ETV Bharat / state

ರಾಜ್ಯಾಧ್ಯಕ್ಷ ಹುದ್ದೆಗೆ ರೇಸ್ ಎನ್ನುವಂತಹ ಕಾಂಪಿಟೇಶನ್ ಇಟ್ಟಿಲ್ಲ: ಮಾಜಿ ಶಾಸಕ ಸಿ ಟಿ ರವಿ

author img

By

Published : Aug 1, 2023, 11:56 AM IST

ಮಾಜಿ ಶಾಸಕ ಸಿ ಟಿ ರವಿ
ಮಾಜಿ ಶಾಸಕ ಸಿ ಟಿ ರವಿ

ಬಿಜೆಪಿಯಲ್ಲಿ ಯಾವ ಹುದ್ದೆಯೂ ಶಾಶ್ವತವಲ್ಲ, ಯಾವ ಹುದ್ದೆಗೆ ಯಾರೂ ಸೂಕ್ತ ಅನ್ನೋದನ್ನ ಪಕ್ಷ ನಿರ್ಧರಿಸುತ್ತೆ ಎಂದು ಸಿಟಿ ರವಿ ಹೇಳಿದ್ದಾರೆ.

ಚಿಕ್ಕಮಗಳೂರು: ರಾಜ್ಯಾಧ್ಯಕ್ಷ ಹುದ್ದೆಗೆ ರೇಸ್ ಅಂತ ಕಾಂಪಿಟೇಶನ್ ಇಟ್ಟಿಲ್ಲ. ರೇಸ್ ಪ್ರಶ್ನೆ ಇಲ್ಲ, ಕಾಂಪಿಟೇಶನ್ ಇದ್ದಾಗ ರೇಸ್‍ನಲ್ಲಿ ಇರಬೇಕಾಗುತ್ತೆ. ರೇಸ್‍ನಲ್ಲಿದ್ದಾರೆ ಎಂದು ಭಾವಿಸಬೇಡಿ, ನಾನು ರೇಸ್‍ನಲ್ಲಿ ಇಲ್ಲ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಶಾಸಕ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ. ನಮ್ಮ ಸಹಜ ಚಟುವಟಿಕೆಗಳನ್ನು ಕುತೂಹಲದ ರೀತಿ ತೋರಿಸುತ್ತೀರಾ, ನನಗದು ಇಷ್ಟವಿಲ್ಲ. ಅದೊಂದು ಜವಾಬ್ದಾರಿ ಅಷ್ಟೇ, ಅದನ್ನ ಯಾರೂ ಕೇಳಿ ಪಡೆಯಬಾರದು. ಯಾವಾಗ ಯಾರು ಸೂಕ್ತ ಅನ್ನೋದನ್ನ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.

ಬಿಜೆಪಿಯಲ್ಲಿ ಯಾವುದೂ ಶಾಶ್ವತವಲ್ಲ, ಯಾವಾಗ - ಯಾರೂ ಸೂಕ್ತ ಅನ್ನೋದನ್ನ ಪಕ್ಷ ನಿರ್ಧರಿಸುತ್ತೆ. ದೆಹಲಿ ಜವಾಬ್ದಾರಿ ಮುಗಿದಿದೆ, ಮೀಟಿಂಗ್ ಇದ್ದಾಗಷ್ಟೆ ದೆಹಲಿಯಲ್ಲಿ ಇರ್ತಿದ್ದೆ. ಉಳಿದಂತೆ ಪಕ್ಷ ಜವಾಬ್ದಾರಿ ನೀಡಿದ್ದ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಪಕ್ಷ ಮುಕ್ತನನ್ನಾಗಿಸಿದೆ. ದೆಹಲಿಯಲ್ಲಿ ಯಾವುದೇ ಕೆಲಸ ಇಲ್ಲ, ಆಫೀಸ್ ಕ್ಲೋಸ್ ಮಾಡೋದಷ್ಟೇ ಬಾಕಿ ಇದೆ ಎಂದು ಹೇಳಿದರು.

