ETV Bharat / state

Video... ಚಿಕ್ಕಮಗಳೂರಲ್ಲಿ ಕತ್ತೆ ಹಾಲಿಗೆ ಹೆಚ್ಚಿದ ಡಿಮ್ಯಾಂಡ್​

author img

By

Published : Sep 29, 2021, 2:18 PM IST

Lot of people are buying donkey milk in Chikkamagaluru
ಚಿಕ್ಕಮಗಳೂರಲ್ಲಿ ಕತ್ತೆ ಹಾಲಿಗೆ ಹೆಚ್ಚಿದ ಡಿಮ್ಯಾಂಡ್​

ಚಿಕ್ಕಮಗಳೂರು ನಗರಕ್ಕೆ ಮಧ್ಯ ಭಾರತದಿಂದ ಕೆಲವು ಜನರು ಕತ್ತೆಗಳೊಂದಿಗೆ ಬಂದಿದ್ದು, ಕತ್ತೆ ಹಾಲನ್ನು ಮಕ್ಕಳಿಗೆ ಕುಡಿಸಿದರೆ ರೋಗ ನಿರೋಧಕ ಶಕ್ತಿಹೆಚ್ಚಾಗುತ್ತದೆ ಎಂಬ ಹಿನ್ನೆಲೆಯಲ್ಲಿ ನಗರದ ಜನತೆ ಅಧಿಕ ಸಂಖ್ಯೆಯಲ್ಲಿ ಹಾಲನ್ನು ಖದೀರಿಸುತ್ತಿದ್ದಾರೆ.

ಚಿಕ್ಕಮಗಳೂರು: ಕತ್ತೆ ಹಾಲನ್ನು ಮಕ್ಕಳಿಗೆ ಕುಡಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತಿದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಹಾಗಾಗಿ ಜಿಲ್ಲೆಯಲ್ಲಿ ಕತ್ತೆ ಹಾಲಿಗೆ ಬೇಡಿಕೆ ಹೆಚ್ಚಾಗಿದೆ.

ಚಿಕ್ಕಮಗಳೂರಲ್ಲಿ ಕತ್ತೆ ಹಾಲಿಗೆ ಹೆಚ್ಚಿದ ಡಿಮ್ಯಾಂಡ್​

ಮಧ್ಯ ಭಾರತದಿಂದ ಚಿಕ್ಕಮಗಳೂರಿಗೆ 20 ಜನರು ಬಂದಿದ್ದು, ಕತ್ತೆ ಹಾಲಿನ ಮಾರಾಟದಲ್ಲಿ ಫುಲ್​ ಬ್ಯುಸಿಯಾಗಿದ್ದಾರೆ. ಇವರು ನಗರದ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಗೆ ತೆರಳಿ ಕತ್ತೆ ಹಾಲಿನ ಮಹತ್ವದ ಬಗ್ಗೆ ಜನರಿಗೆ ತಿಳಿಸುತ್ತಿದ್ದಾರೆ. ಬೇಕಾದವರು ಸ್ಥಳದಲ್ಲೇ ಕತ್ತೆ ಹಾಲನ್ನು ಮಕ್ಕಳಿಗೆ ಕುಡಿಸುತ್ತಿದ್ದಾರೆ.

ಹಸು - ಎಮ್ಮೆ ಹಾಲಿಗೆ ಒಂದು ಲೀಟರ್​ಗೆ​​ ಡೈರಿಯಲ್ಲಿ 45 ರೂಪಾಯಿ ಇದೆ. ಆದರೆ, ಒಂದು ಒಳಲೆ ಕತ್ತೆ ಹಾಲಿಗೆ 50 ರೂಪಾಯಿ ಇದೆ. ಒಂದು ಲೀಟರ್​ಗೆ ಬರೋಬ್ಬರಿ 5 ಸಾವಿರ ರೂ ಆಗುತ್ತದೆ. ಹೆಚ್ಚಿನ ಬೆಲೆ ಇದ್ದರೂ ಜನರು ಬಿಡದೇ ಮಕ್ಕಳಿಗೆ ಹಾಲು ಕುಡಿಸುತ್ತಿದ್ದಾರೆ. ಒಂದು ದಿನಕ್ಕೆ ಇವರು 800- 1000 ರೂ. ಗಳವರೆಗೆ ಸಂಪಾದನೆ ಮಾಡುತ್ತಿದ್ದಾರೆ.

ಕೊರೊನಾ ಭಯ ಇರೋದ್ರಿಂದ ಕತ್ತೆ ಹಾಲಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಕತ್ತೆಗಳು ಅಂದ್ರೆ ಕೇರ್ ಮಾಡದ ಜನ, ಇದೀಗ ಕೈಗೆಟುಕದ ಕತ್ತೆ ಹಾಲಿಗೆ ಮುಗಿ ಬೀಳುತ್ತಿದ್ದಾರೆ.

ಇದನ್ನೂ ಓದಿ: ಗದಗ: 4 ವರ್ಷದ ಮಗುವಿನೊಂದಿಗೆ ನದಿಗೆ ಹಾರಿದ ತಾಯಿ: ಅಮ್ಮನ ಕೈಯಿಂದ ತಪ್ಪಿಸಿಕೊಂಡ ಇಬ್ಬರು ಮಕ್ಕಳು ಬಚಾವ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.