ETV Bharat / state

ವ್ಯಾಪಾರದಲ್ಲಿ ಸೋತು ಸನ್ಯಾಸಿಯಾದವನ ಕೈ ಹಿಡಿದ ಕಡಕ್​​ನಾಥ್ ಕೋಳಿ!

author img

By

Published : Dec 9, 2020, 2:13 PM IST

kadaknath poultry farm
ಕಡಕ್​​ನಾಥ್ ಕೋಳಿ ಫಾರಂ

ಹಲವು ವ್ಯಾಪಾರ ಆರಂಭಿಸಿ ಕೈ ಸುಟ್ಟುಕೊಂಡು ಕೊನೆಗೆ ಜೀವನದಲ್ಲಿ ಜುಗುಪ್ಸೆಗೊಂಡ ಯುವಕನೊಬ್ಬ ಆಶ್ರಮ ಸೇರಿದ. ಆದರೆ ಕೊನೆಗೆ ಮನಸು ಬದಲಿಸಿ ಊರಿನ ದಾರಿ ಹಿಡಿದು ಪುನಃ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿ, ಕಡಕ್​ನಾಥ್​ ಕೋಳಿ ಸಾಕುವ ನಾಟಿ ಕೋಳಿ ಸಾಕುವುದರ ಮೂಲಕ ಬದುಕು ಬದಲಿಸಿಕೊಂಡಿದ್ದಾರೆ.

ಚಿಂತಾಮಣಿ: ಕಡಕ್​​ನಾಥ್ ನಾಟಿ ಕೋಳಿ ಸಾಕಾಣಿಕೆ ಮಾಡುತ್ತಿರುವ ಯುವಕನ ಹೆಸರು ವಿಜಯ್ ಕುಮಾರ್. ಚಿಂತಾಮಣಿ ತಾಲೂಕಿನ ಹಿರಣ್ಯಪಲ್ಲಿ ಗ್ರಾಮದ ನಿವಾಸಿ. ಎಂಜಿನಿಯರಿಂಗ್ ಪದವೀಧರರಾದ ಇವ್ರು ಟ್ರಾವಲ್ಸ್, ಚಿಟ್ ಫಂಡ್ ಹಾಗೂ ಫೈನಾನ್ಸ್ ವ್ಯಾಪಾರ ನಡೆಸಿ ನಷ್ಟ ಅನುಭವಿಸಿದ್ದರು. ಇಷ್ಟಕ್ಕೆ ಜೀವನವೇ ಮುಗಿದೇ ಹೋಯಿತು ಎಂದು ಜುಗುಪ್ಸೆಗೊಂಡು ಆಂಧ್ರದ ವಿಜಯವಾಡದಲ್ಲಿ ಆಶ್ರಮ ಸೇರಿಕೊಂಡಿದ್ದರು.

ಕಡಕ್​​ನಾಥ್ ಕೋಳಿ ಫಾರಂ

ಮೂರು ವರ್ಷಗಳ ಕಾಲ ಆಶ್ರಮದಲ್ಲಿದ್ದ ಇವರಿಗೆ ಮತ್ತೆ ಜೀವನದ ಮೇಲೆ ಪ್ರೀತಿ ಮೂಡಿ, ಹುಟ್ಟೂರಿಗೆ ವಾಪಸ್ಸಾಗಿದ್ದಾರೆ. ಹೀಗೆ ಬಂದವರು ತಮ್ಮಲ್ಲಿದ್ದ ಐದೆಕರೆ ಜಮೀನಿನಲ್ಲಿ ಫ್ರೆಂಡ್ಸ್ ಆರ್ಗಾನಿಕ್ ಫಾರ್ಮಿಂಗ್ ಹೆಸರಿನ ಕೋಳಿ ಫಾರಂ ಆರಂಭಿಸಿದ್ರು. ಇದೀಗ ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಧ್ಯಪ್ರದೇಶದಿಂದ ಕಪ್ಪುಬಣ್ಣದ ಕಡಕ್​ನಾಥ್ ಎಂಬ ನಾಟಿ ತಳಿಯ, ಹದಿನೈದು ಸಾವಿರ ಕೋಳಿ ಮರಿಗಳನ್ನು ತಂದು ಸಾಕಾಣಿಕೆ ಮಾಡುತ್ತಿದ್ದಾರೆ.

ಕಡಕನಾಥ್ ಕೋಳಿ ಕಪ್ಪು ಬಣ್ಣದಾಗಿದ್ದು, ಇದರ ಮಾಂಸ ಕೂಡ ಕಪ್ಪಗಿರುತ್ತೆ. ಈ ಕೋಳಿಮಾಂಸದಲ್ಲಿ ಕೊಬ್ಬಿನ ಪ್ರಮಾಣ ಕಡಿಮೆ ಇದ್ದು ದೇಹಕ್ಕೆ ಒಳ್ಳೆಯದು. ಇದರಲ್ಲಿ ಔಷಧೀಯ ಗುಣಗಳು ಹೇರಳವಾಗಿದ್ದು ನರಹೀನತೆ, ಪಾರ್ಶ್ವವಾಯು ವಾಯು ,ಬಿ.ಪಿ, ಶುಗರ್ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳಿರುವವರಿಗೆ ಇದು ಹೆಚ್ಚು ಸೂಕ್ತ. ಈ ಕಾರಣಕ್ಕೆ ಕಡಕ್​ನಾಥ್​ ಕೋಳಿಗೆ ಡಿಮ್ಯಾಂಡ್​ ಕೂಡ ಹೆಚ್ಚಿದೆ ಎಂತಾರೆ ವಿಜಯ್ ಕುಮಾರ್.

ವಿಜಯ್ ಕುಮಾರ್ ಈ ಕಡಕ್​ನಾಥ್​​​ ಕೋಳಿಗಳನ್ನು ಮಾಂಸ ಹಾಗೂ ಮೊಟ್ಟೆಗಳಿಗಾಗಿ ಸಾಕಾಣಿಕೆ ಮಾಡುತ್ತಿದ್ದಾರೆ. ಈಗಾಗಲೇ ತಮ್ಮಲ್ಲಿರುವ ಈ ಕೋಳಿಗಳಲ್ಲಿ ಸಾವಿರಾರು ಕೋಳಿಗಳನ್ನು ಮಾರಾಟ ಮಾಡಿ, ಉತ್ತಮ ಆದಾಯಗಳಿಸಿದ್ದಾರೆ. ಈ ಕೋಳಿಯ 1 ಕೆ.ಜಿ ಮಾಂಸ ಒಂದು ಸಾವಿರ ರೂಪಾಯಿಗೆ ಹಾಗೂ ಒಂದು ಮೊಟ್ಟೆ ಐವತ್ತು ರೂಪಾಯಿಂತೆ ಮಾರಾಟವಾಗುತ್ತಿದೆ. ಆರ್ಡರ್ ಕೊಟ್ಟರೆ ಪ್ರತಿ ಭಾನುವಾರ ಮತ್ತು ಮಂಗಳವಾರದಂದು ಮಾಂಸ ಮತ್ತು ಮೊಟ್ಟೆಗಳನ್ನು ಮನೆ ಬಾಗಿಲಿಗೆ ತಲುಪಿಸುವಂತಹ ವ್ಯವಸ್ಥೆಯನ್ನೂ ಇವರು ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.