ಬೆಲೆ ಏರಿಕೆ- ರಾಜ್ಯ ಸರ್ಕಾರದ ವಿರುದ್ಧ ರವಿ ಟೀಕೆ: ಇದೇ ವೇಳೆ, ಬೆಲೆ ಏರಿಕೆ ಬಗ್ಗೆ ಮಾತನಾಡಿದ ಸಿಟಿ ರವಿ, ಹಾಲಿನ ದರ, ಅಬಕಾರಿ ಸುಂಕ ಏರಿಕೆ ಮಾಡಿದ್ದಾರೆ. ಹೋಟೆಲ್ ತಿಂಡಿ ದರ ಒಳಗೊಂಡಂತೆ ಏರಿಕೆ ಪರ್ವ ಕಾಣುತ್ತಿದೆ. ಬೆಲೆ ಏರಿಕೆಯ ಬರೇ ಎಳೆಯಿರಿ ಎಂದು ರಾಜ್ಯದ ಜನ ಅಧಿಕಾರ ಕೊಟ್ಟಿಲ್ಲ. ರಾಜ್ಯದ ಜನ ಅಧಿಕಾರ ಕೊಟ್ಟಿದ್ದು ನೀವು ಕೊಟ್ಟ ಗ್ಯಾರಂಟಿ ನಂಬಿ. ಬೆಲೆ ಏರಿಕೆಯ ಬರೇ ಎಳೆಯುತ್ತಾರೆ ಅಂತ ಯಾರು ಊಹಿಸಿರಲಿಲ್ಲ. ಚುನಾವಣೆ ವೇಳೆ ಅಮಿತ್ ಶಾ ಹೇಳಿಕೆಯನ್ನ ತಪ್ಪಾಗಿ ವ್ಯಾಪಕ ಪ್ರಚಾರ ಮಾಡಿದ್ರು. ಅಮುಲ್ ಮತ್ತು ನಂದಿನಿ ತಾಂತ್ರಿಕ ಸಹಕಾರ ಪಡೆದು ಕೆಲಸ ಮಾಡಬೇಕು.

ರೈತರಿಗೆ ಸಹಾಯ ಮಾಡುವ ಸದುದ್ದೇಶದಿಂದ ಅಮಿತ್ ಶಾ ಸಲಹೆ ನೀಡಿದ್ದರು. ಇಡೀ ರಾಜ್ಯದಲ್ಲಿ ತಪ್ಪು ಅರ್ಥ ಬರುವ ರೀತಿ ಬಿಂಬಿಸುವ ಕೆಲಸ ಮಾಡಿದ್ರು. ತಿರುಪತಿಗೆ ನಂದಿನಿ ತುಪ್ಪ 50 ವರ್ಷದಿಂದ ಸರಬರಾಜು ಆಗುತ್ತಿದೆ. ಚುನಾವಣೆ ಮುಗಿದ ಮೇಲೆ ತಿರುಪತಿಗೆ ನಂದಿನಿ ತುಪ್ಪ ಸರಬರಾಜು ನಿಲ್ಲಿಸಲಾಗಿದೆ ಎಂದು ಕೇಳಿ ದುಃಖವಾಗಿದೆ. ತಿರುಪತಿ ಪ್ರಸಾದದೊಂದಿಗೆ ನಮ್ಮ ರಾಜ್ಯದ ನಂದಿನಿ ತುಪ್ಪ ಸೇರುತ್ತೆ ಅನ್ನುವುದೇ ಹೆಮ್ಮೆ ಸಂಗತಿ.

ಪ್ರತಿಷ್ಠೆ ಬಿಟ್ಟು ಮಾತುಕತೆ ನಡೆಸಿ: ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ‌) ನಮ್ಮ ದೊಡ್ಡ ಕಸ್ಟಮರ್ ಅವರನ್ನು ಕಳೆದು ಕೊಳ್ಳಬಾರದು. ಕೆ.ಎಂ.ಎಫ್. ಅಧ್ಯಕ್ಷರು, ಸಹಕಾರ ಸಚಿವರು ಪ್ರತಿಷ್ಠೆ ಬಿಟ್ಟು ಮಾತನಾಡಬೇಕು. ಟಿಟಿಡಿ‌ ಜೊತೆ ಪ್ರತಿಷ್ಠೆ ಬಿಟ್ಟು ಮಾತನಾಡುವಂತೆ ಸಲಹೆ ನೀಡುತ್ತೇನೆ. 50 ವರ್ಷದ ವ್ಯವಹಾರಿಕ ಸಂಬಂಧವನ್ನು ಮುಂದುವರಿಸಬೇಕು. ಸಲಹೆ ಸ್ವೀಕಾರ ಮಾಡದೇ ಇದ್ರೆ ಹಾಲು ಉತ್ಪಾದಕರಿಗೆ ನಷ್ಟವಾಗುತ್ತೆ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಶಾಸಕ ಸಿ.ಟಿ. ರವಿ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸಿ ಟಿ ರವಿ ನೇಮಕಕ್ಕೆ ಹೈಕಮಾಂಡ್​ ನಿರ್ಧಾರ.. ಬೊಮ್ಮಾಯಿ ಪ್ರತಿಪಕ್ಷದ ನಾಯಕ?; ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.