂದ್ರದ್ರೋಣ ತಪ್ಪಲಿನಲ್ಲಿರುವ ಮುಳ್ಳಯ್ಯನಗಿರಿ ಅರಣ್ಯ ಪ್ರದೇಶದಲ್ಲಿ ಅಪರೂಪದಲ್ಲಿಯೇ ಅಪರೂಪದ ಸಸ್ಯ ಪ್ರಭೇದವೊಂದು ಪತ್ತೆಯಾಗಿದ್ದು, ಪರಿಸರ ಆಸಕ್ತರಲ್ಲಿ ಹೊಸ ಸಂಚಲನ ಮೂಡಿಸಿದೆ.

ಕನ್ನಡದಲ್ಲಿ ವೈಬಿಯಾ ಹಾಗೂ ಇಂಗ್ಲೀಷ್​​ನಲ್ಲಿ 'ಆರ್ಕಿಡೇಸಿ ಈ ಆರ್ಕೀಡ್' ಎಂದು ಕರೆಯಲ್ಪಡುವ ಸಸ್ಯ ಜಾತಿ ತುಂಬಾ ವಿರಳವಾಗಿ ಕಾಣಸಿಗುತ್ತವೆ. ಇಂತಹದ್ದೆ ಜಾತಿಗೆ ಸೇರಿದ ಸೇಡನ್ ಫಡೇನಿಯಲ್ಲಾ ಸೆಲಿಮಿ ಎಂಬ ಸಸ್ಯ ಮುಳ್ಳಯ್ಯನಗಿರಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಅರಣ್ಯ ಇಲಾಖೆಯಲ್ಲಿ ವಾಹನ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವ ಮಂಜುನಾಥ್ ಈ ಸಸ್ಯವನ್ನು ಪತ್ತೆ ಹಚ್ಚಿದ್ದಾರೆ.

very-rare-plant-species-found-in-mulliyanagiri
ಸೇಡನ್ ಫಡೇನಿಯಲ್ಲಾ ಸೆಲಿಮಿ
very-rare-plant-species-found-in-mulliyanagiri
ಮಂಜುನಾಥ್' ಈ ಸಸ್ಯವನ್ನು ಪತ್ತೆ ಹಚ್ಚಿದವರು

ಇದೇ ಸಸ್ಯ ಈ ಹಿಂದೆ ಕೇರಳದ ವಯನಾಡಿನಲ್ಲಿ ಪತ್ತೆಯಾಗಿತ್ತು. ಡಾ.ಕೆ.ವಿ ಜಾರ್ಜ್ ಎಮರಿಟ್ ಎಂಬ ವಿಜ್ಞಾನಿ ಕಂಡು ಹಿಡಿದಿದ್ದರು. ದಕ್ಷಿಣ ವಲಯದ ತೇವಾಂಶವುಳ್ಳ ಪ್ರದೇಶದಲ್ಲಿ ಈ ಸಸ್ಯ ಬೆಳೆಯುತ್ತದೆ. ಡಿಸೆಂಬರ್ ತಿಂಗಳಿನಲ್ಲಿ ಇದರ ಜನನವಾಗಿ ಫೆಬ್ರವರಿ ಅಂತ್ಯಕ್ಕೆ ಹೂ ಬಿಟ್ಟು ನಂತರ ಬಾಡಿ ಹೋಗುತ್ತದೆ. ಇದು ಅಪರೂಪದಲ್ಲಿಯೇ ಅಪರೂಪವಾಗಿದ್ದು, ತುಂಬಾ ವಿಶೇಷವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.