ETV Bharat / state

ಅನವಶ್ಯಕವಾಗಿ ನಿಮ್ಮ ವಾಹನವನ್ನು ರಸ್ತೆಗಿಳಿಸಿದ್ರೇ ಬೀಳುತ್ತೆ ಭಾರೀ ದಂಡ!

author img

By

Published : May 8, 2021, 10:21 PM IST

210 Vehicles Sieged in chickmagaluru
ಅನವಶ್ಯಕವಾಗಿ ನಿಮ್ಮ ವಾಹನವನ್ನು ರಸ್ತೆಗಿಳಿಸಬೇಡಿ-ಬೀಳುತ್ತೆ ಭಾರೀ ದಂಡ!

42 ಪ್ರಕರಣ ಹಾಕಿ 45,000 ರೂಪಾಯಿ ದಂಡ ವಸೂಲಿ ಮಾಡಿದ್ದು, ಮಾಸ್ಕ್ ಹಾಕದ 300 ಜನರಿಂದ ₹30,000 ದಂಡ ವಸೂಲಿ ಮಾಡಿದ್ದಾರೆ. ಬೇಜವಾಬ್ದಾರಿ ತೋರುವ ಮುನ್ನ ಇರಲಿ ಎಚ್ಚರ ಎಂದು ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ..

ಚಿಕ್ಕಮಗಳೂರು : ಅನವಶ್ಯಕವಾಗಿ ನಿಮ್ಮ ವಾಹನವನ್ನು ರೋಡಿಗಿಳಿಸಿದ್ರೆ ಹುಷಾರ್, ಹುಷಾರ್ ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ನಿನ್ನೆ ಒಂದೇ ದಿನ 210 ವಾಹನಗಳನ್ನು ಸೀಜ್​ ಮಾಡಲಾಗಿದೆ.

ಪೊಲೀಸರು ವಶಕ್ಕೆ ಪಡೆದ ವಾಹನಗಳು

ಸಾಮಾಜಿಕ ಅಂತರ ಮರೆತ್ರೂ, ಮಾಸ್ಕ್ ಹಾಕದಿದ್ದರೂ ಬೀಳುತ್ತೆ ದಂಡ ಎಂದು ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಜಿಲ್ಲೆಯಲ್ಲಿ ಅನವಶ್ಯಕವಾಗಿ ರಸ್ತೆಗಿಳಿದ 210 ವಾಹನಗಳನ್ನು ಸೀಜ್ ಮಾಡಲಾಗಿದೆ.

ನಿನ್ನೆ ಒಂದೇ ದಿನ 210 ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದು, ಸಾಮಾಜಿಕ ಅಂತರ ಪಾಲಿಸದ ಅಂಗಡಿಗಳಿಗೂ ದಂಡವನ್ನು ವಿಧಿಸಿದ್ದಾರೆ.

ಇದನ್ನೂ ಓದಿ: ಅಥಣಿಯಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು: ಇನ್ನೂ ತಾಲೂಕಿನ ಕಡೆ ಮುಖ ಮಾಡದ ಜನಪ್ರತಿನಿಧಿಗಳು!

42 ಪ್ರಕರಣ ಹಾಕಿ 45,000 ರೂಪಾಯಿ ದಂಡ ವಸೂಲಿ ಮಾಡಿದ್ದು, ಮಾಸ್ಕ್ ಹಾಕದ 300 ಜನರಿಂದ ₹30,000 ದಂಡ ವಸೂಲಿ ಮಾಡಿದ್ದಾರೆ. ಬೇಜವಾಬ್ದಾರಿ ತೋರುವ ಮುನ್ನ ಇರಲಿ ಎಚ್ಚರ ಎಂದು ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.